ಹೊಸದಿಲ್ಲಿ: ಹಲವಾರು ವರ್ಷಗಳ ಮೀನಮೇಷದ ಬಳಿಕ ಸಂಸತ್ ಕ್ಯಾಂಟೀನ್‌ನಲ್ಲಿ ಸಂಸದರಿಗೆ ಸಿಗುತ್ತಿದ್ದ ಭಾರಿ ರಿಯಾಯಿತಿ ದರದ (ಸಬ್ಸಿಡಿಯಿಂದಾಗಿ) ಆಹಾರಕ್ಕೆ ಬ್ರೇಕ್ ಬಿದ್ದಿದೆ. ಸಬ್ಸಿಡಿ ರದ್ದತಿ ಬಗ್ಗೆ ಇತ್ತೀಚೆಗೆ ಸ್ಪೀಕರ್ ಓಂ ಬಿರ್ಲಾ ಅವರು ಘೋಷಿಸಿದ್ದರು. ಅದರ ಜಾರಿಯಿಂದಾಗಿ ಸಸ್ಯಾಹಾರ ಊಟದ ಒಂದು ಪ್ಲೇಟ್‌ಗೆ 100 ರೂ. ಮತ್ತು ಮಾಂಸಾಹಾರದ ಊಟಕ್ಕೆ ಇನ್ಮುಂದೆ 700 ರೂ. ಪಾವತಿಸಬೇಕಿದೆ. ಒಂದು ರೋಟಿಗೆ 3 ರೂ., ಹೈದರಾಬಾದಿ ಮಟನ್ ಬಿರಿಯಾನಿಗೆ 150 ರೂ. ಬೇಯಿಸಿದ ತರಕಾರಿಗಳಿಗೆ 50 ರೂ. ಪರಿಷ್ಕೃತ ದರಗಳನ್ನು ನಿಗದಿಪಡಿಸಲಾಗಿದೆ. ಉತ್ತರ ವಲಯದ ರೈಲ್ವೆ ಇಲಾಖೆಯ ಬದಲಿಗೆ ಇನ್ಮುಂದೆ ಸಂಸತ್ ಕ್ಯಾಂಟೀನ್‌ಗಳ ಪೂರ್ಣ ನಿರ್ವಹಣೆ ಉಸ್ತುವಾರಿಯನ್ನು ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಗೆ (ಐಟಿಡಿಸಿ) ವಹಿಸಲಾಗಿದೆ. ಸಬ್ಸಿಡಿ ರದ್ದತಿಯಿಂದಾಗಿ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 8 ಕೋಟಿ ರೂ. ಉಳಿತಾಯವಾಗಲಿದೆ ಎಂದು ಸ್ಪೀಕರ್ ತಿಳಿಸಿದ್ದರು. 2019ರಲ್ಲಿ ಸಂಸತ್ ಕ್ಯಾಂಟೀನ್‌ನಲ್ಲಿ ನೀಡಲಾಗಿದ್ದ ಸಬ್ಸಿಡಿ ಆಹಾರಕ್ಕಾಗಿ ಸರಕಾರ 13 ಕೋಟಿ ರೂ. ಬಿಲ್ ಪಾವತಿಸಿತ್ತು ಎಂದು ಮೂಲಗಳು ತಿಳಿಸಿವೆ.
from India & World News in Kannada | VK Polls https://ift.tt/3r3P8SS