ವಿಕ ವೆಬ್ ಬಿಗ್ ಇಂಪ್ಯಾಕ್ಟ್: ದಶಕಗಳಿಂದ ವೀರಾಪುರ ಜನತೆಗೆ ರಸ್ತೆ ಕನಸು; ಎಚ್ಚೆತ್ತ ಆಡಳಿತ, ಕೂಡಿ ಬಂದ ರೋಡ್ ಭಾಗ್ಯ!

ಸಿರಾಜ್ ಅಹಮದ್ ಕೆ.ಎ ಕೊಡಿಗೆನಹಳ್ಳಿ ಕೊಡಿಗೇನಹಳ್ಳಿ (ಮಧುಗಿರಿ ತಾ): ನಲ್ಲಿ ಪ್ರಕಟವಾದ ವರದಿಯ ಪರಿಣಾಮ ಇಂದು ವೀರಪುರ ಜನತೆಯ ಕನಸು ನನಸಾಗಿದೆ. ಬರಪೀಡಿತ ತಾಲೂಕಿನ ಗಡಿಭಾಗದಲ್ಲಿ ದಶಕಗಳೇ ಕಳೆದರೂ ಕುಗ್ರಾಮವಾಗಿದ್ದ ಗ್ರಾಮಕ್ಕೆ ಇದೀಗಾ ರಸ್ತೆಯ ವ್ಯವಸ್ಥೆಯಾಗಿದೆ. ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಚಿಕ್ಕಮಾಲೂರು ಗ್ರಾಪಂ ವ್ಯಾಪ್ತಿಯ ಸಿ ವೀರಾಪುರ ಗ್ರಾಮದ ಜನ ಕಾಣದ ರಸ್ತೆಯಿಂದ ಹೈರಾಣಾಗಿದ್ದರು. ಈ ಗ್ರಾಮದಲ್ಲಿ ಸುಮಾರು 160 ಕುಟುಂಬಗಳಿದ್ದು, 900 ಜನ ಸಂಖ್ಯೆ ಇದ್ದು, ಈ ಗ್ರಾಮದ ಮೂಲಕ ವೀರನಾಗೇನಹಳ್ಳಿ, ಕಾಳೇನಹಳ್ಳಿ, ಹೊಸಹಳ್ಳಿ, ತಿಗಳರಹಳ್ಳಿ, ವಡ್ಡರಹಟ್ಟಿ ಸೇರಿದಂತೆ ಆರು ಹಳ್ಳಿಯ ಜನತೆ ಇದೇ ರಸ್ತೆಯಲ್ಲಿ ಸಂಚರಿಸಬೇಕು. ಹದಗೆಟ್ಟ ರಸ್ತೆಯಿಂದ ನಿತ್ಯ ನರಕಯಾತನೆ ಅನುಭವಿಸುತ್ತಿದ್ದು ಪ್ರತಿ ಚುನಾವಣೆಯಲ್ಲೂ ಮತ ಕೇಳಲು ಬರುವ ಜನಪ್ರತಿನಿಧಿಗಳು ಮತ್ತೆ ಚುನಾವಣೆವರೆಗೂ ಇತ್ತ ಕಡೆ ದರ್ಶನ ಮಾಡುವುದಿಲ್ಲ. ಜನ ಪ್ರತಿನಿಧಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದರು. ಈ ಬಗ್ಗೆ ವಿಜಯ ಕರ್ನಾಟಕ ವೆಬ್ 'ದಶಕಗಳು ಉರುಳಿದರೂ ವೀರಾಪುರ ವೀರರಿಗಿಲ್ಲ ಡಾಂಬರ್ ರೋಡ್: ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ' ಎಂಬ ತಲೆ ಬರಹದಡಿ ಗ್ರಾಮದ ಬಗ್ಗೆ ಸಂಪೂರ್ಣ ಚಿತ್ರಣವನ್ನು ವಿಕೆ ವೆಬ್ ನಲ್ಲಿ ಪ್ರಕಟಪಡಿಸಿತ್ತು. ಈ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ತೆರೆದು ಗ್ರಾಮಕ್ಕೆ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ವಿಕ ವರದಿಗೆ ಗ್ರಾಮಸ್ಥರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/341CBW2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...