ದೇವರಾಜು ಅರಸು ಕಾಲದ ಭೂಸುಧಾರಣೆ ಕಾಯ್ದೆ ನಮಗೆಲ್ಲರಿಗೂ ಸ್ಫೂರ್ತಿದಾಯಕ, ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಾಲದಲ್ಲಿ ಜಾರಿಗೊಂಡಿರುವ ಭೂಸುಧಾರಣೆ ಕಾಯ್ದೆ ನಮಗೆಲ್ಲರಿಗೂ ಸ್ಫೂರ್ತಿದಾಯಕ ಎಂದು ಮುಖ್ಯಮಂತ್ರಿ ಹೇಳಿದರು. ದೇವರಾಜ ಅರಸು ಅವರ 106 ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಅವರ ಪ್ರತಿಯೊಂದು ಜನ್ಮ ದಿನಾಚರಣೆ ನಮಗೆ ಸ್ಫೂರ್ತಿ, ನಮ್ಮ ಬದ್ಧತೆಯನ್ನು ಪುನರುಚ್ಚಾರ ಮಾಡುವ ದಿನ ಎಂದರು. ಹಿಂದುಳಿದ ವರ್ಗಗಳ ಏಳಿಗೆ ಹಾಗೂ ಅವರ ಸ್ವಾಭಿಮಾನದ ಬದುಕಿಗಾಗಿ ಸರ್ಕಾರ ನಿತ್ಯ ಕೆಲಸ ಮಾಡಲಿದೆ. ಹಿಂದುವಳಿಗೆ ವರ್ಗಗಳ ಯುವಕರ ಶಿಕ್ಷಣ ಹಾಗೂ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಂಕಲ್ಪ ಮಾಡುವ ದಿನ ಇದಾಗಿದೆ ಎಂದು ತಿಳಿಸಿದರು. ದೇವರಾಜ ಅರಸು ಜಾರಿಗೊಳಿಸಿದ ಭೂಸುಧಾರಣಾ ಕಾಯ್ದೆ ನಮಗೆಲ್ಲರಿಗೂ ಅತ್ಯಂತ ಸ್ಫೂರ್ತಿದಾಯಕ. ಅರಸು ಅವರು ಹಲವಾರು ನಾಯಕರನ್ನು ಹುಟ್ಟಿಹಾಕಿ ಬೆಳಸಿದ್ದಾರೆ. ಕರ್ನಾಟಕದ ರಾಜಕಾರಣದಲ್ಲಿ ಅರಸು ಅವರದ್ದು ಅತ್ಯಂತ ಮಹತ್ವದ ಪಾತ್ರ. ಅವರ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸರ್ಕಾರ ಘೋಷಣೆ ಮಾಡಲಿದೆ ಎಂದರು. ದೇವರಾಜ ಅರಸು ಅವರು ಸರ್ವ ಸಮ್ಮತ ಹಾಗೂ ಎಲ್ಲರು ಒಪ್ಪುವ ನಾಯಕರು. ಕರ್ನಾಟಕದ ನಾಮಕರಣದಿಂದ ಹಿಡಿದು ಕರ್ನಾಟಕ ಕಟ್ಟುವಲ್ಲಿ ಅವರ ಪಾತ್ರ ಮಹತ್ವವಿದೆ ಎಂದು ತಿಳಿಸಿದರು.


from India & World News in Kannada | VK Polls https://ift.tt/3AO9iVI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...