ಅಜೀಂ ಪ್ರೇಮ್‌ಜಿ ಸಂಸ್ಥೆ ಹೆಸರಲ್ಲಿ ವಂಚನೆ..! ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲು

ಬೆಂಗಳೂರು: ಅಜೀಂ ಪ್ರೇಮ್‌ಜಿ ಸಂಸ್ಥೆ ಹೆಸರು ದುರ್ಬಳಕೆ ಮಾಡಿಕೊಂಡು ಕೆಲವು ಸರಕಾರೇತರ ಸಂಸ್ಥೆಗಳಿಗೆ ಮಾಡಿದ ಆರೋಪದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ವೈಟ್‌ಫೀಲ್ಡ್‌ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಅಜೀಂ ಪ್ರೇಮ್‌ಜಿ ಫಿಲಾಂತ್ರಪಿ(ದಾನ) ವಿಭಾಗದ ವೇಲು ಚಂದ್ರಶೇಖರ್‌ ದೂರು ನೀಡಿದ್ದಾರೆ. ಸಮಾಜಮುಖಿ ಕೆಲಸಗಳಿಗೆ ನೆರವಾಗಲು ಅಜೀಂ ಪ್ರೇಮ್‌ಜಿ ಸಂಸ್ಥೆ ಜತೆ ಸೇರಿ ಬೇರೆ ಬೇರೆ ಸಂಸ್ಥೆಗಳು ಧನ ಸಹಾಯ ಮಾಡುತ್ತವೆ. ರಿಷನ್‌ ಸುಸಾನ್‌ ಎಂಬಾತ ಸಂಸ್ಥೆಯ ಇ ಮೇಲ್‌ ನಕಲಿಯಾಗಿ ಸೃಷ್ಟಿಸಿ ಅಸ್ಸಾಂ ಮೂಲದ ಸರಕಾರೇತರ ಸಂಸ್ಥೆಯನ್ನು ಅಜೀಂ ಪ್ರೇಮ್‌ಜಿ ಸಂಸ್ಥೆಗೆ ಸೇರಿಸಲು ನೋಂದಣಿ ಶುಲ್ಕ ಮತ್ತು ಜಿಎಸ್‌ಟಿ ಶುಲ್ಕ ಎಂದು ಹೇಳಿ 35,400 ರೂ. ಪಡೆದಿದ್ದಾನೆ. ಅದೇ ರೀತಿ ಚೆನ್ನೈ ಮೂಲದ ಎನ್‌ಜಿಒಗೂ ವಂಚಿಸಲಾಗಿದೆ. ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ, ಸರಕಾರೇತರ ಸಂಸ್ಥೆ ಹೆಸರಿನಲ್ಲಿ ಬೇರೆ ಸಂಸ್ಥೆಗಳ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡು ಮೋಸ ಮಾಡುತ್ತಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಮೂಲದ ಎರಡು ಸಂಸ್ಥೆಗಳಿಗೂ ಇದೇ ರೀತಿ ವಂಚಿಸಿರುವ ಕುರಿತು ದೂರು ದಾಖಲಾಗಿತ್ತು.


from India & World News in Kannada | VK Polls https://ift.tt/39lxOmg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...