ಬೆಂಗಳೂರು: ಮೆಡಿಕಲ್‌ ಸೀಟ್‌ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ..!

ಬೆಂಗಳೂರು: ನಗರದ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಮಗಳಿಗೆ ಮೆಡಿಕಲ್‌ ಸೀಟ್‌ ಕೊಡಿಸುವುದಾಗಿ ನಂಬಿಸಿ, ಮೂರು ಮಂದಿ ಆರೋಪಿಗಳು ನಾಲ್ಕು ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು 51 ವರ್ಷದ ಮಹಿಳೆಯೊಬ್ಬರು ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೆಡಿಕಲ್‌ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿರುವ ಕುರಿತು ಕಳೆದ ಒಂದು ವಾರದಲ್ಲಿ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಎರಡನೇ ಪ್ರಕರಣ ಇದಾಗಿದೆ. ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳು, ತಮ್ಮ ಮಗನಿಗೆ ಮೆಡಿಕಲ್‌ ಸೀಟ್‌ ಕೊಡಿಸುವುದಾಗಿ ನಂಬಿಸಿ 10.5 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಮೈಸೂರು ಮೂಲದ ಮಹಿಳೆಯೊಬ್ಬರು ಜ.19ರಂದು ದೂರು ದಾಖಲಿಸಿದ್ದರು. ಕಳೆದ ಡಿ.21ರಂದು ಪ್ರತೀಕ್ಷಾ ಎಂಬ ಹೆಸರಿನಲ್ಲಿ ಮಹಿಳೆಯೊಬ್ಬಳು ಕರೆ ಮಾಡಿ, ‘ನಾವು ಕನ್ಸಲ್ಟೆನ್ಸಿ ನಡೆಸುತ್ತಿದ್ದು, ವಿದ್ಯಾರ್ಥಿಗಳು ಮೆಡಿಕಲ್‌ ಸೀಟ್‌ ಪಡೆಯುವ ನಿಟ್ಟಿನಲ್ಲಿ ಸಹಾಯ ಮಾಡುತ್ತೇವೆ' ಎಂದು ತಿಳಿಸಿದಳು. ನಾನು ಮತ್ತು ನನ್ನ ಪತಿ ರಬೀಂದ್ರ ಆಚಾರಿ ಅಶೋಕನಗರದಲ್ಲಿರುವ ಅವರ ಕಚೇರಿಗೆ ಭೇಟಿ ನೀಡಿದೆವು. ಈ ವೇಳೆ ಭರತ್‌ ಮತ್ತು ಕಿಶೋರ್‌ ಎಂಬ ಇಬ್ಬರು ಸಹೋದ್ಯೋಗಿಗಳನ್ನು ಪ್ರತೀಕ್ಷಾ ಪರಿಚಯಿಸಿದಳು. ಈ ವೇಳೆ ಅಂತಿಮವಾಗಿ 81 ಲಕ್ಷ ರೂ.ಗಳಿಗೆ ನಗರದ ವೈದ್ಯಕೀಯ ಕಾಲೇಜಿನಲ್ಲಿ ಸೀಟ್‌ ಕೊಡಿಸುವುದಾಗಿ ಮೂವರು ಭರವಸೆ ನೀಡಿದರು’ ಎಂದು ದೂರಿನಲ್ಲಿ ಪೂರ್ಣಿಮಾ ವಿವರಿಸಿದ್ದಾರೆ. ‘ವಿವಿಧ ಕಂತುಗಳಲ್ಲಿ 81 ಲಕ್ಷ ರೂ.ಗಳನ್ನು ನಾಲ್ಕು ವರ್ಷ ಪಾವತಿಸಬಹುದು. ಆದರೆ ನೋಂದಣಿ ಮತ್ತು ಇತರ ಶುಲ್ಕಗಳಿಗಾಗಿ ಮುಂಗಡವಾಗಿ 4 ಲಕ್ಷ ರೂ. ಪಾವತಿಸಬೇಕಾಗುತ್ತದೆ ಎಂದು ಮೂವರು ಹೇಳಿದರು. ನಾವು ಅವರ ಮಾತನ್ನು ನಂಬಿ ಮುಂಗಡವಾಗಿ 4 ಲಕ್ಷ ರೂ. ಪಾವತಿಸಿದೆವು. ಈ ಪೈಕಿ 2 ಲಕ್ಷ ರೂ. ನಗದು ಮತ್ತು 2 ಲಕ್ಷ ರೂ. ಚೆಕ್‌ ರೂಪದಲ್ಲಿ ನೀಡಿದೆವು. ಕಾಲೇಜಿಗೆ ದಾಖಲಿಸುವ ನಿಟ್ಟಿನಲ್ಲಿನಮ್ಮ ಬಳಿ ವಿವರಗಳನ್ನು ಪಡೆದ ಮೂವರು, ಜ.18ರಂದು ಕರೆ ಮಾಡಲು ತಿಳಿಸಿದರು. ಅದರಂತೆ ಅಂದು ಕರೆ ಮಾಡಿದರೆ ಮೊಬೈಲ್‌ ಸ್ವಿಚ್‌ ಆಫ್‌ ಬರುತ್ತಿತ್ತು. ಅವರ ಕಚೇರಿ ಬಳಿ ಹೋಗಿ ನೋಡಿದರೆ, ಕಚೇರಿ ಖಾಲಿ ಮಾಡಿ ಅವರು ಪರಾರಿಯಾಗಿದ್ದರು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ‘ಎರಡು ಪ್ರಕರಣದಲ್ಲಿ ಒಂದೇ ಗ್ಯಾಂಗ್‌ ವಂಚನೆ ಮಾಡಿರುವ ಶಂಕೆ ದಟ್ಟವಾಗಿದೆ. ವೆಬ್‌ಸೈಟ್‌ಗಳ ಮೂಲಕ ವಿದ್ಯಾರ್ಥಿಗಳ ಕುರಿತು ಮಾಹಿತಿ ಪಡೆಯುವ ವಂಚಕರು, ಅವರ ಪೋಷಕರಿಗೆ ಕರೆ ಮಾಡಿ ವಂಚಿಸಿದ್ದಾರೆ. ಆರೋಪಿಗಳ ಕುರಿತು ಖಚಿತ ಮಾಹಿತಿ ಇದ್ದು, ಶೀಘ್ರದಲ್ಲೇ ವಂಚಕರನ್ನು ಬಂಧಿಸುತ್ತೇವೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌.ಅನುಚೇತ್‌ ತಿಳಿಸಿದರು.


from India & World News in Kannada | VK Polls https://ift.tt/2NufTkD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...