ಋಷಿಕೇಶ್: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಆಗಬೇಕೆಂಬ ಸಮಸ್ತ ಭಾರತೀಯರ ಕನಸು ನನಸಾಗುವ ಶುಭ ಘಳಿಗೆ ಹತ್ತಿರವಾಗುತ್ತಿದೆ. ಈಗಾಗಲೇ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಪ್ರಧಾನಿ ಮೋದಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದ್ದು, ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡಲು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಕೂಡ ದೇಶಾದ್ಯಂತ ದೇಣಿಗೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ದೇಶದ ಹಲವು ಗಣ್ಯರು ಹಾಗೂ ಜನಸಾಮಾನ್ಯರು ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆಯನ್ನು ನೀಡಿದ್ದಾರೆ. ಅದರಂತೆ ಕಳೆದ 60 ವರ್ಷಗಳಿಂದ ಗುಹೆಯಲ್ಲಿ ವಾಸಿಸುತ್ತಿರುವ ಋಷಿಕೇಶ್‌ದ ಸನ್ಯಾಸಿಯೋರ್ವರು, ರಾಮ ಮಂದಿರ ನಿರ್ಮಾಣಕ್ಕಾಗಿ ಬರೀಬ್ಬರಿ 1 ಕೋಟಿ ರೂ. ಚೆಕ್ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹೌದು, ಋಷಿಕೇಶ್‌ದ ರಾಮ ಮಂದಿರ ನಿರ್ಮಾಣಕ್ಕಾಗಿ ಬರೋಬ್ಬರಿ 1 ಕೋಟಿ ರೂ. ದೇಣಿಗೆ ನೀಡಿ ದೇಶದ ಗಮನ ಸೆಳೆದಿದ್ದಾರೆ. 1 ಕೋಟಿ ರೂ. ಚೆಕ್‌ನ್ನು ಸ್ವಾಮಿ ಶಂಕರ್ ದಾಸ್ , ಋಷಿಕೇಶ್‌ದ ಸ್ಟೇಟ್ ಬ್ಯಾಂಕ್ ಇಂಡಿಯಾ (SBI) ಶಾಖೆಗೆ ತಂದೊಪ್ಪಿಸಿದ್ದಾರೆ. ಸ್ವಾಮಿ ಶಂಕರ್ ದಾಸ್ ಹೇಳುವ ಪ್ರಕಾರ ಅವರ ಗುರು ಟಾಟ್ ವಾಲೆ ಬಾಬಾ ಅವರ ಗುಹೆಯಲ್ಲಿ ಭಕ್ತರು ನೀಡಿದ ದೇಣಿಗೆಯನ್ನು ಸಂಗ್ರಹಿಸಿ ಅದನ್ನು ಚೆಕ್ ರೂಪದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನೀಡಲಾಗಿದೆ. ಸ್ವಾಂಇ ಶಂಕರ್ ದಾಸ್ ನೀಡಿದ ಚೆಕ್ ನೋಡಿ ಆಶ್ಚರ್ಯಚಕಿತರಾದ ಎಸ್‌ಬಿಐ ಸಿಬ್ಬಂದಿ, ಚೆಕ್‌ನ್ನು ಪರಿಶೀಲನೆಗೊಳಪಡಿಸಿದಾಗ ಅಕೌಂಟ್‌ನಲ್ಲಿ ಒಂದು ಕೋಟಿ ರೂ. ಇರುವುದು ನಿಜವೆಂದು ಸಾಬೀತಾಗಿದೆ. ಕೂಡಲೇ ರಾಮ ಮಂದಿರ ನಿರ್ಮಾಣದ ದೇಣಿಗೆ ಉಸ್ತುವಾಋಇ ವಹಿಸಿಕೊಂಡಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ಬನ ಸದಸ್ಯರನ್ನು ಸಂಪರ್ಕಿಸಿದ ಎಸ್‌ಬಿಐ ಸಿಬ್ಬಂದಿ, ಚೆಕ್‌ನ ಹಣವನ್ನು ಟ್ರಸ್ಟ್‌ಗೆ ಹಸ್ತಾಂತರಿಸುವ ವ್ಯವಸ್ಥೆ ಮಾಡಿದ್ದಾರೆ. ಸ್ವಾಮಿ ಶಂಕರ್ ದಾಸ್ ಅವರ ರಾಮ ಭಕ್ತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಮಂದಿರ ನಿರ್ಮಾಣಕ್ಕಾಗಿ ಅವರು ನೀಡಿರುವ ಒಂದು ಕೋಟಿ ರೂ. ದೇಣಿಗೆಯನ್ನು ವಿನ್ರಮವಾಗಿ ಸ್ವೀಕರಿಸಲಾಗಿದೆ ಎಂದು ಟ್ರಸ್ಟ್ ಸದಸ್ಯರು ಹೇಳಿದ್ದಾರೆ.
from India & World News in Kannada | VK Polls https://ift.tt/2YvAF5z