ಇನ್ನೂ 30 ವರ್ಷ ಕೊರೊನಾ ಇರಲಿದೆ: ಮದ್ದೂರಿನಲ್ಲಿ ಬ್ರಹ್ಮಾಂಡ ಗುರೂಜಿ ಭವಿಷ್ಯ..!

(): ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ವೈರಸ್‌ 30 ವರ್ಷ ಭೂ ಮಂಡಲದಲ್ಲಿ ಇರುತ್ತದೆ ಎಂದು ನರೇಂದ್ರ ಬಾಲಾಜಿ ಶರ್ಮ ಭವಿಷ್ಯ ನುಡಿದಿದ್ದಾರೆ. ಜಿಲ್ಲೆ ಮದ್ದೂರು ಪಟ್ಟಣದ ವಿಶ್ವೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಅವರು, ಪುರೋಹಿತ ರಾಘವೇಂದ್ರ ರಾವ್‌ ಅವರ ನಿವಾಸಕ್ಕೆ ತೆರಳಿ ಅಭಿನಂದನೆ ಸ್ವೀಕರಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಗುರೂಜಿ ಮಾತನಾಡಿದರು. 'ಎರಡು ವರ್ಷ ಕೊರೊನಾ ಜಾಗೃತಿಯನ್ನು ಪ್ರತಿಯೊಬ್ಬರೂ ವಹಿಸಬೇಕು. ನಂತರದ ದಿನಗಳಲ್ಲಿ ಕೊರೊನಾ ಸಾಮಾನ್ಯ ಜ್ವರದಂತೆ 30 ವರ್ಷ ನಮ್ಮೊಂದಿಗೆ ಉಳಿದುಕೊಳ್ಳಲಿದೆ' ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ. 'ಮನುಷ್ಯ ದುರಹಂಕಾರ, ದುರಾಸೆ, ಸ್ವಾರ್ಥವನ್ನು ಬಿಟ್ಟು ಒಳ್ಳೆಯ ಕೆಲಸ ಮಾಡಲು ಮುಂದಾಗಬೇಕು. ದೇವರನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದಾಗ ಮಾತ್ರ ಎಲ್ಲರಿಗೂ ಒಳ್ಳೆಯದಾಗುತ್ತೆ. ಮಹಾಮಾರಿ ನಿರ್ನಾಮವಾಗುತ್ತದೆ' ಎಂದು ಬ್ರಹ್ಮಾಂಡ ಗುರೂಜಿ ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಮದ್ದೂರಿನ ಸತ್ಯನಾರಾಯಣ ರಾವ್‌, ನಾಗಭೂಷಣ್‌, ಪ್ರಕಾಶ್‌ ಮತ್ತಿತರರು ಉಪಸ್ಥಿತರಿದ್ದರು.


from India & World News in Kannada | VK Polls https://ift.tt/3k9EJ5W

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...