ಹೊನ್ನಾಳಿ: ಗಮನ ಬೇರೆಡೆ ಸೆಳೆದು ₹4.85 ಲಕ್ಷ ನಗದು ದೋಚಿ ಪರಾರಿಯಾದ ದುಷ್ಕರ್ಮಿಗಳು..!

ಹೊನ್ನಾಳಿ: ಪಟ್ಟಣದ ಕೆನರಾ ಬ್ಯಾಂಕಿನಿಂದ ಬುಧವಾರ ಹಣ ಬಿಡಿಸಿಕೊಂಡು ತೆರಳುತ್ತಿದ್ದ ವ್ಯಕ್ತಿಯೊಬ್ಬರ ಗಮನವನ್ನು ಬೇರೆಡೆ ಸೆಳೆದ ದುಷ್ಕರ್ಮಿಗಳು 4.85 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ. ತಾಲೂಕಿನ ಘಂಟ್ಯಾಪುರ ಗ್ರಾಮದ ಮೆಕ್ಕೆಜೋಳದ ವ್ಯಾಪಾರಿ ಚಂದ್ರನಾಯ್ಕ ಬುಧವಾರ ಮಧ್ಯಾಹ್ನ 3.45ರ ಸುಮಾರಿಗೆ ಕೆನರಾ ಬ್ಯಾಂಕಿನಲ್ಲಿ ಹಣ ಬಿಡಿಸಿಕೊಂಡು ಬೈಕಿನಲ್ಲಿ ತೆರಳುವ ವೇಳೆ ಈ ಘಟನೆ ನಡೆದಿದೆ. ಚಂದ್ರನಾಯ್ಕ ಬ್ಯಾಂಕಿನಲ್ಲಿ ಪಡೆದುಕೊಂಡ ಹಣ ತೆಗೆದುಕೊಂಡು ತನ್ನ ಬೈಕ್‌ ಬಳಿ ಬಂದ ವೇಳೆ ದುಷ್ಕರ್ಮಿಗಳು 500 ರೂ.ಗಳ ನೋಟೊಂದನ್ನು ಕೆಳಗೆ ಬೀಳಿಸಿ ‘ನಿಮ್ಮ ಹಣ ಕೆಳಗೆ ಬಿದ್ದಿದೆ ನೋಡಿ’ ಎಂದು ಹೇಳಿದ್ದಾರೆ. ಆ ಹಣವನ್ನು ತೆಗೆದುಕೊಳ್ಳಲು ಚಂದ್ರನಾಯ್ಕ ನೆಲದ ಕಡೆ ಗಮನ ಹರಿಸುತ್ತಿದ್ದಂತೆ ಬೈಕಿನ ಪೆಟ್ರೋಲ್‌ ಟ್ಯಾಂಕ್‌ ಮೇಲೆ ಇರಿಸಿದ್ದ 4.85 ಲಕ್ಷ ರೂ. ಹಣದ ಬ್ಯಾಗನ್ನು ಎಗರಿಸಿ ಪರಾರಿಯಾಗಿದ್ದಾರೆ. ಇಬ್ಬರೂ ದುಷ್ಕರ್ಮಿಗಳು ಹೆಲ್ಮೆಟ್‌ ಹಾಗೂ ಮಾಸ್ಕ್‌ ಧರಿಸಿದ್ದರು ಎನ್ನಲಾಗಿದೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ಬ್ಯಾಂಕ್‌ ಅಥವಾ ಎಟಿಎಂನಲ್ಲಿ ಹಣ ಪಡೆಯುವಾಗ ಹಾಗೂ ಜಮಾ ಮಾಡಲು ತೆರಳುವಾಗ ಎಚ್ಚರಿಕೆ ವಹಿಸಬೇಕು ಎಂದು ಸಿಪಿಐ ಟಿ.ವಿ. ದೇವರಾಜ್‌ ತಿಳಿಸಿದ್ದಾರೆ.


from India & World News in Kannada | VK Polls https://ift.tt/2NNhiTJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...