: ವಿವಿಧೆಡೆ ಅಡಕೆ ಕಳ್ಳತನ ಮಾಡಿದ ಆರೋಪದ ಮೇಲೆ ಮೂವರನ್ನು ಬಂಧಿಸಿರುವ ಶಿವಮೊಗ್ಗ ಪೊಲೀಸರು ಆರೋಪಿಗಳಿಂದ 4.25 ಲಕ್ಷ ರೂಪಾಯಿ ಮೌಲ್ಯದ 1 ಟನ್ ಅಡಿಕೆಯನ್ನು ವಶಕ್ಕೆ ಪಡೆದಿದ್ದಾರೆ. ತುಂಗಾ ನಗರದ ತೌಸಿಫ್ ಉಲ್ಲಾ(23), ಆರ್.ಎಂ.ಎಲ್. ನಗರ ನಿವಾಸಿಗಳಾದ ಮಹಪೂಜ್(23) ಮತ್ತು ಅಜೀಜ್ ಉಲ್ಲಾಖಾನ್(24) ಬಂಧಿತ ಆರೋಪಿಗಳಾಗಿದ್ದು, ಕೃತ್ಯಕ್ಕೆ ಉಪಯೋಗಿಸಿದ 1 ರೆನಾಲ್ಟ್ ಡಸ್ಟರ್ ಕಾರು, 1 ಸ್ಕೂಟಿ ಮತ್ತು 1 ಪಲ್ಸರ್ ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದ ತುಂಗಾನಗರ ಪೊಲೀಸ್ ಠಾಣೆಯಲ್ಲಿ 2021ನೇ ಸಾಲಿನ 3 ಹಾಗೂ 2020ನೇ ಸಾಲಿನ 2 ಅಡಕೆ ಕಳ್ಳತನ ಪ್ರಕರಣಗಳನ್ನು ಭೇದಿಸಿದಂತಾಗಿದೆ. ಹೆಚ್ಚುವರಿ ಎಸ್ಪಿ ಎಚ್.ಟಿ.ಶೇಖರ್, ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ ಮಾರ್ಗದರ್ಶನದಲ್ಲಿ ತುಂಗಾನಗರ ಸಿಪಿಐ ಎಂ.ಎಸ್. ದೀಪಕ್ ನೇತೃತ್ವದಲ್ಲಿ ಪಿಎಸ್ಐ ತಿರುಮಲೇಶ್, ಜಿ.ಆರ್.ನಾರಾಯಣ್, ಸಿಬ್ಬಂದಿ ಸೈಯದ್ ಇಮ್ರಾನ್, ರಾಜು, ಗುರುನಾಯಕ್, ಲಂಕೇಶ್ ಕುಮಾರ್, ಅರುಣ್ ಕುಮಾರ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.
from India & World News in Kannada | VK Polls https://ift.tt/2M8S95e