
ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS) ನೋಡುವ ಕನಸು ಯಾರಿಗಿಲ್ಲ ಹೇಳಿ? ಭೂಮಿಯ ನೈಜ ಸೌಂದರ್ಯದ ಸೊಬಗನ್ನು ಸವಿಯಲು ಐಎಸ್‌ಎಸ್‌ಗಿಂತಲೂ ಸೂಕ್ತವಾದ ಜಾಗ ಮತ್ತೊಂದಿಲ್ಲ. ತೇಲುವ ನಿಲ್ದಾಣ ಎಂದೇ ಖ್ಯಾತಿ ಪಡೆದಿರುವ ಐಎಸ್‌ಎಸ್ ಪ್ರವೇಶಿಸಲು, ವಿವಿಧ ಅಂತಾರಾಷ್ಟ್ರೀಯ ಖಗೋಳ ಸಂಸ್ಥೆಗಳ ಗಗನಯಾತ್ರಿಗಳಿಗೆ ಮಾತ್ರ ಅವಕಾಶ. ಆದರೆ ಇದೀಗ ಐಎಸ್‌ಎಸ್‌ಗೆ ಖಾಸಗಿ ಪ್ರವಾಸ ಕೈಗೊಳ್ಳಲು ಅನುಮತಿ ನೀಡಲಾಗಿದ್ದು, ಇದೇ ಮೊದಲ ಬಾರಿಗೆ ಮೂವರು ಪ್ರವಾಸಿಗರನ್ನು 8 ದಿನಗಳ ಕಾಲ ಐಎಸ್‌ಸ್‌ಗೆ ಕರೆದೊಯ್ಯುವ ಯೋಜನೆಗೆ ಚಾಳನೆ ನೀಡಲಾಗಿದೆ. ಹೌದು, ಅಮೆರಿಕದ ನಾಲ್ವರು ಆಗರ್ಭ ಶ್ರೀಮಂತರು ಕೈಗೊಳ್ಳುತ್ತಿದ್ದು, ಇದಕ್ಕಾಗಿ ತಲಾ 55 ಮಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡಲು ಸಿದ್ಧರಾಗಿದ್ದಾರೆ. ಲ್ಯಾರಿ ಕಾನ್ನರ್, ಮಾರ್ಕ್ ಪ್ಯಾಥಿ, ಐಟನ್ ಸ್ಟಿಬ್ಬೆ ಎಂಬ ಉದ್ಯಮಿಗಳು, ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ 2022ರವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲಿದ್ದಾರೆ. ಇವರನ್ನು ನಾಸಾದ ಮಾಜಿ ಗಗನಯಾತ್ರಿ ಕಮಾಂಡರ್ ಮೈಕೆಲ್ ಲೋಪೆಜ್-ಅಲೆಗ್ರಿಯಾ ಐಎಸ್‌ಎಸ್‌ಗೆ ಕರೆದೊಯ್ಯಲಿದ್ದು, ಇವರೆಲ್ಲಾ ಬರೋಬ್ಬರಿ ಎಂಟು ದಿನಗಳ ಕಾಲ ಐಎಸ್‌ಎಸ್‌ನಲ್ಲಿ ತಂಗಲಿದ್ದಾರೆ. ಕೆನಡಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಈ ನಾಲ್ವರನ್ನು ಹೊತ್ತ ಡ್ರ್ಯಾಗನ್ ಬಾಹ್ಯಾಕಾಶ ನೌಕೆ, ಐಎಸ್ಎಸ್‌ಗೆ ಪ್ರಯಾಣ ಬೆಳೆಸಲಿದೆ. ಐಎಸ್‌ಎಸ್‌ಗೆ ವಿಶ್ವದ ಮೊಟ್ಟ ಮೊದಲ ಖಾಸಗಿ ಪ್ರವಾಸಕ್ಕೆ ಅನುಮತಿ ನೀಡಿರುವುದು ಕುತೂಹಲ ಕೆರಳಿಸಿದೆ. Axiom Space ಎಂಬ ಖಾಸಗಿ ಸಂಸ್ಥೆ ಈ ಪ್ರವಾಸದ ಉಸ್ತುವಾರಿವಹಿಸಿದ್ದು, ಖಗೋಳಾಸಕ್ತ ಶ್ರೀಮಂತರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದುಕೊಂಡು ಹೋಗುವ ಯೋಜನೆ ರೂಪಿಸಿದೆ.
from India & World News in Kannada | VK Polls https://ift.tt/2NH6cj1