ಭಾರತದಲ್ಲಿ ಒಂದೇ ದಿನ 37,148 ಕೊರೊನಾ‌, ಈವರೆಗೆ 1.43 ಕೋಟಿ ಮಂದಿಗೆ ಕೋವಿಡ್‌ ಪರೀಕ್ಷೆ!

ನವದೆಹಲಿ: ಲಾಕ್‌ಡೌನ್‌ ಸಡಿಲಿಕೆ ನಂತರ ದೇಶದಲ್ಲಿ ಕೊರೊನಾ ಓಟ ವೇಗವಾಗಿದೆ. ದಿನ ನಿತ್ಯ ಮೂವತ್ತು ಸಾವಿರಕ್ಕೂ ಅಧಿಕ ಕೊರೊನಾ ಪಾಸಿಟಿವ್‌ ಕೇಸ್‌ಗಳು ವರದಿಯಾಗುತ್ತಿವೆ. ಇದೀಗ ಸೋಮವಾರ ಒಂದೇ ದಿನದಲ್ಲಿ 37,148 ಕೊರೊನಾ ಪ್ರಕರಣಗಳು ಹಾಗೂ 587 ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11,55,191ಕ್ಕೆ ತಲುಪಿದೆ. ಈ ಪೈಕಿ 4,02,529 ಸಕ್ರಿಯ ಪ್ರಕರಣಗಳಿವೆ. ಇನ್ನು ಈವರೆಗೆ 7,24,578 ಜನರ ಗುಣಮುಖರಾಗಿದ್ದಾರೆ. ಅಲ್ಲದೆ 587 ಸಾವಿನೊಂದಿಗೆ ದೇಶದಲ್ಲಿ ಈವರೆಗೆ ಕೊರೊನಾದಿಂದ 28084 ಮೃತಪಟ್ಟಂತೆ ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ನಿತ್ಯ ಏರಿಕೆಯಾಗುತ್ತಿದೆ. ಈ ರೀತಿ ಮುಂದುವರಿದರೆ ಕಷ್ಟ ಎನ್ನುವ ವಿಚಾರಗಳು ವೈದ್ಯಕೀಯ ಪರಿಣಿತರಿಂದ ಕೇಳಿ ಬರುತ್ತಿದೆ. ಆದರೆ ದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದು ಸರಕಾರ ಹಾಗೂ ಜನರನ್ನ ಆತಂಕಕ್ಕೀಡು ಮಾಡಿದೆ. ದೇಶದಲ್ಲಿ ಎಷ್ಟು ಮಂದಿಗೆ ನಡೆದಿದೆ?ಇನ್ನು ದೇಶದಲ್ಲಿ ಈವರೆಗೆ ಅಂದರೆ ಜುಲೈ 20ರ ವರೆಗೆ 1,43,81,303 ಸ್ಯಾಂಪಲ್ಸ್‌ಗಳನ್ನ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಈ ಪೈಕಿ ಸೋಮವಾರ(ನಿನ್ನೆ) ಒಂದೇ ದಿನದಲ್ಲಿ 3,33,395 ಮಂದಿಯ ಕೊರೊನಾ ಪರೀಕ್ಷೆ ನಡೆದಿದೆ ಎಂದು ಈ ಸಂಸ್ಥೆ ಮಾಹಿತಿ ನೀಡಿದೆ. ಹೆಚ್ಚು ಹೆಚ್ಚು ಪರೀಕ್ಷೆ ನಡೆಸುವುದರಿಂದ ಹೆಚ್ಚು ಕೊರೊನಾ ಪಾಸಿಟಿವ್‌ ಪತ್ತೆ ಹಚ್ಚಬಹುದು ಅಲ್ಲದೆ ಕೊರೊನಾ ಹರಡುವುದನ್ನ ತಡೆಗಟ್ಟಬಹುದು ಎನ್ನುವುದು ಹಿಂದಿನಿಂದಲೂ ಕೇಳಿಬರುತ್ತಿರುವ ಮಾತು.


from India & World News in Kannada | VK Polls https://ift.tt/3jox7LR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...