'ಬ್ಯಾಟಿಂಗ್‌ ವೈಫಲ್ಯತೆ ತುಂಬಾ ಬೇಸರ ತರಿಸಿದೆ' : ಡೆಲ್ಲಿ ವಿರುದ್ಧದ ಸೋಲಿಗೆ ಕಾರಣ ತಿಳಿಸಿದ ಧೋನಿ!

ಹೊಸದಿಲ್ಲಿ: ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಪಡೆಯದೆ ಇರುವುದು ಹಾಗೂ ಸ್ಪಿನ್‌ ವಿಭಾಗದ ಶಿಸ್ತಿನ ದಾಳಿಯ ಕೊರತೆಯಿಂದಾಗಿ ಹದಿಮೂರನೇ ಆವೃತ್ತಿಯ ಏಳನೇ ಪಂದ್ಯದಲ್ಲಿ ವಿರುದ್ಧ ಸೋಲು ಅನುಭವಿಸಿದ್ದೇವೆ ಎಂದು ಚೆನ್ನೈ ಸೂಪರ್‌ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್‌ ಧೋನಿ ತಿಳಿಸಿದ್ದಾರೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 175 ರನ್‌ಗಳನ್ನು ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ನಿಗದಿತ 20 ಓವರ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು 131 ರನ್‌ಗಳಿಗೆ ಸೀಮಿತವಾಯಿತು. ಅಂತಿಮವಾಗಿ ಡೆಲ್ಲಿ ಫ್ರಾಂಚೈಸಿ 44 ರನ್‌ಗಳ ಗೆಲುವು ಸಾಧಿಸಿತು. ಗುರಿ ಹಿಂಬಾಲಿಸಿದ ಚೆನ್ನೈ ಫ್ರಾಂಚೈಸಿ ಪರ ಮತ್ತೊಮ್ಮೆ ಆರಂಭಿಕ ಜೋಡಿ ಮುರಳಿ ವಿಜಯ್‌ ಹಾಗೂ ಶೇನ್‌ ವ್ಯಾಟ್ಸನ್ ಜೋಡಿ ವಿಫಲವಾಯಿತು. ಮುರಳಿ ವಿಜಯ್‌ 10 ರನ್‌ ಹಾಗೂ ಶೇನ್‌ ವ್ಯಾಟ್ಸನ್‌ 14 ರನ್‌ಗಳಿಗೆ ಔಟ್‌ ಆದರು. ಡುಪ್ಲೆಸಿಸ್‌ 45 ರನ್‌ ಗಳಿಸಿದರೆ, ಕೇದಾರ್‌ ಜಾಧವ್‌ 26 ರನ್‌ ಹಾಗೂ 15 ರನ್‌ಗಳನ್ನು ಗಳಿಸಿದರು. ಆದರೆ, ತಂಡದ ಗೆಲುವು ತಂದುಕೊಡುವಲ್ಲಿ ಇವರ ರನ್‌ಗಳ ಸಾಕಾಗಲಿಲ್ಲ. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಎಸ್‌ ಧೋನಿ, ಕಳೆದ ಎರಡು ಪಂದ್ಯಗಳಿಂದ ಅಲಭ್ಯರಾಗಿದ್ದ ಅಂಬಾಟಿ ರಾಯುಡು ಮುಂದಿನ ಪಂದ್ಯಕ್ಕೆ ಲಭ್ಯರಾಗುವುದನ್ನು ಸ್ಪಷ್ಟಪಡಿಸಿದರು ಹಾಗೂ ಪಂದ್ಯ ಸೋಲಿಗೆ ಕಾರಣವನ್ನು ಬಹಿರಂಗಪಡಿಸಿದರು. "ಇಂದಿನ ಹಣಾಹಣಿ ನಮ್ಮ ಪಾಲಿಗೆ ಒಳ್ಳೆಯ ಪಂದ್ಯ ಎಂದು ನಾನು ಯೋಚಿಸುವುದಿಲ್ಲ. ಪಂದ್ಯಕ್ಕೆ ಮಂಜು ಇರಲಿಲ್ಲ ಹಾಗೂ ವಿಕೆಟ್‌ ತುಂಬಾ ನಿಧಾನಗತಿಯಿಂದ ಕೂಡಿತ್ತು. ಬ್ಯಾಟಿಂಗ್‌ನಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ್ದು ತುಂಬಾ ಬೇಸರ ತರಿಸಿದೆ. ಆರಂಭಿಕ ಆಘಾತ ಅನುಭವಿಸಿದ್ದ ನಾವು, ಮಧ್ಯಮ ಕ್ರಮಾಂಕದಲ್ಲಿ ರನ್‌ ರೇಟ್‌ ಏರಿಸಲು ಹೋರಾಟ ಮಾಡಿದ್ದೆವು. ಆದರೂ ಗೆಲುವು ಪಡೆಯಲು ಸಾಧ್ಯವಾಗಿಲ್ಲ," ಎಂದು ಹೇಳಿದರು. "ಮುಂದಿನ ಪಂದ್ಯಕ್ಕೆ ಬಲಿಷ್ಟವಾಗಿ ಕಮ್‌ಬ್ಯಾಕ್‌ ಮಾಡುತ್ತೇವೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅಂಬಾಟಿ ರಾಯುಡು ಮುಂದಿನ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಅವರ ಆಗಮನದಿಂದ ಪಂದ್ಯದ ಸಮತೋಲನ ಇನ್ನುಷ್ಟು ಉತ್ತಮವಾಗಲಿದೆ. ರಾಯುಡು ಆಗಮನದಿಂದ ಮತ್ತೊಬ್ಬ ಬೌಲರ್‌ನೊಂದಿಗೆ ಪ್ರಯೋಗ ಮಾಡಲು ಅವಕಾಶ ಸಿಕ್ಕಂತಾಗುತ್ತದೆ. ಕಳೆದ ಪಂದ್ಯಗಳಲ್ಲಿ ನಾವು ಹಿನ್ನಡೆ ಅನುಭವಿಸಿದ್ದ ಕೆಲ ಸಂಗತಿಗಳ ಬಗ್ಗೆ ಯೋಚಿಸಬೇಕಾದ ಅಗತ್ಯವಿದೆ," ಎಂದು ಸುದ್ದಿಗೋಷ್ಠಿಯಲ್ಲಿ ಎಂಎಸ್ ಧೋನಿ ತಿಳಿಸಿದರು. ಎರಡನೇ ಪಂದ್ಯದಲ್ಲಿ ಸಿಎಸ್‌ಕೆ ಸ್ಪಿನ್ನರ್‌ಗಳು ಎದುರಾಳಿ ಬ್ಯಾಟ್ಸ್‌ಮನ್‌ಗಳ ಎದುರು ಹೆಣಗಾಡಿದ್ದರು. ಹಾಗೂ ಆರಂಭದಲ್ಲಿ ದುಬಾರಿಯಾಗಿದ್ದರು. ಬಳಿಕ ಬಲಿಷ್ಟವಾಗಿ ಕಮ್‌ಬ್ಯಾಕ್‌ ಮಾಡಿದ ಪಿಯೂಷ್‌ ಚಾವ್ಲಾ, ಶಿಖರ್ ಧವನ್‌ ಹಾಗೂ ಪೃಥ್ವಿ ಶಾ ಅವರ ವಿಕೆಟ್‌ಗಳನ್ನು ಕಬಳಿಸಿದರು. ಆದರೆ, ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಅವರು ಕಳೆದ ಎಂಟು ಓವರ್‌ಗಳಲ್ಲಿ 77 ರನ್‌ಗಳನ್ನು ನೀಡಿದ್ದಾರೆ. "ಲೈನ್‌, ಲೆನ್ತ್‌ ಹಾಗೂ ವೇಗದಲ್ಲಿ ನಾವು ಇನ್ನಷ್ಟು ಹಿಡಿತ ಸಾಧಿಸುವ ಅಗತ್ಯವಿದೆ. ನಮ್ಮ ಸ್ಪಿನ್ನರ್‌ಗಳು ಇನ್ನೂ ಲಯಕ್ಕೆ ಮರಳಿಲ್ಲ ಎಂದು ನನಗೆ ಅನಿಸುತ್ತಿದೆ. ನಾವು ಉತ್ತಮ ಎಸೆತಗಳನ್ನು ಹಾಕುತ್ತಿದ್ದೇವೆ ಆದರೆ, ನಾವು ಬೌಂಡರಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ," ಎಂದು ಎಂಎಸ್ ಧೋನಿ ತಿಳಿಸಿದರು. ಈ ಪಂದ್ಯದಲ್ಲಿಯೂ ಎಂಎಸ್‌ ಧೋನಿ ಬ್ಯಾಟಿಂಗ್‌ನಲ್ಲಿ ವಿಫಲರಾದರು. 12 ಎಸೆತಗಳಿಗೆ 15 ರನ್‌ಗಳನ್ನು ಗಳಿಸಿದರು. ಮುಂದಿನ ಶುಕ್ರವಾರ ದುಬೈನಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ ಸಿಎಸ್‌ಕೆ ಮುಂದಿನ ಪಂದ್ಯವಾಡಲಿದೆ. ಇನ್ನೂ ಆರು ದಿನಗಳ ದೀರ್ಘ ಅಂತರ ಇರುವುದರಿಂದ ಧೋನಿ ಪಡೆಗೆ ಬಲಿಷ್ಟವಾಗಿ ಕಮ್‌ಬ್ಯಾಕ್‌ ಮಾಡಲು ಇದೊಂದು ಉತ್ತಮ ಅವಕಾಶ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2GdRGLH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...