ನಮಗೆ ಅನ್ಯಾಯ ಮಾಡಿದರೆ ಸುಮ್ಮನಿರಲ್ಲ : ಎಚ್‌ಕೆ ಪಾಟೀಲ್‌ ಕಿಡಿ

ಬೆಂಗಳೂರು: ಗಡಿ ವಿವಾದ ಇಂದು ನಿನ್ನೆಯದಲ್ಲ, ಏಕೀಕರಣ ಸಂದರ್ಭದಿಂದಲೂ ಇದೆ. ಮಹಾಜನ್ ವರದಿ ಜಾರಿಯಾಗಬೇಕು ಎಂಬುವುದು ನಮ್ಮ ಬೇಡಿಕೆ, ಇಲ್ಲದಿದ್ದರೆ ಯಥಾಸ್ಥಿತಿ ಮುಂದುವರಿಯುತ್ತದೆ ಎಂದು ಕಾಂಗ್ರೆಸ್ ಮಹಾರಾಷ್ಟ್ರ ಉಸ್ತುವಾರಿ ಹೆಚ್. ಕೆ ಪಾಟೀಲ್ ಹೇಳಿದರು. ವಿಧಾನಸೌಧದಲ್ಲಿ ಗಡಿ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಗಡಿ ವಿವಾದ ಇಂದು ನಿನ್ನೆಯದಲ್ಲ, ಏಕೀಕರಣ ಸಂದರ್ಭದಿಂದಲೂ ಇದೆಚುನಾವಣಾ ರಾಜಕೀಯ ದೃಷ್ಟಿಯಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಫೆಡರಲ್ ವ್ಯವಸ್ಥೆಯಲ್ಲಿ ಉದ್ಧವ್ ಠಾಕ್ರೆ ಇರಲಿ ಯಾರೇ ಇರಲಿ ಈ ರೀತಿ ಅನವಶ್ಯಕವಾಗಿ ಹೇಳಿಕೆ ಕೊಡುವುದು ಸರಿಯಲ್ಲ. ಕಾಂಗ್ರೆಸ್ ಮೈತ್ರಿ ಸರ್ಕಾರ ಇದೆ ಹೌದು, ಕನ್ನಡಿಗರ ನಿಲುವು ನ್ಯಾಯಯುತವಾಗಿದೆ. ಇಲ್ಲದ ವಿಚಾರವನ್ನು ವಿವಾದ ಮಾಡುವುದು ತಪ್ಪು ಎಂದು ತಿಳಿಸಿದರು. ನಮ್ಮ ನ್ಯಾಯಾಯುತ ನಿಲುವನ್ನು ದಕ್ಕಿಸಿಕೊಳ್ಳುತ್ತೇವೆ ನಮಗೆ ಅನ್ಯಾಯ ಮಾಡಿದರೆ ಸುಮ್ಮನಿರಲ್ಲ. ಕನ್ನಡಿಗರು ಎಲ್ಲರಿಗೂ ಗೌರವ ನೀಡುತ್ತಾರೆ, ನಮ್ಮ ನ್ಯಾಯಯುತ ಹಕ್ಕುಗಳಿಗೆ ವಿರೋಧ ಮಾಡಿದರೆ ಸಹಿಸಲ್ಲ ಎಂದು ಪಾಟೀಲ್‌ ತಿಳಿಸಿದರು. ಮರಾಠಿ ದಿನದಂದು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು, ಮರಾಠಿ ಮಾತನಾಡುವ ಪ್ರದೇಶಗಳನ್ನು ಕರ್ನಾಟಕ ಆಕ್ರಮಿತ ಪ್ರದೇಶ ಎಂದು ಘೋಷಿಸುವುದಾಗಿ ಮಹಾರಾಷ್ಟ್ರ ಹೇಳಿದ್ದರು. ಇದು ಭಾರೀ ವಿವಾದವನ್ನೇ ಎಬ್ಬಿಸಿದೆ.


from India & World News in Kannada | VK Polls https://ift.tt/3abQh3D

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...