
ಕುಣಿಗಲ್: ಒಕ್ಕಲಿಗ ಸಮುದಾಯಕ್ಕೆ ಧಕ್ಕೆ ಉಂಟು ಮಾಡುವ ಯಾವುದೇ ನಿರ್ಧಾರಗಳನ್ನು ಆಡಳಿತ ವ್ಯವಸ್ಥೆ ತೆಗೆದುಕೊಳ್ಳಲು ಮುಂದಾದರೆ ಸಮುದಾಯ ಸುಮ್ಮನಿರಲು ಸಾಧ್ಯವಿಲ್ಲಎಂದು ಆದಿಚುಂಚನ ಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸರಕಾರಕ್ಕೆ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ ತಾಲೂಕು ಒಕ್ಕಲಿಗ ಧರ್ಮ ಮಹಾಸಭಾ ಬುಧವಾರ ಹಮ್ಮಿ ಕೊಂಡಿದ್ದ ಭೈರವೈಕ್ಯ ಬಾಲಗಂಗಾಧರ ನಾಥ ಮಹಾಸ್ವಾಮೀಜಿ ಅವರ ಪುಣ್ಯಸ್ಮರಣೆ ಹಾಗೂ ಒಕ್ಕಲಿಗ ಧರ್ಮ ಸಮಾವೇಶ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ''ಕಳೆದ ಆರು ತಿಂಗಳಿಂದ ಸುಮುದಾಯಕ್ಕೆ ಧಕ್ಕೆ ಉಂಟು ಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದನ್ನು ಸಮುದಾಯ ಸೂಕ್ಷತ್ರ್ಮವಾಗಿ ಗಮನಿಸುತ್ತಿದ್ದು, ಅದು ಮುಂದುವರಿದರೆ ಮುಂದಿನ ವಿದ್ಯಮಾನಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಸರಕಾರ ಎಚ್ಚರಿಕೆಯಿಂದ ನಡೆದು ಕೊಳ್ಳಬೇಕಿದೆ,'' ಎಂದು ಕಿವಿಮಾತು ಹೇಳಿದರು. ''ಮಗು ಅಳದೇ ಹೋದರೆ ತಾಯಿಯೂ ಕೂಡ ಹಾಲು ಕೊಡುವುದಿಲ್ಲ. ಈ ಸಂಬಂಧ ಒಕ್ಕಲಿಗ ಸಮುದಾಯವೂ ಧ್ವನಿ ಎತ್ತದಿದ್ದರೆ ಸುಮುದಾಯಕ್ಕೆ ಬೇಕಾದ ಸವಲತ್ತು ಹಾಗೂ ಸೌಲಭ್ಯಗಳು ಸಿಗುವುದಿಲ್ಲ. ಇಡೀ ದೇಶವೇ ಜಾತಿ, ಧರ್ಮದ ವ್ಯವಸ್ಥೆಯಡಿ ನಿಂತಿದೆ. ಜತೆಗೆ ಸಂವಿಧಾನದ ಅಡಿಯಲ್ಲಿಯೂ ನಡೆಯಬೇಕಿದೆ. ಜಾತಿ ವ್ಯವಸ್ಥೆ ಬಗ್ಗೆ ವಿಸ್ತೃತ ಚರ್ಚೆಗಳು ನಡೆಯಬೇಕಿದೆ. ಈ ಸಂಬಂಧ ಎಲ್ಲರೂ ಒಂದು ಜಾತಿ, ಒಂದು ಧರ್ಮವನ್ನು ಸ್ವೀಕರಿಸಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಏರುಪೇರುಗಳಾದ ಸಂದರ್ಭದಲ್ಲಿ ಧ್ವನಿ ಇಲ್ಲದೇ ಯಾರೂ ಕೂಡ ಏನನ್ನೂ ಕೊಡುವುದಿಲ್ಲ. ಕುಣಿಗಲ್‌ನ ಇಂದಿನ ಒಕ್ಕಲಿಗ ಧರ್ಮ ಸಮಾವೇಶದಿಂದಲೇ ಒಕ್ಕಲಿಗರ ಧ್ವನಿ ಕೇಳತೊಡಗಲಿದೆ. ಆಡಳಿತ ನಡೆಸುವ ವರ್ಗ, ಒಕ್ಕಲಿಗ ಸಮುದಾಯಕ್ಕೆ ಧಕ್ಕೆ ಉಂಟು ಮಾಡುವ ಯಾವುದೇ ನಿರ್ಧಾರ ಮಾಡುವ ದುಸ್ಸಾಹಸಕ್ಕೆ ಕೈಹಾಕಬಾರದು,'' ಎಂದು ಎಚ್ಚರಿಕೆ ನೀಡಿದರು. ಶಾಸಕ ಡಾ.ರಂಗನಾಥ್, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಚಿವ ಡಿ.ನಾಗರಾಜಯ್ಯ, ರಾಜ್ಯ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಡಿ.ಕೃಷ್ಣಕುಮಾರ್, ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಮಾತನಾಡಿಧಿದರು. ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಒಕ್ಕಲಿಗ ಮಹಾ ಸಭಾದ ಅಧ್ಯಕ್ಷ ಕೃಷ್ಣೇಗೌಡ ಮತ್ತಿತರರು ಹಾಜರಿದ್ದರು.
from India & World News in Kannada | VK Polls https://ift.tt/39mcwF1