ರಂಧ್ರಗಳಿರುವ N-95 ಮಾಸ್ಕ್ ಕೊರೊನಾ ಹರಡುವಿಕೆಯನ್ನು ತಡೆಯದು: ಕೇಂದ್ರದ ಎಚ್ಚರಿಕೆ!

ನವದೆಹಲಿ: ಮಾರಕ ಹಾವಳಿಯ ಸಂದರ್ಭದಲ್ಲಿ ಎಲ್ಲರೂ ಫೇಸ್ ಮಾಸ್ಕ್ ಮೊರೆ ಹೋಗಿರುವುದು ಸಾಮಾನ್ಯ ಸಂಗತಿಯಾಗಿದೆ. ಸರ್ಕಾರ ಖುದ್ದು ಫೇಸ್ ಮಾಸ್ಕ್ ಧರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಅದರಂತೆ ಸದ್ಯ ದೇಶದಲ್ಲಿ ವಿವಿಧ ರೀತಿಯ ಫೇಸ್ ಮಾಸ್ಕ್‌ಗಳು ಬಳಕೆಯಲ್ಲಿದ್ದು, ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ. ಭಾರೀ ಸಂಖ್ಯೆಯಲ್ಲಿ N-95 ಮಾಸ್ಕ್‌ಗಳನ್ನು ಜನ ಖರೀದಿಸಿದ್ದಾರೆ. ಆದರೆ N-95 ಮಾಸ್ಕ್‌ ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ರಂಧ್ರಗಳಿರುವ N-95 ಮಾಸ್ಕ್‌ ಧಾರಣೆಯಿಂದ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಎಚ್ಚರಿಸಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ರಾಜೀವ್ ಗರ್ಗ್, ಎಲ್ಲಾ ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ರಂಧ್ರಗಳಿರುವ N-95 ಮಾಸ್ಕ್ ಧರಿಸುವುದರಿಂದ ಕೊರೊನಾ ವೈರಸ್ ದೇಹದೊಳಗೆ ಸೇರುವುದನ್ನು ಅಥವಾ ಸೋಂಕಿತ ವ್ಯಕ್ತಿಯ ದೇಹದಿಂದ ಹೊರಗೆ ಬರುವುದನ್ನು ತಪ್ಪಿಸಲಾಗದು ಎಂದು ಕೇಂದ್ರ ಎಚ್ಚರಿಸಿದೆ. ರಂಧ್ರಗಳಿರುವ N-95 ಮಾಸ್ಕ್ ಧರಿಸುವುದರಿಂದ ವೈರಾಣು ಹೊದ ಬರುವುದನ್ನು ತಪ್ಪಿಸಲಾಗುವುದಿಲ್ಲ ಎಂದಿರುವ ಕೇಂದ್ರ ಆರೋಗ್ಯ ಇಲಾಖೆ, N-95 ಮಾಸ್ಕ್ ಸರಿಯಾದ ಬಳಕೆಗೆ ಮಾರ್ಗಸೂಚಿ ಅಗತ್ಯವಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ N-95 ಮಾಸ್ಕ್‌ಗಳ ಅನುಚಿತ ಬಳಕೆಯನ್ನು ತಡೆಯಲು ಸೂಕ್ತ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ರಾಜೀವ್ ಗರ್ಗ್ ಬರೆದಿರುವ ಪತ್ರದಲ್ಲಿ ಸ್ಪಷ್ಟ ಸೂಚನೆ ನೀಡಲಾಗಿದೆ.


from India & World News in Kannada | VK Polls https://ift.tt/30utKu5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...