ನೆಟ್ಟಣಿಗೆ ಮುಡ್ನೂರು ಕ್ಷೇತ್ರಕ್ಕೆ ಜಲಜೀವನ್‌ ಮಿಷನ್‌ನಡಿ 1.75 ಕೋಟಿ ಅನುದಾನ, ನಾಲ್ಕು ಗ್ರಾಮಗಳಿಗೆ ಹಂಚಿಕೆ!

ತಿಂಗಳಾಡಿ: ಸರಕಾರದ ಜಲಜೀವನ್‌ ಮಿಷನ್‌ ಯೋಜನೆಯಡಿ ಅನುದಾನವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಿಂದ ಜಿಲ್ಲೆಯ ನಾನಾ ಗ್ರಾಮಗಳಿಗೆ ಹಂಚಿಕೆ ಮಾಡಲಾಗಿದೆ. ಪುತ್ತೂರು ತಾಲೂಕಿನ ಜಿಪಂ ಕ್ಷೇತ್ರಕ್ಕೆ ಒಟ್ಟು 1.75 ಕೋಟಿ ಲಭಿಸಿದ್ದು, ಕ್ಷೆತ್ರದ ನಾಲ್ಕು ಗ್ರಾಮಗಳಿಗೆ ಹಂಚಲಾಗಿದೆ. ಸೋಮವಾರ ನೆಟ್ಟಣಿಗೆ ಮುಡ್ನೂರು ಕ್ಷೇತ್ರದ ಕೆದಂಬಾಡಿ, ಕೆಯ್ಯೂರು, ಅರಿಯಡ್ಕ ಮತ್ತು ನೆಟ್ಟಣಿಗೆ ಮುಡ್ನೂರು ಗ್ರಾಮಗಳಲ್ಲಿ ಜಿಪಂ ಅಧ್ಯಕ್ಷೆ ಹಾಗೂ ಕ್ಷೇತ್ರದ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ನೇತೃತ್ವದ ಅಧಿಕಾರಿಗಳ ತಂಡ ಸಭೆ ನಡೆಸಿ ಅನುದಾನವನ್ನು ಬಳಕೆ ಮಾಡುವ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಪುತ್ತೂರು ತಾಲೂಕಿನಲ್ಲಿಯೇ ನೆಟ್ಟಣಿಗೆ ಮುಡ್ನೂರು ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ನೀಡಲಾಗಿದೆ. ಅನುದಾನವನ್ನು ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮರ್ಪಕವಾಗಿ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಗ್ರಾಮದಲ್ಲಿರುವ ಎಲ್ಲ ಮನೆಗಳಿಗೂ ಕುಡಿಯುವ ನೀರು ಒದಗಿಸಲು ಈ ಅನುದಾನ ಬಳಕೆ ಮಾಡಲಾಗುತ್ತದೆ. ಪೈಪ್‌ ಲೈನ್‌ ಕಾಮಗಾರಿ, ಟ್ಯಾಂಕ್‌ ಮತ್ತು ಕೊಳವೆ ಬಾವಿ ನಿರ್ಮಾಣ ಮಾಡುವಲ್ಲಿ ಅನುದಾನ ಬಳಕೆ ಮಾಡಲಾಗುತ್ತದೆ. ಇದರಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥವಾಗಲಿದೆ ಎಂದರು. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಯೋಜನೆಯ ಬಗ್ಗೆ ಮಾಹಿತಿ ನೀಡಿ, ಯೋಜನೆಯನ್ನು ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರು. ನಾಲ್ಕು ಗ್ರಾಪಂ ಕಚೇರಿಗಳಲ್ಲಿ ನಡೆದ ಸಭೆಯಲ್ಲಿ ಕೆಯ್ಯೂರು ಗ್ರಾಪಂ ಪಿಡಿಒ ಸುಬ್ರಹ್ಮಣ್ಯ, ಕೆದಂಬಡಿ ಪಿಡಿಒ ಅಜಿತ್‌ ಜಿ.ಕೆ., ಅರಿಯಡ್ಕ ಪಿಡಿಒ ಪದ್ಮಕುಮಾರಿ, ನೆಟ್ಟಣಿಗೆ ಮುಡ್ನೂರು ಪಿಡಿಒ ಸಂದೇಶ್‌, ಜಿಲ್ಲಾನೀರಾವರಿ ಮತ್ತು ನೈರ್ಮಲ್ಯ ಇಲಾಖೆಯ ಭರತ್‌, ಜಿಪಂ ಎಂಜನಿಯರ್‌ ಶ್ರುತಿ, ಜಲಜೀವನ್‌ ಮಿಷನ್‌ ಅಧಿಕಾರಿ ಅಶ್ವಿನ್‌, ತಾಪಂ ಸದಸ್ಯೆ ಭವಾನಿ ಚಿದಾನಂದ, ರಾಮ ಪಾಂಬಾರು ಹಾಗೂ ಗ್ರಾಪಂ ಮಾಜಿ ಸದಸ್ಯರು ಉಪಸ್ಥಿತರಿದ್ದರು. ಯಾವ ಗ್ರಾಮಕ್ಕೆ ಎಷ್ಟೆಷ್ಟು ಅನುದಾನ
  • ಅರಿಯಡ್ಕ; 54.10 ಲಕ್ಷ
  • ಕೆದಂಬಡಿ: 26 ಲಕ್ಷ
  • ಕೆಯ್ಯೂರು: 35 ಲಕ್ಷ
  • ನೆಟ್ಟಣಿಗೆ ಮುಡ್ನೂರು: 60 ಲಕ್ಷ


from India & World News in Kannada | VK Polls https://ift.tt/30jp9M5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...