ಪಂಚಾಯಿತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿಧೇಯಕವನ್ನು ಮಂಡಿಸಿ, ಮೀಸಲು ಸೌಲಭ್ಯ ಪರಿಣಾಮಕಾರಿಯಾಗಿ ಲಭಿಸುವಂತೆ ಮಾಡುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿದೆ ಎಂದು ವಿವರಿಸಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್, ''ಇದು ಸಾಮಾಜಿಕ ನ್ಯಾಯ ಮತ್ತು ಮೀಸಲು ನೀತಿಗೆ ವಿರುದ್ಧವಾಗಿದೆ. ಇದೊಂದು ದುರಂತ. ಇಂಥ ಕಾಯಿದೆ ಜಾರಿಗೆ ಈಶ್ವರಪ್ಪನಂಥವರನ್ನು ಬಳಸಿಕೊಳ್ಳುವುದಕ್ಕೆ ಬೇಸರವಾಗುತ್ತಿದೆ.
ಬೆಂಗಳೂರು:
ಗ್ರಾಮ ಪಂಚಾಯಿತ್ ವಾರ್ಡ್ ತಾಲೂಕು ಹಾಗೂ ಜಿಲ್ಲಾಪಂಚಾಯತಿ ಕ್ಷೇತ್ರಗಳ ಮೀಸಲು ಅವಧಿಯನ್ನು ಹತ್ತು ವರ್ಷಗಳಿಂದ 5 ವರ್ಷಕ್ಕೆ ಇಳಿಸುವ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರಕಿದೆ. ಪಂಚಾಯಿತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿಧೇಯಕವನ್ನು ಮಂಡಿಸಿ, ಮೀಸಲು ಸೌಲಭ್ಯ ಪರಿಣಾಮಕಾರಿಯಾಗಿ ಲಭಿಸುವಂತೆ ಮಾಡುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿದೆ ಎಂದು ವಿವರಿಸಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್, ''ಇದು ಸಾಮಾಜಿಕ ನ್ಯಾಯ ಮತ್ತು ಮೀಸಲು ನೀತಿಗೆ ವಿರುದ್ಧವಾಗಿದೆ. ಇದೊಂದು ದುರಂತ. ಇಂಥ ಕಾಯಿದೆ ಜಾರಿಗೆ ಈಶ್ವರಪ್ಪನಂಥವರನ್ನು ಬಳಸಿಕೊಳ್ಳುವುದಕ್ಕೆ ಬೇಸರವಾಗುತ್ತಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದನ್ನು ತಪ್ಪಿಸಲು ಕನಿಷ್ಠ 30 ತಿಂಗಳು ಯಾವುದೇ ಅವಿಶ್ವಾಸ ಮಂಡನೆಗೆ ಅವಕಾಶ ಇರಬಾರದು ಪಂಚಾಯತಿಗಳ ಚುನಾವಣೆಯನ್ನು ಆಯೋಗವೇ ನಡೆಸಿ ಎಲ್ಲವೆಚ್ಚವನ್ನೂ ಆಯೋಗವೇ ಭರಿಸುವಂತಾಗಬೇಕು. ಮತದಾನಕ್ಕೆ 8 ದಿನ ಮುನ್ನ ಮದ್ಯ ಮಾರಾಟ ನಿಷೇಧ ಮಾಡಬೇಕೆಂದು ಪ್ರಸ್ತಾಪಿಸಲಾಗಿತ್ತು,'' ಎಂದರು.
ಕಾಂಗ್ರೆಸ್ ವಿರುದ್ಧವೇ ಆಕ್ರೋಶ !
''ಈ ಕಾಯಿದೆಯನ್ನು ನಮ್ಮ ಸರಕಾರದ ಅವಧಿಯಲ್ಲೇ ಸರಿಯಾಗಿ ಜಾರಿ ಮಾಡಲಿಲ್ಲ. ಸತ್ಯ ಹೇಳಿದರೆ ನಮ್ಮ ನಾಯಕರಿಗೆ ಬೇಸರವಾಗುತ್ತದೆ. ಮಾತನಾಡದಿದ್ದರೆ ಆತ್ಮಸಾಕ್ಷಿಗೆ ದ್ರೋಹ ಮಾಡಿಕೊಂಡಂತಾಗುತ್ತದೆ. ನಾನು ನೀಡಿದ ವರದಿ ಆಧರಿಸಿ ಸಿದ್ಧಗೊಳಿಸಿದ ವಿಧೇಯಕ ಜಾರಿಗೆ ನಮ್ಮ ಸರಕಾರವೇ ಮನಸು ಮಾಡಲಿಲ್ಲ. ಆದರೆ ಬೆಂಗಳೂರಿನಲ್ಲಿನಡೆದ ಕಾರ್ಯಕ್ರಮದಲ್ಲಿರಾಹುಲ್ ಗಾಂಧಿ ಜಾರಿಗೆ ಸೂಚನೆ ನೀಡಿದ ಮೇಲೆ ಕ್ರಮ ತೆಗೆದುಕೊಂಡರು. ಆದರೆ ಚುನಾವಣೆ ನಡೆಸುವಾಗ ಹೊಸ ಕಾಯಿದೆ ಬಿಟ್ಟು ಹಳೆ ನಿಯಮ ಪ್ರಕಾರ ನಡೆಸಿದರು. ಇದು ವಿಪರ್ಯಾಸವಲ್ಲವೇ ? ಇಂಥದ್ದನ್ನೂ ಎಲ್ಲದರೂ ನೋಡಿದ್ದೀರಾ,'' ಎಂದು ರಮೇಶ್ ಕುಮಾರ್ ಪ್ರಶ್ನಿಸಿದರು.
ಕಣ್ವಗೆ ಸೇರಿದ 255.17 ಕೋಟಿ ರೂ. ಆಸ್ತಿ ಮುಟ್ಟುಗೋಲು, ವಂಚನೆ ಸಾಲದ ಮೊತ್ತ 120 ಕೋಟಿ ರೂ. ಬಾಕಿ !
ಎಚ್‌ಡಿ ರೇವಣ್ಣ ಹೇಳಿರುವುದೇನು?
ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಮಾತನಾಡಿ, ''ಸ್ಥಳೀಯ ಸಂಸ್ಥೆಗಳಲ್ಲಿಮೀಸಲು ಇಲ್ಲದ ಸಂದರ್ಭದಲ್ಲಿಯೇ ದಲಿತರು ಮತ್ತು ಹಿಂದುಳಿದವರಿಗೆ ದೇವೇಗೌಡರು ಅಧ್ಯಕ್ಷ ಸ್ಥಾನ ಕಲ್ಪಿಸಿಕೊಟ್ಡಿದ್ದರು. ವಿಧಾನಸಭೆ ಮತ್ತು ಸಂಸತ್ತಿನಲ್ಲಿಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ಇರಬೇಕು ಎಂದು ದೇವೇಗೌಡರು ಪ್ರಧಾನಿಯಾಗಿದ್ದಾಗಲೇ ವಿಧೇಯಕ ಮಂಡಿಸಿದ್ದರು,''ಎಂದರು. ಈ ಸಂದರ್ಭದಲ್ಲಿಮಧ್ಯ ಪ್ರವೇಶ ಮಾಡಿದ ಮಹಿಳಾ ಸದಸ್ಯರು ಈಗಲಾದರೂ ಪಾಸ್ ಮಾಡಿಸಿ ಕೊಡಿ ಸರ್ ಎಂದು ಎಲ್ಲರೂ ಪಕ್ಷ ಭೇದ ಮರೆತು ಆಗ್ರಹಿಸಿದರು. ಆಗ ಮಧ್ಯ ಪ್ರವೇಶಿಸಿದ ಪ್ರೀತಂಗೌಡ 'ರೇವಣ್ಣ ವಾದಿಸುತ್ತಿರುವುದು ಮಹಿಳೆಯರ ಪರ ಅಲ್ಲ, ಹೊಳೆನರಸಿಪುರ ಕ್ಷೇತ್ರವನ್ನು ತಮ್ಮ ಮನೆಯವರಿಗೆ ಮೀಸಲು ಮಾಡುವುದಕ್ಕೆ ' ಎಂದು ಕುಟುಕಿದರು.
ಅವಿಶ್ವಾಸ ಮಂಡನೆ ಚರ್ಚೆ, ಪಿಪಿಇ ಕಿಟ್ ಧರಿಸಿ ಬರಲು ಕೋವಿಡ್ ಶಾಸಕರಿಗೆ ಬಿಜೆಪಿ ವಿಪ್ ಜಾರಿ
ಮಸೂದೆಯ ಮುಖ್ಯಾಂಶಗಳೇನು ?
- ಕ್ಷೇತ್ರಗಳ ಮೀಸಲು ಅವಧಿ 10 ವರ್ಷದಿಂದ 5 ವರ್ಷಕ್ಕೆ ಇಳಿಕೆ
- ಅಧ್ಯಕ್ಷ, ಉಪಾಧ್ಯಕ್ಷ ಅವಧಿ 30 ತಿಂಗಳಿಗೆ ನಿಗದಿ
- ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ 15 ತಿಂಗಳಿಗಿಂತ ಮುಂಚೆ ಅವಿಶ್ವಾಸ ಮಂಡಿಸುವಂತಿಲ್ಲ
-ಮತದಾನ ದಿನಾಂಕಕ್ಕೆ 2 ದಿನ ಮುಂಚಿತವಾಗಿ ಮದ್ಯ ಮಾರಾಟ ನಿಷೇಧ.
ನಾನು ಬ್ರಾಹ್ಮಣ ಅದಕ್ಕೆ ವಿರೋಧಿಸುತ್ತೀರಿ : ರಮೇಶ್ ಕುಮಾರ್
''ಸಿದ್ದರಾಮಯ್ಯನವರ ಸಮಾಜದವರು ಜಾಸ್ತಿ ಜನ ಇದ್ದಾರೆ, ಅದಕ್ಕೆ ಅವರನ್ನು ವಿಶ್ವಾಸಕ್ಕೆ ಇಟ್ಟುಕೊಳ್ಳುತ್ತೀರಿ. ನಾನು ಬ್ರಾಹ್ಮಣ, ಕಡಿಮೆ ಜನ ಇದ್ದೇವೆ ಎಂದು ಏನು ಬೇಕಾದರೂ ಹೇಳಬಹುದು,'' ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಮೀಸಲು ವಿಚಾರದಲ್ಲಿ ರಮೇಶ್ ಕುಮಾರ್ ವಾದಕ್ಕೆ ರೇವಣ್ಣ ವಿರೋಧ ವ್ಯಕ್ತಪಡಿಸಿ, ''ಹತ್ತು ವರ್ಷ ಒಬ್ಬರಿಗೇ ಮೀಸಲು ಕೊಡುವ ಬದಲು ಬೇರೆ ವರ್ಗದವರಿಗೂ ಸಿಗಲಿ,'' ಎಂದರು. ಮೀಸಲು ವಿಚಾರದಲ್ಲಿ ಸಿದ್ದು ಪರ ಮಾತನಾಡಿದ ರೇವಣ್ಣ, ''ನನ್ನ ಸಿದ್ರಾಮಣ್ಣ ಸಂಬಂಧವೇ ಬೇರೆ,'' ಎಂದು ಹೇಳಿದರು. ರಮೇಶ್‌ಕುಮಾರ್ ನಾನು ಬ್ರಾಹ್ಮಣ ಅಂದ್ರಾ ?' ಎಂದು ಬಿಜೆಪಿ ಸದಸ್ಯರು ತಮ್ಮಲ್ಲೇ ಚರ್ಚಿಸಿದರು.
from India & World News in Kannada | VK Polls https://ift.tt/3kPgQ2t