ಸೋಮವಾರ ಕರ್ನಾಟಕ ಬಂದ್: ಕಾಂಗ್ರೆಸ್, ಜೆಡಿಎಸ್ ನಿಲುವೇನು? ಬಿಜೆಪಿ ವಾದವೇನು?

ರಾಜ್ಯ ಸರ್ಕಾರದ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಕೇಂದ್ರದ ಕೃಷಿ ಮಸೂದೆ ವಿರುದ್ಧ ಸಿಡಿದೆದ್ದಿರುವ ರೈತರು, ಸೋಮವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಈ ಬಂದ್‌ಗೆ ರಾಜಕೀಯ ಪಕ್ಷಗಳಿಂದ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವರಿಷ್ಠ ಎಚ್‌. ಡಿ. ದೇವೇಗೌಡ, 'ರಾಜ್ಯ ಸರ್ಕಾರ ಜಾರಿ ಮಾಡಿರುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ರಾಜ್ಯದ ರೈತ ಸಂಘಗಳು ಹಾಗೂ ಅನೇಕ ಸಂಘಟನೆಗಳು ಹಮ್ಮಿಕೊಂಡಿರುವ ಸೋಮವಾರದ ಕರ್ನಾಟಕ ಬಂದ್‌ಗೆ ನಮ್ಮ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿರುತ್ತದೆ ಎಂದು ಮಾಧ್ಯಮಗಳ ಮುಖೇನ ತಿಳಿಸಲು ಇಚ್ಛೆಪಡುತ್ತೇನೆ' ಎಂದಿದ್ದಾರೆ. ಇನ್ನು ರಾಜ್ಯ ಕೂಡಾ ಸೋಮವಾರದ ಬಂದ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಕಳೆದ ಶುಕ್ರವಾರ ಉತ್ತರ ಭಾರತದ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ಗೂ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿತ್ತು. ಸಹಜವಾಗಿಯೇ ಸೋಮವಾರದ ಕರ್ನಾಟಕ ಬಂದ್‌ಗೂ ಕಾಂಗ್ರೆಸ್‌ ಬೆಂಬಲ ಇರಲಿದೆ. ಇತ್ತ, ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ವಿರೋಧ ವ್ಯಕ್ತಪಡಿಸಿರುವ , ಕೃಷಿ ಮಸೂದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ರೈತಪರ ಎಂದು ವಾದಿಸಿವೆ. ದಲ್ಲಾಳಿ ವ್ಯವಸ್ಥೆಯಿಂದ ರೈತರನ್ನು ಮುಕ್ತರನ್ನಾಗಿ ಮಾಡೋದೇ ತಪ್ಪಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಇನ್ನು ಸಹಕಾರ ಸಚಿವ ಎಸ್‌ಟಿ ಸೋಮಶೇಖರ್ ಅವರಂತೂ, ರಾಜಕಾರಣಕ್ಕಾಗಿ ತಿದ್ದುಪಡಿ ಮಸೂದೆಯನ್ನು ವಿರೋಧಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.


from India & World News in Kannada | VK Polls https://ift.tt/3467jNN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...