ಬೆಂಗಳೂರು: ವಿಧಾನ ಪರಿಷತ್ನ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು ಮೊಬೈಲ್ನಲ್ಲಿ ನೀಲಿ ಚಿತ್ರ ವೀಕ್ಷಿಸಿದರು ಎನ್ನುವುದು ಚರ್ಚೆಗೆ ಕಾರಣವಾಗಿದೆ. ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ರಾಥೋಡ್ 'ಆ ರೀತಿ ಯಾವುದೇ ದೃಶ್ಯಾವಳಿ ನೋಡಿಲ್ಲ. ಮೊಬೈಲ್ ಡೇಟಾ ಓವರ್ ಲೋಡ್ ಆಗಿದ್ದರಿಂದ ಡಿಲೀಟ್ ಮಾಡುತ್ತಿದ್ದೆ ಅಷ್ಟೆ ಎಂದಿದ್ದಾರೆ. ರಾಥೋಡ್ ಅವರ ಮೊಬೈಲ್ನಲ್ಲಿ ಅಶ್ಲೀಲ ಚಿತ್ರ ಇರುವುದನ್ನು ಕೆಲವು ಖಾಸಗಿ ವಾಹಿನಿಗಳ ಕ್ಯಾಮೆರಾಮನ್ಗಳು ಸೆರೆ ಹಿಡಿದಿದ್ದಾರೆ. ಅದರಲ್ಲಿ ರಾಥೋಡ್ ಕೆಲ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಡಿಲೀಟ್ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ''ನಾನು ಯಾವುದೇ ನೀಲಿ ಚಿತ್ರ ವೀಕ್ಷಿಸಿಲ್ಲ. ನನಗೆ ಬೇಕಾಗಿರುವ ಮಾಹಿತಿ ಹುಡುಕುತ್ತಿದ್ದೆ. ಮುಂದಿನ ಪ್ರಶ್ನೆ ನನ್ನದೇ ಇತ್ತು. ಅದು ಮೊಬೈಲ್ನಲ್ಲಿ ಸ್ಟೋರ್ ಆಗಿತ್ತು. ಆದರೆ ಮೊಬೈಲ್ನಲ್ಲಿ ಮೆಸೇಜ್ಗಳು ಜಾಸ್ತಿ ಇದ್ದವು. ಓವರ್ ಲೋಡ್ ಆಗಿದ್ರಿಂದ ಅದನ್ನು ಡಿಲೀಟ್ ಮಾಡುತ್ತಿದ್ದೆ,'' ಎಂದರು. ನಾನು ಸಾಮಾನ್ಯವಾಗಿ ಸದನದಲ್ಲಿ ಮೊಬೈಲ್ ನೋಡುವುದೇ ಇಲ್ಲ. ಆದರೆ ಪ್ರಶ್ನೆಯ ವಿವರ ಮೊಬೈಲ್ನಲ್ಲಿ ಇದ್ದುದರಿಂದ ಅದನ್ನು ಹುಡುತ್ತಿದ್ದೆ ಅಷ್ಟೆ, ಎಂದು ರಾಠೋಡ್ ಸ್ಪಷ್ಟನೆ ನೀಡಿದ್ದಾರೆ. ನೀವು ಆರೋಪಿಸಿರುವಂತೆ ನೀಲಿ ಚಿತ್ರ ನೋಡಿರಲು ಸಾಧ್ಯವೇ ಇಲ್ಲ. ಸಾವಿರಾರು ಮೆಸೇಜ್ಗಳು ಬರುತ್ತವೆ, ದಿನವೂ ನೋಡುವುದಿಲ್ಲ. ಎಷ್ಟೋ ಮೆಸೇಜ್ ನೋಡದೆ ಡಿಲೀಟ್ ಮಾಡ್ತೀನಿ. ಯಾರಾದರೂ ಮಿಸ್ಟೇಕ್ ಆಗಿ ಬೇರೆ ಚಿತ್ರಗಳನ್ನು ಕಳಿಸಿರಬಹುದು. ಒಂದು ವೇಳೆ ಕಳಿಸಿದ್ದರೂ ನಾನು ನೋಡುವುದಿಲ್ಲ, ತಕ್ಷಣವೇ ಡಿಲೀಟ್ ಮಾಡ್ತೀನಿ. ಆಕಸ್ಮಿಕವಾಗಿ ಬಂದಿದ್ದರೆ ನಾನೇನು ಮಾಡಲು ಸಾಧ್ಯ?,'' ಎಂದು ರಾಥೋಡ್ ಹೇಳಿದ್ದಾರೆ.
from India & World News in Kannada | VK Polls https://ift.tt/3aca9no