ಮಸ್ಕಿ: ಪಟ್ಟಣದ ಕನಕ ವೃತ್ತದ ಖಾಸಗಿ ಪೆಟ್ರೋಲ್ ಬಂಕ್‌ವೊಂದರಲ್ಲಿ ವಾಹನಗಳಿಗೆ ಡೀಸೆಲ್ ಹಾಕುವ ಸಂದರ್ಭದಲ್ಲಿ ನೀರು ಬೆರಿಸಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಪೆಟ್ರೋಲ್ ಬಂಕ್‌ನಲ್ಲಿ ಪಾಮನಕಲ್ಲೂರು ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯವರು ಸೇರಿದಂತೆ ಸ್ಥಳೀಯರು 1 ಲಾರಿ, 3 ಟ್ರ್ಯಾಕ್ಟರ್ ಹಾಗೂ 1 ಟಾಟಾ ಏಸ್ ವಾಹನಕ್ಕೆ ಬೆಳಗ್ಗೆ 6ರ ಸುಮಾರಿಗೆ ಡೀಸೆಲ್ ಹಾಕಿಸಿಕೊಂಡಿದ್ದಾರೆ. ಡೀಸೆಲ್ ಹಾಕಿಸಿಕೊಂಡು ಅರ್ಧ ಕಿ.ಮೀ ಚಲಿಸಿದ ನಂತರ ವಾಹನ ಬಂದಾಗಿದೆ. ಇನ್ನು ಲಾರಿಯೊಂದು ಹತ್ತು ಲೀಟರ್ ಡೀಸೆಲ್ ಹಾಕಿದರೂ ಸ್ಟಾರ್ಟ್ ಆಗಿರಲಿಲ್ಲ. ಹೀಗಾಗಿ ಚಾಲಕರು ಮೆಕ್ಯಾನಿಕ್ ಅವರನ್ನು ಸಂಪರ್ಕಿಸಿದಾಗ ಕಲಬೆರಿಕೆಯಾಗಿರುವುದು ಗೊತ್ತಾಗಿದೆ. ಎಚ್ಛೆತ್ತ ಗ್ರಾಹಕರು ಪೆಟ್ರೋಲ್ ಬಂಕ್ ಬಂದ್ ಮಾಡಿ ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದಾರೆ. ನಂತರ ವಾಹನಗಳಲ್ಲಿರುವ ಡಿಸೇಲ್ ಹೊರತೆಗೆದು ಹೊಸ ಫಿಲ್ಟರ್ ಅಳವಡಿಸಿದರು. ಘಟನೆ ನೋಡಿ ಇಂಧನ ತುಂಬಿಸಿಕೊಳ್ಳಲು ಬಂದ ಗ್ರಾಹಕರು ತಬ್ಬಿಬ್ಬಾಗಿ ಅಧಿಕಾರಿಗಳು ಕಾಲ ಕಾಲಕ್ಕೆ ಬಂಕ್‌ಗೆ ಭೇಟಿ ನೀಡಿ ಪರೀಕ್ಷೆ ಮಾಡಬೇಕು. ಗ್ರಾಹಕರಿಗೆ ಆಗುವ ಮೋಸವನ್ನು ತಪ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ಇನ್ನು ವಾಹನಗಳಿಂದ ಡೀಸೆಲ್ ಹರ ತೆಗೆದಾಗ ಶೇಕಡಾ 60 ರಷ್ಟು ನೀರೇ ತುಂಬಿತ್ತು.
from India & World News in Kannada | VK Polls https://ift.tt/2LgSYbi