ಮರವಂತೆ: ಮೀನುಗಾರಿಕೆಗೆ ತೆರಳಿದ ಬೋಟೊಂದು ಮಗುಚಿ ಬಿದ್ದು, ಗುರುರಾಜ್ ಖಾರ್ವಿ, ಮಿಥುನ್ ಖಾರ್ವಿ, ಚಂದ್ರ ಖಾರ್ವಿ, ರೋಶನ್ ಖಾರ್ವಿ ಪವಾಡಸದೃಶವಾಗಿ ಪಾರಾದ ಘಟನೆ ಗುರುವಾರ ಬೆಳಗ್ಗೆ ಗಂಗೊಳ್ಳಿಯಲ್ಲಿ ನಡೆದಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಗುರುರಾಜ್ ಖಾರ್ವಿ ಮಾಲೀಕತ್ವದ ಸೌಮ್ಯ ಹೆಸರಿನ ಬೋಟ್‌ನಲ್ಲಿ ನಾಲ್ವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ಮಾಡುತ್ತಿದ್ದಾಗ 7.30ರ ಸುಮಾರಿಗೆ ಲಾಂಬಾರು ಮತ್ತು ಗಾಳಿಯ ರಭಸಕ್ಕೆ ದೋಣಿ ಮಗುಚುತ್ತಿರುವುದನ್ನು ಅರಿತ ಗುರುರಾಜ್ ಖಾರ್ವಿ ಮತ್ತು ಮಿಥುನ್ ಖಾರ್ವಿ ನೀರಿಗೆ ಹಾರಿ ಈಜಿ ಪ್ರಾಣ ರಕ್ಷಿಸಿಕೊಂಡರು. ಈಜು ತಿಳಿಯದ ಚಂದ್ರ ಖಾರ್ವಿ, ರೋಶನ್ ಖಾರ್ವಿ ರಕ್ಷಣೆಗಾಗಿ ಮೊರೆ ಇಡುತ್ತಿದ್ದಾಗ ಪಕ್ಕದಲ್ಲೇ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರ ತಂಡವೊಂದು ನಾಲ್ವರನ್ನೂ ರಕ್ಷಿಸಿದೆ. ಬೋಟ್ ನೀರಿನಲ್ಲಿ ಮುಳುಗಿದೆ. ಎಂಜಿನ್, ಬಲೆ ಸೇರಿದಂತೆ ಸುಮಾರು 5 ಲಕ್ಷ ರೂ. ಮೌಲ್ಯದ ಸೊತ್ತು ನೀರುಪಾಲಾಗಿದೆ.
from India & World News in Kannada | VK Polls https://ift.tt/2MAAi76