ಉಪ್ಪಿನಂಗಡಿ: ನಕಲಿ ಚಿನ್ನ ಅಡವಿಟ್ಟು ವಂಚಕನಿಂದ ಲಕ್ಷ ಪಂಗನಾಮ, ಸಹಕಾರಿ ಸಂಘವೇ ಇವನ ಟಾರ್ಗೆಟ್‌!

ಉಪ್ಪಿನಂಗಡಿ: ಶ್ರೀಮಂತ ಗ್ರಾಹಕರ ಸೋಗಿನಲ್ಲಿ ಸಹಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ ಅಡವಿರಿಸಿ, ಲಕ್ಷಾಂತರ ರೂಪಾಯಿ ಹಣ ವಂಚಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಬೇರಿಕೆ ಕಾಯಕ್ಕಾಡ್‌ ಮನೆ ನಿವಾಸಿ ಗಿರೀಶ್‌ ಕುಮಾರ್‌ (32) ಬಂಧಿತ ಆರೋಪಿ. ಕಳೆದೆರಡು ದಿನಗಳ ಹಿಂದೆ ಕೇರಳ ನೋಂದಣಿ ಸಂಖ್ಯೆ ಹೊಂದಿದ್ದ ಕಾರೊಂದರಲ್ಲಿಆಗಮಿಸಿದ್ದ ಈತ, ಉಪ್ಪಿನಂಗಡಿಯಲ್ಲಿನ ಸಹಕಾರಿ ಹಣಕಾಸು ಸಂಸ್ಥೆಗಳಿಗೆ ಗಣ್ಯ ಗ್ರಾಹಕನ ಸೋಗಿನಲ್ಲಿಎಂಟ್ರಿಕೊಟ್ಟು ತಾನು ಅರ್ಜೆಂಟ್‌ನಲ್ಲಿದ್ದೇನೆ ಎಂದು ಬಿಂಬಿಸಿ ತಾನು ತಂದಿತ್ತ ನಕಲಿ ಚಿನ್ನಾಭರಣವನ್ನು ಅಡಮಾನವಿರಿಸಿ ಸಾಲವನ್ನು ಕೇಳಿದ್ದ. ಅಸಲಿ ಚಿನ್ನಾಭರಣದಂತೆ ಈತನ ಕೈಯಲ್ಲಿದ್ದ ಚಿನ್ನಾಭರಣ ಸಹಜ ತೂಕ ಹೊಂದಿದ್ದು, ಮೇಲ್ನೋಟಕ್ಕೆ ನೈಜ ಚಿನ್ನಾಭರಣದಂತೆ ಕಾಣುತ್ತಿತ್ತು. ಈತನ ತರಾತುರಿಯನ್ನು ಗಮನಿಸಿದ ಸಂಘದ ಸಿಬ್ಬಂದಿ ಈತನಲ್ಲಿರುವುದು ಅಸಲಿ ಚಿನ್ನ ಎಂದೇ ಭಾವಿಸಿ ಚಿನ್ನಾಭರಣ ಪರೀಕ್ಷಕ ಬರುವವರೆಗೆ ಕಾಯದೆ ಈತನಿಗೆ ಹಣ ನೀಡಿದ್ದರು. ಆದರೆ ಒಂದು ಸಹಕಾರಿ ಸಂಘಕ್ಕೆ ತೆರಳಿದಾಗ ಮಾತ್ರ ಆತನ ವಂಚನೆ ಬೆಳಕಿಗೆ ಬಂದಿತ್ತು. ಆದರೆ ಅಷ್ಟರಲ್ಲಾಗಲೇ ಆತ ಪರಾರಿಯಾಗಿದ್ದ. ಈತನಿಂದ ವಂಚನೆಯಾಗಿರುವ ಬಗ್ಗೆ ಎರಡು ಸಹಕಾರಿ ಸಂಸ್ಥೆಗಳು ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಉಪ್ಪಿನಂಗಡಿ ಪೊಲೀಸ್‌ ಉಪ ನಿರೀಕ್ಷಕ ಈರಯ್ಯ ಡಿ.ಎನ್‌. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಪೊಲೀಸ್‌ ವಶಕ್ಕೆ ಒಪ್ಪಿಸಿದೆ. ಈತ ಸಹಕಾರಿ ಬ್ಯಾಂಕ್‌ಗಳಿಗೆ ಈ ರೀತಿ ವಂಚಿಸುವುದನ್ನೇ ದಂಧೆಯಾಗಿ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಸಂಶಯವಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


from India & World News in Kannada | VK Polls https://ift.tt/2YySIIt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...