ಬೆಳಗಾವಿ: 'ಉಚ್ಚ ನ್ಯಾಯಾಲಯ ನನಗೆ ಜಾಮೀನು ಮಂಜೂರು ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ನಾನು ನಿರಪರಾಧಿಯಾಗಿ ಹೊರಬರುತ್ತೇನೆ ಎನ್ನುವ ವಿಶ್ವಾಸ ಇದೆ' ಎಂದು ಮಾಜಿ ಸಚಿವ ಹೇಳಿದರು. ಶನಿವಾರ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. 'ನಾನು ಮತ್ತು ನನ್ನ ಕುಟುಂಬದವರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ನಮಗಾಗಿ ಅನೇಕ ಸ್ವಾಮೀಜಿಗಳು, ರಾಜಕೀಯ ಎಲ್ಲ ಮುಖಂಡರು, ನನ್ನ ಕ್ಷೇತ್ರದ ಜನರು, ಅಭಿಮಾನಿಗಳು ಸಾಕಷ್ಟು ಶ್ರಮಿಸಿದ್ದಾರೆ. ಅವರಿಗೆಲ್ಲ ನಾನು ಋಣಿಯಾಗಿರುತ್ತೇನೆ' ಎಂದರು. 'ನಾನು ಇಂದು ನಿನ್ನೆಯಿಂದ ರಾಜಕೀಯ ಮಾಡಿದವಲ್ಲ. ರೈತ ಕುಟುಂಬದಿಂದ, ವಿದ್ಯಾರ್ಥಿ ಜೀವನದಲ್ಲಿ ನಾಯಕನಾಗಿ ಹೋರಾಟ ಮಾಡಿಕೊಂಡು ಬಂದವನು. ಇದು ನನ್ನ ಕ್ಷೇತ್ರದ ಜನರಿಗೆ ಗೊತ್ತಿರುವ ವಿಷಯವಾಗಿದೆ. ನಾನು ನನ್ನ ಕ್ಷೇತ್ರದ ಜನ ನನ್ನ ನಂಬಿದ ಜನರಿಗೆ ನಾನು ಎಂದಿಗೂ ಚಿರ ಋಣಿಯಾಗಿರುತ್ತೇನೆ. ಎಂತಹ ಹೋರಾಟಕ್ಕೂ ನಾನು ಸಿದ್ಧನಾಗಿರುತ್ತೇನೆ' ಎಂದು ಹೇಳಿದರು. ಜೈಲಿನಲ್ಲಿದ್ದಾಗ ಕೆಲಸಗಳನ್ನು ನೀಡಿದ್ದರು. ಅವರ ಕಾಯ್ದೆ, ಕಾನೂನಿಗೆ ಅನುಗುಣವಾಗಿ ಇದ್ದೆ. ಸಾಕಷ್ಟು ವಿಚಾರ, ಓದುವುದು ಹಾಗೂ ಹಲವಾರು ಬದಲಾವಣೆ ಕಂಡುಕೊಂಡಿದ್ದೇನೆ. ಮುಂಬರುವ ದಿನಗಳಲ್ಲಿ ಯಾವ ರೀತಿ ಹೆಜ್ಜೆ ಇಡಬೇಕೆಂದು ಕಲಿತುಕೊಂಡಿದ್ದೇನೆ' ಎಂದರು. ರಾಜಕೀಯ ಜೀವನ ಬೇರೆ. ನನ್ನ ವೈಯಕ್ತಿಕ ಜೀವನ ಬೇರೆ. ಸಾಮಾನ್ಯ ಜನರು ಕೂಡ ನನಗೆ ಪ್ರೀತಿ ವಿಶ್ವಾಸದಿಂದ ನೋಡುತ್ತಾರೆ. ಅವರಿಗೆ ಎಂದೂ ನಾನು ಋಣಿಯಾಗಿದ್ದೇನೆ ಎಂದು ಹೇಳಿದರು. ಅಭಿಮಾನಿಗಳ ಸಂಭ್ರಮಕಾರಾಗೃಹದಿಂದ ಹೊರಬಂದ ವಿನಯ್ ಕುಲಕರ್ಣಿ ಅವರಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದರು. ಹಿಂಡಲಗಾ ಜೈಲಿನ ಆವರಣದಲ್ಲಿ ಬೆಳಿಗ್ಗೆಯಿಂದಲೇ ಗುಂಪುಗೂಡಿದ್ದ ಜನರು ಅವರನ್ನು ಸ್ವಾಗತಿಸಲು ಹೂವಿನ ಹಾರಗಳನ್ನು ಹಿಡಿದುಕೊಂಡು ಕಾದಿದ್ದರು. ಕೆಲವು ಅಭಿಮಾನಿಗಳು ಸೇಬುಹಣ್ಣಿನ ಹಾರಗಳನ್ನು ಹಾಕಿದರೆ, ಧಾರವಾಡ ಪೇಡ ಬಾಕ್ಸ್‌ಗಳನ್ನು ಹಂಚಿ ಸಂಭ್ರಮಿಸಿದರು. ಹುಬ್ಬಳ್ಳಿ-ಧಾರವಾಡ, ಸವದತ್ತಿ, ಬೆಳಗಾವಿ ತಾಲ್ಲೂಕುಗಳಿಂದ ಕೂಡ ಅಭಿಮಾನಿಗಳು ಆಗಮಿಸಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
from India & World News in Kannada | VK Polls https://ift.tt/3mlidtR