ಶುಕ್ರವಾರದಿಂದ ಕೊರೊನಾ ಕಾಲದ ಮೊದಲ ಬಜೆಟ್ ಅಧಿವೇಶನ: ಹೇಗರಿಲಿದೆ ಕಲಾಪ?

ಹೊಸದಿಲ್ಲಿ: ಕೊರೊನಾ ಹಾವಳಿ ನಡುವೆ ಕೇಂದ್ರದ ಬಜೆಟ್ ಅಧಿವೇಶನ ಇಂದಿನಿಂದ(ಜ.29-ಶುಕ್ರವಾರ) ಆರಂಭವಾಗಲಿದ್ದು, ವಿಶೇಷ ಕಲಾಪದ ಎಲ್ಲಾ ಸಿದ್ಧತೆಗಳೂ ಪೂರ್ಣಗೊಂಡಿವೆ. ಫೆ.1ರಂದು ಮಂಡನೆಯಾಗಲಿದ್ದು, ಏಪ್ರಿಲ್ ಮೊದಲ ವಾರದವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಮೊದಲಿಗೆ ಸಂಸತ್ತಿನ ಮೂರು ಪ್ರತ್ಯೇಖ ಸ್ಥಳಗಳಲ್ಲಿ ಕುಳಿತುಕೊಳ್ಳಲಿರುವ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಭಾಷಣ ಮಾಡಲಿದ್ದಾರೆ. ಬಳಿಕ ಬಜೆಟ್ ಅಧಿವೇಶನಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಆದರೆ ಕೃಷಿ ಕಾಯ್ದೆ ಜಾರಿ ವಿರೋಧಿಸಿ ಈ ಬಾರಿ ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಲು 17 ಪ್ರಮುಖ ವಿರೋಧ ಪಕ್ಷಗಳು ನಿರ್ಧರಿಸಿವೆ. ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪರಿ ವೆಂಕಯ್ಯ ನಾಯ್ಡು ಸೇರಿದಂತೆ ರಾಜ್ಯಸಭಾ ಸಚಿವಾಲಯದ ಒಟ್ಟು 1,200 ಜನರನ್ನು ಕೋವಿಡ್ ಪರೀಕ್ಷೆಗೆ ಗುರಿಪಡಿಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಕಲಾಪದ ರೂಪುರೇಷೆಗಳು ಬದಲಾಗಿದ್ದು, ಸದಸ್ಯರ ಆಸನ ವ್ಯವಸ್ಥೆಯಿಂದ ಹಿಡಿದು ಕಲಾಪ ನಡೆಸುವ ವಿಧಾನದಲ್ಲೂ ಬದಲಾವಣೆ ಮಾಡಲಾಗಿದೆ . ಮಾನ್ಸೂನ್ ಅಧಿವೇಶನ ಬಳಿಕ ಇದೇ ಮೊದಲ ಬಾರಿಗೆ ಸಂಸತ್ ಕಲಾಪ ನಡೆಯುತ್ತಿದ್ದು, ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಲಾಗಿತ್ತು. ಈ ಬಾರಿಯ ಬಜೆಟ್ ಅಧಿವೇಶನ ಭಾರೀ ಗದ್ದಲಗಳಿಗೆ ಸಾಕ್ಷಿಯಾಗಲಿದೆ ಎಂದೂ ನಿರೀಕ್ಷಿಸಲಾಗಿದೆ. ಪ್ರಮುಖವಾಅಗಿ ಕೃಷಿ ಕಾಯ್ದೆ ಜಾರಿ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನೇ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಳ್ಳಲು ವಿಪಕ್ಷಗಳು ಸಿದ್ಧತೆ ನಡೆಸಿವೆ. ಅದರಂತೆ ವಿಪಕ್ಷಗಳ ಈ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದು ಸರ್ಕಾರಕ್ಕೆ ಸವಾಲಾಗಿದ್ದು, ಕೊರೊನಾ ಕಾಲದ ಬಜೆಟ್ ಕುರಿತು ಜನರ ನಿರೀಕ್ಷೆಗಳನ್ನು ಪೂರ್ಣಗೊಳಿಸುವ ಜವಾಬ್ದಾರಿಯೂ ಸರ್ಕಾರದ ಹೆಗಲ ಮೇಲಿದೆ.


from India & World News in Kannada | VK Polls https://ift.tt/3iVaQpb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...