ಫೋನ್‌ಪೇ ಕ್ಯಾಶ್‌ಬ್ಯಾಕ್‌ ಆಸೆಗೆ ಬಿದ್ದು ₹45,000 ಕಳೆದುಕೊಂಡ ವಿದ್ಯಾರ್ಥಿನಿ..!

ಬೆಂಗಳೂರು: ಫೋನ್‌ಪೇ ಕ್ಯಾಶ್‌ಬ್ಯಾಕ್‌ ನೀಡಲಾಗುತ್ತದೆ ಎಂದು ಹೇಳಿ ಕರೆ ಮಾಡಿದ ಅಪರಿಚಿತನ ಮಾತು ನಂಬಿದ ವಿದ್ಯಾರ್ಥಿನಿಯೊಬ್ಬರು 45 ಸಾವಿರ ರೂ. ಕಳೆದುಕೊಂಡಿದ್ದಾರೆ. ನಗರದ ಜೆ.ಸಿ. ರಸ್ತೆಯಲ್ಲಿ ನೆಲೆಸಿರುವ 22 ವರ್ಷದ ವಿದ್ಯಾರ್ಥಿನಿಗೆ ಜ.26ರಂದು ಅಪರಿಚಿತ ವ್ಯಕ್ತಿ ಫೋನ್‌ ಮಾಡಿದ್ದ. ನಾನು ಫೋನ್‌ಪೇ ಆಫೀಸಿನಿಂದ ಕರೆ ಮಾಡುತ್ತಿದ್ದೇನೆ. ನಿಮಗೆ ಫೋನ್‌ಪೇ ಕ್ಯಾಶ್‌ ಬ್ಯಾಕ್‌ ಬಂದಿದ್ದು, ಕ್ಲೇಮ್‌ ಮಾಡಿಕೊಳ್ಳಬಹುದು ಎಂದಿದ್ದಾನೆ. ಆತನ ಮಾತುಗಳನ್ನು ವಿದ್ಯಾರ್ಥಿನಿ ನಂಬಿದ್ದರು. ಆದರೆ, ಕ್ಯಾಶ್‌ ಬ್ಯಾಕ್‌ ಪಡೆದುಕೊಳ್ಳಲು ಪ್ರೊಸೆಸಿಂಗ್‌ ಶುಲ್ಕ ಕಟ್ಟಬೇಕು ಎಂದು ಹೇಳಿದ ಅಪರಿಚಿತ ವ್ಯಕ್ತಿ, ವಿದ್ಯಾರ್ಥಿನಿಯ ಎಸ್‌ಬಿಐ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ ಒಟ್ಟು 45,010 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಕ್ಯಾಶ್‌ ಬ್ಯಾಕ್‌ ನೀಡುತ್ತೇನೆಂದು ಹೇಳಿ ಬೇರೆ ಬೇರೆ ಶುಲ್ಕಗಳ ನೆಪದಲ್ಲಿ ಆರೋಪಿ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಲೇ ಇದ್ದ. ಅನುಮಾನಗೊಂಡ ವಿದ್ಯಾರ್ಥಿನಿ ಈ ಕುರಿತು ಬೇರೆ ಕಡೆ ವಿಚಾರಿಸಿದ ವಂಚನೆಯಾಗಿರುವುದು ಗೊತ್ತಾಗಿದೆ. ಸದ್ಯ ಕೇಂದ್ರ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.


from India & World News in Kannada | VK Polls https://ift.tt/36sziJA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...