ಉಕ್ರೇನ್‌: ಲ್ಯಾಂಡಿಂಗ್‌ ವೇಳೆ ಸೇನಾ ವಿಮಾನಪತನ, ವಾಯುಸೇನೆಯ 22 ಟ್ರೈನಿ ವಿದ್ಯಾರ್ಥಿಗಳು ಸಾವು!

ಕೈವ್: ಸೇನಾ ವಿಮಾನವೊಂದು ಲ್ಯಾಂಡಿಂಗ್‌ ನಡೆಸುವ ವೇಳೆ ಪತನವಾಗಿದ್ದ ತರಬೇತಿ ಪಡೆದ ವಾಯುಸೇನೆಯ ಕನಿಷ್ಠ 22 ಯುವ ವಿದ್ಯಾರ್ಥಿಗಳು ಸಾವನಪ್ಪಿರುವ ಘಟನೆ ಉಕ್ರೇನ್‌ನ ಖಾರ್ಕಿವ್‌ ಬಳಿ ನಡೆದಿದೆ. ಉಕ್ರೇನ್ ರಾಜಧಾನಿ ಕೈವ್‍ನಿಂದ ಸುಮಾರು 400 ಕಿ.ಮೀ. ದೂರವಿರುವ ಚುಹುಯಿವ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ನಡೆಸುವ ವೇಳೆ ಈ ಅವಘಡ ಸಂಭವಿಸಿದೆ. ಆಂಟೊನೊವ್ -26 ಎಂಬ ಹೆಸರಿನ ಇದಾಗಿದ್ದು ಪತನದ ತೀವ್ರತೆ ಭಾರೀ ಬೆಂಕಿ ಸಂಭವಿಸಿದ್ದು, 22 ಮಂದಿ ಸಜೀವ ದಹನರಾಗಿದ್ದಾರೆ ಎಂದು ಅಲ್ಲಿನ ಸರಕಾರ ಮಾಹಿತಿ ನೀಡಿದೆ. ಇನ್ನು ಈ ವಿಮಾನದಲ್ಲಿ ಒಟ್ಟು 27 ಮಂದಿಯಿದ್ದು ಈ ಪೈಕಿ 22 ಮಂದಿ ಸಾವನಪ್ಪಿದ್ದಾರೆ. ಇಬ್ಬರಿಗೆ ಗಂಭಿರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಮೂರು ಮಂದಿಗಾಗಿ ಹುಡುಕಾಟ ಆರಂಭವಾಗಿದೆ ಎಂದು ತುರ್ತು ಸಚಿವಾಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಿಲಿಟರಿ ಏರ್‌ಪೋರ್ಟ್‌ಗೆ ಲ್ಯಾಂಡಿಂಗ್‌ ನಡೆಸುವಾಗ ಅವಘಡ ಸಂಭವಿಸಿದ್ದು ಈ ಬಗ್ಗೆ ತನಿಖೆ ನಡೆಸುವುದಾಗಿ ಅಲ್ಲಿನ ಸರಕಾರ ತಿಳಿಸಿದೆ. ಪತನಕ್ಕೆ ಘರ್ಷಣೆಯ ಲಿಂಕ್‌? ಸದ್ಯ ಸರಕಾರದ ಸೇನೆ ಹಾಗೂ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ನಡುವೆ ಪೂರ್ವ ಉಕ್ರೇನ್‌ ಭಾಗದಲ್ಲಿ ಸಂಘರ್ಷ ನಡೆಯುತ್ತಿದೆ. ಇನ್ನು ಇದೇ ಪ್ರದೇಶದಲ್ಲಿ ಸೇನಾ ವಿಮಾನ ಪತನವಾಗಿದ್ದು ಈ ಘಟನೆಗೂ ಸಂಘರ್ಷಕ್ಕೂ ಏನಾದರು ಲಿಂಕ್‌ ಇದಿಯಾ ಎಂಬುವುದರ ಬಗ್ಗೆ ಯಾವುದೇ ಕುರುಹುಗಳಿಲ್ಲ ಎಂದು ಅಲ್ಲಿನ ತುರ್ತು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.


from India & World News in Kannada | VK Polls https://ift.tt/2FSHUza

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...