ಟೊಕಿಯೊ: ಜಪಾನ್‌ನ ನೂತನ ಪ್ರಧಾನಿಯಾಗಿ ಇತ್ತೀಚೆಗೆ ಆಯ್ಕೆಯಾಗಿರುವ ಯೋಷಿಹಿಡೆ ಸುಗಾ ಅವರಿಗೆ ಇದೇ ಮೊದಲ ಬಾರಿ ದೂರವಾಣಿ ಕರೆ ಮಾಡಿದ , ಆಡಳಿತ ಯಶಸ್ಸಿನ ಶುಭಕೋರಿದರು. ಇದೇ ವೇಳೆ, ಗಣ್ಯರ ನಡುವಿನ ಮಾತುಕತೆಗಳು ಪರಸ್ಪರ ರಕ್ಷಣಾ ಸಹಕಾರ ಮತ್ತು ಜಾಗತಿಕ ಪಾಲುಗಾರಿಕೆ ವಿಷಯಗಳತ್ತ ವಾಲಿದವು. ಕಳೆದ ಐದು ವರ್ಷಗಳಿಂದ ಉಭಯ ದೇಶಗಳ ನಡುವೆ ಅತ್ಯುತ್ತಮ ಬಾಂಧವ್ಯ ಬೆಳೆದು ಬಂದಿದೆ. ಮುಂದಿನ ಹಂತಕ್ಕೆ ಇದನ್ನು ಇನ್ನಷ್ಟು ಬಲಪಡಿಸುವ ಸದಾಯಶವನ್ನು ಉಭಯ ನಾಯಕರೂ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಶಿಂಜೊ ಅಬೆ ಅವರ ಉತ್ತರಾಧಿಕಾರಿಯಾಗಿ, ಅವರ ನಂಬಿಕಸ್ಥ ಯೋಷಿಹಿಡೆ ಸೆಪ್ಟೆಂಬರ್ 14ರಂದು ಜಪಾನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಯಾವುದರ ಬಗ್ಗೆ ಚರ್ಚೆ!ಮುಂಬೈ-ಅಹಮದಾಬಾದ್ ಹೈಸ್ಪೀಡ್ ಬುಲೆಟ್ ರೈಲು ಯೋಜನೆ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು. ಅಲ್ಲದೆ ಭದ್ರತೆ ಮತ್ತು ಆರ್ಥಿಕ ವಿಷಯಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸುವ ಬಗ್ಗೆ ಯೋಷಿಹಿಡೆ ಸುಗಾ ಅವರು ಪ್ರಧಾನಿ ಮೋದಿಗೆ ಭರವಸೆ ನೀಡಿದರು. ಅಲ್ಲದೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ ವ್ಯವಹಾರಗಳ ಸಂಬಂಧ ಮುಂದಿನ ದಿನಗಳಲ್ಲಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಸುಮಾರು 25 ನಿಮಿಷಗಳ ಕಾಲ ಫೋನ್ ಮೂಲಕ ಮಾತನಾಡಿದ ಉಭಯ ದೇಶದ ಪ್ರಧಾನಿಗಳು ದ್ವಿಪಕ್ಷೀಯ ಸಹಭಾಗಿತ್ವಕ್ಕೆ ಒತ್ತು ನೀಡುವುದಾಗಿ ಹೇಳಿದ್ದಾರೆ.
from India & World News in Kannada | VK Polls https://ift.tt/331xDsW