ಅಕ್ರಮವಾಗಿ ರೈಲ್ವೆ ಇ-ಟಿಕೆಟ್‌ ಮಾರಾಟ; 10 ಮಂದಿ ಬಂಧನ, ₹7.70 ಲಕ್ಷ ಮೌಲ್ಯದ ಟಿಕೆಟ್ ಜಪ್ತಿ

: ವೈಯಕ್ತಿಕ ಬಳಕೆಯ ‘ಐಆರ್‌ಸಿಟಿಸಿ’ ಅಕೌಂಟ್‌ಗಳ ಮೂಲಕ ಅಕ್ರಮವಾಗಿ ತತ್ಕಾಲ್‌ ಸೇರಿದಂತೆ ಇನ್ನಿತರ ರೈಲ್ವೆ ಇ-ಟಿಕೆಟ್‌ಗಳನ್ನು ಬುಕ್‌ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಟ್ರಾವೆಲ್ಸ್‌ ಕಚೇರಿಗಳ ಮೇಲೆ ರೈಲ್ವೆ ಭದ್ರತಾ ದಳ (ಆರ್‌ಪಿಎಫ್‌) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಧಿಕಾರಿಗಳು, 7.70 ಲಕ್ಷ ರೂ. ಮೌಲ್ಯದ ಇ- ಟಿಕೆಟ್‌ಗಳನ್ನು ಜಪ್ತಿ ಮಾಡಿ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೆಂಗೇರಿ, ಚಿಕ್ಕಪೇಟೆ, ಮಾಗಡಿ ರಸ್ತೆ, ತಾವರೆಕೆರೆ, ರಾಮನಗರ, ರಾಮಮೂರ್ತಿನಗರ ಸೇರಿದಂತೆ ಹತ್ತು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಟಿಕೆಟ್‌ ಬುಕ್ಕಿಂಗ್‌ಗೆ ಬಳಸುತ್ತಿದ್ದ ವೈಯಕ್ತಿಕ ಬಳಕೆಯ 27 ಐಆರ್‌ಸಿಟಿಸಿ ಖಾತೆಗಳನ್ನು ಪತ್ತೆ ಮಾಡಲಾಗಿದೆ. ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡು ಕ್ರಿಮಿನಲ್‌ ಕೇಸ್‌ಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಲಸಿಗರು, ಕಾರ್ಮಿಕರು, ಬಸ್‌ ನಿಲ್ದಾಣ, ರೈಲು ನಿಲ್ದಾಣಗಳ ಬಳಿ ಅಕ್ರಮ ಟಿಕೆಟ್‌ಗಳ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಇತ್ತು. ಅದರ ಜತೆಗೆ ವೈಯಕ್ತಿಕ ಬಳಕೆಯ ಖಾತೆಗಳನ್ನು ಬಳಸಿಕೊಂಡು ವಾಣಿಜ್ಯ ಬಳಕೆಯಂತೆ ಟಿಕೆಟ್‌ ಬುಕ್ಕಿಂಗ್‌ ಮಾಡುತ್ತಿರುವ ಕುರಿತು ಆರ್‌ಪಿಎಫ್‌ನ ಸೈಬರ್‌ ಸೆಲ್‌ ವಿಭಾಗ ಮಾಹಿತಿ ಕಲೆ ಹಾಕಿ ಜ.27ರಂದು ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಹತ್ತು ಯಶಸ್ವಿ ದಾಳಿ ನಡೆಸಿರುವುದು ಇದೇ ಮೊದಲು ಎಂದು ಆರ್‌ಪಿಎಫ್‌ ಅಧಿಕಾರಿ ತಿಳಿಸಿದರು. ಅಧಿಕೃತವಾಗಿ ಪರವಾನಗಿ ಪಡೆದು ಏಜೆಂಟ್‌ಗಳಾಗಿ ಟಿಕೆಟ್‌ ಮಾರಬಹುದು. ಆದರೆ, ಒಂದು ಟಿಕೆಟ್‌ ಮೇಲೆ 100 ರೂ.ನಿಂದ ಸಾವಿರಾರು ರೂ. ಲಾಭಕ್ಕಾಗಿ ಆರೋಪಿಗಳು ಅಕ್ರಮ ದಂಧೆಯಲ್ಲಿ ತೊಡಗಿದ್ದರು ಎಂದು ಆರ್‌ಪಿಎಫ್‌ ಅಧಿಕಾರಿ ತಿಳಿಸಿದರು. ದೀರ್ಘಾವಧಿ ಪ್ರಯಾಣ ಮತ್ತು ತುರ್ತಾಗಿ ಪ್ರಯಾಣ ಬೆಳೆಸುವವರಿಗೆ ರೈಲ್ವೆ ಟಿಕೆಟ್‌ ಬೇಕಾಗುತ್ತದೆ. ಅಂತಹ ಪ್ರಯಾಣಿಕರಿಗೆ ಆರೋಪಿಗಳು ಅಕ್ರಮವಾಗಿ ಟಿಕೆಟ್‌ ಮಾಡಿಸಿಕೊಡುತ್ತಿದ್ದರು. ತತ್ಕಾಲ್‌ ಟಿಕೆಟ್‌ಗಳ ದರಕ್ಕಿಂತ ದುಪ್ಪಟ್ಟು ಹಣ ಪಡೆಯುತ್ತಿದ್ದರು. ಹಲವು ಮೊಬೈಲ್‌ ನಂಬರ್‌, ಇ- ಮೇಲ್‌ ಐಡಿ ಬಳಕೆ, ಬೇರೆ ಬೇರೆ ಹೆಸರಿನಲ್ಲಿ ಆಧಾರ್‌ ಸಂಖ್ಯೆ, ಗುರುತಿನ ಚೀಟಿ ಬಳಸಿ ನಕಲಿ ಖಾತೆಗಳನ್ನು ಸೃಷ್ಟಿಸಿ ಅದರಿಂದ ರೈಲ್ವೆ ಇಲಾಖೆ ಮತ್ತು ಸಾರ್ವಜನಿಕರಧಿನ್ನು ಮೋಸ ಮಾಡುತ್ತಿದ್ದರು. ಯಶವಂತಪುರ, ಬೆಂಗಳೂರು ನಗರ, ಬೆಂಗಳೂರು ಕಂಟೋನ್ಮೆಂಟ್‌ ಮತ್ತು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್‌ ಠಾಣೆಗಳಲ್ಲಿಆರೋಪಿಗಳ ವಿರುದ್ಧ ಕೇಸ್‌ ದಾಖಲಿಸಲಾಗಿದೆ.


from India & World News in Kannada | VK Polls https://ift.tt/3pvDpfc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...