5 ಸಾವಿರ ವರ್ಷಗಳ ಕಾಲ ಶೋಷಣೆ ಮಾಡಿದ್ದು ಸಾಕಾಗಿಲ್ಲವೇ?; ಶರಣ ಪ್ರಕಾಶ ಪಾಟೀಲ

ಕಲಬುರಗಿ: 5 ಸಾವಿರ ವರ್ಷಗಳ ಕಾಲ ಶೋಷಣೆ ಮಾಡಿದ್ದು ಸಾಕಾಗಿಲ್ಲವೇ ನಿಮಗೆ? ಇನ್ನೆಷ್ಟು ದಿನ ಶೋಷಣೆ ಮಾಡ್ತೀರಿ. ಮೀಸಲಾತಿ ಮುಂದುವರಿಸಿಕೊಂಡು ಬರುತ್ತಿರುವ ನೋವಿನಿಂದಲೇ ಸಂವಿಧಾನ ಬದಲಾವಣೆಗೆಗಾಗಿ ದೇಶದಲ್ಲಿ 2014ಕ್ಕೆ ಅಧಿಕಾರಕ್ಕೆ ಬಂದು ಕುಳಿತಿರುವುದು ಗೊತ್ತಿದೆ. ಆದರೆ, ಅದು ಸಾಧ್ಯವಿಲ್ಲಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು. ಕಲಬುರಗಿಯಲ್ಲಿ ನಡೆದ ಭೀಮಾ ಕೋರೆಗಾಂವ್‌ ವಿಜಯೋತ್ಸವ ಪ್ರಯುಕ್ತ ದಲಿತರ ಸ್ವಾಭಿಮಾನ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇದೆಲ್ಲವೂ ಯಾರ ಅಜೆಂಡಾ ಎನ್ನುವುದು ಜನರಿಗೆ ಗೊತ್ತಿದೆ. ಪದೇ ಪದೇ ನೀವು ಮಾಡುವ ದುಸ್ಸಾಹವೂ ಗೊತ್ತಿದೆ. ಆದ್ದರಿಂದ ಎಚ್ಚೆತ್ತುಕೊಂಡು ನಡೆಬೇಕಿದೆ. ಖರ್ಗೆ ಅವರಂತಹವರು ಪುನಃ ಬರುವುದಿಲ್ಲ. ವಿದ್ಯಾವಂತ, ಶೋಷಣೆ ಮುಕ್ತ ಮತ್ತು ದೂರದೃಷ್ಟಿ ಇರುವ ಸಮಾಜ ಕಟ್ಟಬೇಕು ಎಂದರು. ತಳಸಮುದಾಯದವರಿಗೆ ಅಧಿಕಾರ ಸಿಗಲಿ ಐದು ಸಾವಿರ ವರ್ಷಗಳ ಕಾಲ ದಲಿತರ, ಹಿಂದುಳಿದ ವರ್ಗಗಳ ಮೇಲೆ ಮಾಡಿರುವ ಶೋಷಣೆ ಮಾಡಿದ್ದು ಸಾಕಾಗಿಲ್ಲ. ಇದರಿಂದಾಗಿ ಮೀಸಲಾತಿ ಕೊನೆಗೊಳಿಸಲು ಕಾಲ ಪಕ್ವ ಮಾಡಿಕೊಳ್ಳುತ್ತಿರುವ ದಿನಗಳು ಇವು. ಇವುಗಳನ್ನು ಅಂಬೇಡ್ಕರ್‌ ಅವರು ದೊರಕಿಸಿ ಕೊಟ್ಟ ಮತಾಧಿಕಾರದಿಂದ ನಾವಾಗಿಯೇ ತಂದು ಕೊಂಡಿದ್ದಕ್ಕೆ ಶುಕ್ರವಾರ ಸಂಜೆ ನಡೆದ ಭೀಮಾ ಕೋರೆಗಾಂವ್‌ ವಿಜಯೋತ್ಸವ ದಲಿತರ ಸ್ವಾಭಿಮಾನ ಜಾಗೃತಿ ದಿನ ಬೃಹತ್‌ ಸಮಾವೇಶ ಚಿಂತಿಸಿತು. ಇಂತಹ ಪ್ರಜಾಪ್ರಭುತ್ವದ ಸೋಗಿನ ದಾಳಿಗಳಿಗೆ ಎದೆ ಕೊಡಲು, ಸಜ್ಜಾಗಲು ನಮ್ಮ ಮುಂದಿನ ಪೀಳಿಗೆಯನ್ನು ನಾವು ತಯಾರು ಮಾಡಬೇಕು. ಅಲ್ಲದೆ, ಸಂವಿಧಾನ ರಕ್ಷಣೆ ಮಾಡುವಂತಹ ಜನಪ್ರತಿನಿಧಿಗಳು ಹಾಗೂ ಪಕ್ಷಗಳನ್ನು ಅಧಿಕಾರಕ್ಕೆ ತರಬೇಕಿದೆ. ತಳವರ್ಗಕ್ಕೆ ಮತ್ತು ದಲಿತರಿಗೆ ಅಧಿಕಾರ ಸಿಗುವಂತೆ ಮಾಡುವಲ್ಲಿ ನಾವು ಹೋರಾಟ, ಜಾಗೃತಿ ಮಾಡಬೇಕು ಎಂದು ಕರೆ ನೀಡಲಾಯಿತು.


from India & World News in Kannada | VK Polls https://ift.tt/3o8VSxo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...