ನವದೆಹಲಿ: ಕೇಂದ್ರದ ಉದ್ದೇಶಿತ ಕೃಷಿ ವಿಧೇಯಕಗಳನ್ನು ಖಂಡಿಸಿ ಆಡಳಿತಾರೂಢ ಭಾಗವಾಗಿದ್ದ ದೂರ ಸರಿದಿದೆ. ನಿನ್ನೆ(ಶನಿವಾರ) ತಡರಾತ್ರಿ ಸಭೆ ಸೇರಿದ್ದ ಶಿರೋಮಣಿ ಅಕಾಲಿ ದಳ ಉನ್ನತ ನಾಯಕತ್ವ, ರೈತ ವಿರೋಧಿ ಕೃಷಿ ವಿಧೇಯಕಗಳನ್ನು ಒಪ್ಪಲು ಸಾಧ್ಯವಿಲ್ಲವಾದ್ದರಿಂದ ಎನ್ಡಿಯದಿಂದ ಹೊರಬರುವ ನಿರ್ಣಯ ಕೈಗೊಂಡಿತು. ಸಭೆಯ ಬಳಿಕ ಮಾತನಾಡಿದ ಶಿರೋಮಣಿ ಅಕಾಲಿ ದಳ ಮುಖ್ಯಸ್ಥ, ಸುಖ್ಬೀರ್ ಸಿಂಗ್ ಬಾದಲ್, ತಮ್ಮ ಸತತ ಮನವಿಯ ಹೊರತಾಗಿಯೂ ಮೋದಿ ಸರ್ಕಾರ ರೈತ ವಿರೋಧಿ ಕೃಷಿ ವಿಧೇಯಕಗಳನ್ನು ಜಾರಿಗೆ ತರುತ್ತಿದೆ. ಹೀಗಾಗಿ ಎನ್ಡಿಎ ಭಾಗವಾಗಿ ಇರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು. ಖಂಡಿಸಿ ಪಂಜಾಬ್ ಸೇರಿದಂತೆ ದೇಶದಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಈ ಮಸೂದೆಗಳನ್ನು ವಾಪಸ್ ಪಡೆಯಲು ಮೋದಿ ಸರ್ಕಾರ ಸಿದ್ಧವಿಲ್ಲ. ಈ ಮೊಂಡುತನವನ್ನು ವಿರೋಧಿಸಿ ಎನ್ಡಿಎದಿಂದ ಹೊರಬರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುಖ್ಬೀರ್ ಸಿಂಗ್ ಬಾದಲ್ ಸ್ಪಷ್ಟಪಡಿಸಿದರು. ಕೇಂದ್ರದ ಉದ್ದೇಶಿತ ಕೃಷಿ ಮಸೂದೆ ವಿರೋಧಿಸಿ ಈಗಾಗಲೇ ಶಿರೋಮಣಿ ಅಕಾಲಿ ದಳದ ಕೇಂದ್ರ ಮಂತ್ರಿ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇನ್ನು ಶಿರೋಮಣಿ ಅಕಾಲಿ ದಳ ಎನ್ಡಿಎದಿಂದ ಹೊರಹೋಗಿರುವ ಮೂರನೇ ಪಕ್ಷವಾಗಿದ್ದು, ಈ ಹಿಂದೆ ಶಿವಸೇನೆ ಮತ್ತು ತೇಲಗುದೇಶಂ ಪಕ್ಷ(ಟಿಡಿಪಿ) ವಿವಿಧ ಕಾರಣಗಳಿಂದಾಗಿ ಎನ್ಡಿಎದಿಂದ ದೂರವಾಗಿದ್ದವು.
from India & World News in Kannada | VK Polls https://ift.tt/3mZ2tL0