ಸದನದಲ್ಲಿ ಭೂಸುಧಾರಣಾ ಕಾಯಿದೆ ಗದ್ದಲ: ಸಾಭಾತ್ಯಾಗ ಮಾಡಿದ ಕಾಂಗ್ರೆಸ್‌

ಬೆಂಗಳೂರು: ಭೂಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ ಶನಿವಾರ ಸದನದಲ್ಲಿ ಗದ್ದಲದ ವಾತಾವರಣ ಏರ್ಪಟ್ಟಿತು. ಕಾಯಿದೆಯ ತಿದ್ದುಪಡಿ ಕುರಿತಂತೆ ಕಂದಾಯ ಅಧಿಕಾರಿ ಆರ್‌. ಅಶೋಕ್ ಅವರು ವಿಧಾನಸಭೆಯಲ್ಲಿ ವಿವರಣೆ ನೀಡುತ್ತಿದ್ದ ಸಂದರ್ಭ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದವು. ಕಾಂಗ್ರೆಸ್ ಸದಸ್ಯರು ಕಾಯಿದೆ ತಿದ್ದುಪಡಿಗೆ ಧಿಕ್ಕಾರ ಕೂಗಿದರು. ಕಾಂಗ್ರೆಸ್ ಸದಸ್ಯರೆಲ್ಲರೂ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬಿಲ್ ಪ್ರತಿ ಹರಿದು ಹಾಕಿ ಸಭಾತ್ಯಾಗ ಮಾಡಿದರು. ಸರ್ಕಾರ ರೈತ ವಿರೋಧಿ ಎಂದು ಅಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಆರ್. ಆಶೋಕ್ ಅವರು ಮಾತು ಮುಂದುವರಿಸಿದರು. ಕಾಂಗ್ರೆಸ್ ಅವಧಿಯಲ್ಲಿ ಭೂ ಖರೀದಿ ಯುನಿಟ್ ಹೆಚ್ಚಳ ಮಾಡಿದ್ದಾರೆ. 79 ಎ ಹಾಗೂ 79ಬಿ ಅಪ್ರಸ್ತುತ ಎಂದು ಕಾಂಗ್ರೆಸ್ ಅವಧಿಯಲ್ಲಿ ಕ್ಯಾಬಿನೆಟ್ ಉಪ ಸಮಿತಿ ವರದಿ ಕೊಟ್ಟಿದೆ. 2015 ರಲ್ಲಿ 20 ಇದ್ದಿದ್ದನ್ನು 40 ಯುನಿಟ್ ಗೆ ಏರಿಕೆ ಮಾಡಿದ್ದು ಕಾಂಗ್ರೆಸ್ ಎಂದು ಆರ್‌. ಅಶೋಕ್ ಅವರು ತಿಳಿಸಿದರು. 79 ಎ ಹಾಗೂ 79 ಬಿ ರದ್ದು ಮಾಡಬೇಕು ಎಂದು ರೈತ ಮುಖಂಡ ಪ್ರೊ. ‌ನಂಜುಡಸ್ವಾಮಿ ಅವರು ವಿಧಾನಸಭೆಯಲ್ಲಿ ಕೂಡ ಹೇಳಿದ್ದರು‌ ಎಂದು ಕಾಯಿದೆಯ ತಿದ್ದುಪಡಿಯನ್ನು ಆರ್‌. ಅಶೋಕ್‌ ಅವರು ಸಮರ್ಥನೆ ಮಾಡಿಕೊಂಡರು.


from India & World News in Kannada | VK Polls https://ift.tt/2G4HXYt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...