ಬಾಗಲಕೋಟೆ: ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ; ಸಂಪರ್ಕ ಕಡಿತ, ಮನೆಗಳು ಧರಶಾಹಿ!

ಬಾಗಲಕೋಟೆ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ನಿರಂತರ ಸುರಿಯುತ್ತಿರುವ ಮಳೆ ಹಿನ್ನೆಲೆ ಜಿಲ್ಲೆಯ ಬೇಕಮಲದಿನ್ನಿ - ಕರಡಿ- ಹುನಗುಂದದ ಸಂಪರ್ಕ ಕಡಿತಗೊಂಡಿದೆ. ಬೇಕಮಲದಿನ್ನಿ ಗ್ರಾಮದಲ್ಲಿ ಸಂಪರ್ಕ ರಸ್ತೆ ಮೇಲೆಯೇ ಹಳ್ಳದ ನೀರು ಹರಿಯುತ್ತಿದೆ. ಹೀಗಾಗಿ ಸಂಚಾರ ಸ್ಥಗಿತಗೊಂಡಿದ್ದು ಗ್ರಾಮಸ್ಥರು ಪರದಾಡುತ್ತವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ತಡರಾತ್ರಿಯಿಂದ ಸುರಿಯುತ್ತಿರೋ ಮಳೆಗೆ ಅಕ್ಕಪಕ್ಕದ ಹೊಲಗದ್ದೆಗಳಲ್ಲಿ ನೀರು ತುಂಬಿ ಬಿಟ್ಟಿದ್ದು ಅನ್ನದಾತರು ತಲೆ ಮೇಲೆ ಕೈ ಇಟ್ಟುಕೊಂಡು ಕೂರುವಂತೆ ಆಗಿದೆ. ಇನ್ನು ಮುಧೋಳ, ಬಾಗಲಕೋಟೆ ಸೇರಿದಂತೆ ಹಲವೆಡೆ ಮಳೆ ಸುರಿಯುತ್ತಿದೆ ಮಳೆಗೆ ಧರೆಗುಳಿದ ಮನೆಗಳು!ಇನ್ನು ತಡರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿ ಮಳೆಯಿಂದಾಗಿ ಕೆಲವೆಡೆ ಮನೆಗಳು ಬಿದ್ದ ಘಟನೆಗಳು ವರದಿಯಾಗಿದೆ. ಮನ್ನಿಕಟ್ಟಿ ಗ್ರಾಮದಲ್ಲಿ ರಾತ್ರಿ ಸುರಿದ ಮಳೆಗೆ ಮನೆಯೊಂದು ಬಿದ್ದಿದೆ. ಬಸಮ್ಮ ಹುಣಸಿಕಟ್ಟಿ ಸೇರಿದ ಮನೆ ಇದಾಗಿದ್ದು, ನಿರಂತರ ಸುರಿದ ಮಳೆಗೆ ಮನೆ ಉರುಳಿ ಬಿದ್ದಿದೆ. ಮುಂಜಾಗ್ರತಾ ಹಿನ್ನೆಲೆ ಮೊದಲೇ ಮನೆಯಿಂದ ಕುಟುಂಬ ಹೊರ ಬಂದಿದ್ದ ಹಿನ್ನೆಲೆ ದೊಡ್ಡ ಅವಘಡವೊಂದು ತಪ್ಪಿದಂತೆ ಆಗಿದೆ.


from India & World News in Kannada | VK Polls https://ift.tt/3mNr6tX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...