ರೈತರ ಟ್ರ್ಯಾಕ್ಟರ್‌ ರ‍್ಯಾಲಿ: ಹಿಂಸಾಚಾರದ ಹಿಂದೆ ಗ್ಯಾಂಗ್‌ಸ್ಟರ್‌‌ ಕೈವಾಡ, 15 FIR ದಾಖಲು?

ಹೊಸದಿಲ್ಲಿ: ಜನವರಿ 26ರಂದು ನಡೆದ ವೇಳೆಗಿನ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬರುತ್ತಿದೆ. ಹಿಂಸಾಚಾರದ ಹಿಂದೆ ಗ್ಯಾಂಗ್‌ಸ್ಟರ್‌ವೊಬ್ಬನ ಕೈವಾಡವಿರುವುದು ದಿಲ್ಲಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ಈ ಸಂಬಂಧ ಸಂಶಯ ವ್ಯಕ್ತಪಡಿಸಿದ್ದಾರೆ. ಗ್ಯಾಂಗ್‌ಸ್ಟಾರ್‌ ಆಗಿದ್ದ ಸಾಮಾಜಿಕ ಕಾರ್ಯಕರ್ತ ಲಖಾ ಸಿದ್ಧನಾ ಕೈವಾಡ ಹಿಂಸಾಚಾರದಲ್ಲಿ ಭಾಗಿಯಾಗಿರುವುದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕಳೆದ ನವೆಂಬರ್‌ನಿಂದ ದಿಲ್ಲಿಯ ಸಿಂಘು ಗಡಿಯಲ್ಲಿ ಲಖಾ ಸಿದ್ಧನಾ ಕೆಲವು ರೈತರೊಂದಿಗೆ ಪ್ರತಿಭಟನೆಯಲ್ಲಿ ತೊಡಗಿದ್ದ, ಏಕಾಏಕಿ ಪ್ರತಿಭಟನೆಯಲ್ಲಿ ತೊಡಗಿರುವ ಹಿಂದೆ ಗೂಢಾಲೋಚನೆ ಇತ್ತು ಎನ್ನಲಾಗಿದೆ. ಲಖಾ ಸಿದ್ಧನಾ ವಿರುದ್ಧ ಈಗಾಗಲೇ ಗ್ಯಾಂಗ್‌ಸ್ಟರ್‌ ಆಕ್ಟ್‌ ಮೇಲೆ ದೂರು ದಾಖಲಾಗಿದಲ್ಲದೆ ಹಲವಾರು ಕ್ರಿಮಿನಲ್‌ ಕೇಸ್‌ಗಳು ದಾಖಲಾಗಿದೆ. ಸದ್ಯ ಈತನ ವಿರುದ್ಧ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈತ ಕೂಡ ಟ್ರ್ಯಾಕ್ಟರ್ ರ‍್ಯಾಲಿಗೆ ರೈತರನ್ನು ಸೇರಿಸಿಕೊಂಡಿದ್ದ. ಇನ್ನು ಕೇಂದ್ರ ದಿಲ್ಲಿಯಲ್ಲಿ ಹಿಂಸಾಚಾರ ನಡೆಯುವಾಗ ಬಳಕೆಯಾಗಿದ್ದ ಫೋನ್‌, ಸಿಸಿಟಿವಿ ದೃಶ್ಯಾವಳಿಗಳು, ಇದಕ್ಕೂ ಮುನ್ನ ರೈತ ನಾಯಕರು ನೀಡಿರುವ ಭಾಷಣಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ. 15 ಎಫ್‌ಐಆರ್‌ ದಾಖಲು!ಇನ್ನು ಮಂಗಳವಾರ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಹದಿನೈದು ಎಫ್‌ಐಆರ್‌ ವಿವಿಧ ದಿಲ್ಲಿ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದೆ. ಹಲವರನ್ನು ಅರೆಸ್ಟ್‌ ಕೂಡ ಮಾಡಲಾಗಿದೆ. ಹಿಂಸಾಚಾರ, ಸಾರ್ವಜನಿಕ ಆಸ್ತಿ, ಪಿತೂರಿ, ಹಿಂಸಾಚಾರಕ್ಕೆ ಕುಮ್ಮಕ್ಕು ಸೇರಿ ಹಲವು ಸೆಕ್ಷನ್‌ಗಳನ್ನು ಹಾಕಲಾಗಿದೆ. ಇನ್ನು ಪೊಲೀಸರು ಹಾಗೂ ರೈತರ ನಡುವೆ ನಡೆದ ಘರ್ಷಣೆಯಲ್ಲಿ 86 ಪೊಲೀಸರು ಗಾಯಗೊಂಡಿದ್ದಾರೆ.


from India & World News in Kannada | VK Polls https://ift.tt/36egb5I

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...