ಲಸಿಕೆ ಪ್ರಯೋಗದ ರೋಚಕ ಘಟ್ಟದ ನಡುವೆ ಪ್ರಧಾನಿ ಮೋದಿ ಅವರಿಂದ ಮನ್ ಕಿ ಬಾತ್!

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದಾಗಿ ಒಂದು ವರ್ಷ ತುಂಬುತ್ತಿರುವ ವೇಳೆ, ಇಂದು(ಭಾನುವಾರ) ತಮ್ಮ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇಂದು 11ಗಂಟೆಗೆ ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದು, ಪ್ರಮುಖವಾಗಿ ಹಾವಳಿಯನ್ನು ಎದುರಿಸುವಲ್ಲಿ ದೇಶ ಮಹತ್ವದ ಘಟ್ಟ ತಲುಪಿರುವುದನ್ನು ಪ್ರಧಾನಿ ಮೋದಿ ಉಲ್ಲೇಖಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದಾಗಿ ಒಂದು ವರ್ಷ ಹಾಗೂ ತ್ರಿವಳಿ ತಲಾಖ್ ನಿಷೇಧಕ್ಕೊಳಗಾಗಿ ಒಂದು ವರ್ಷ ತುಂಬುತ್ತಿದ್ದು, ಕೊರೊನಾ ವೈರಸ್‌ ಲಸಿಕೆಯ ಮಾನವ ಪ್ರಯೋಗ ಹಾಗೂ ಮುಂಬರುವ ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್15 ) ಕುರಿತು ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ಕೊರೊನಾ ವೈರಸ್ ವಿರುದ್ಧದ ದೇಶದ ಹೋರಾಟದ ಹಾದಿಯನ್ನು ಜನತೆಯ ಮುಂದಿಡಲಿರುವ ಪ್ರಧಾನಿ ಮೋದಿ, ಈ ನಿಟ್ಟಿನಲ್ಲಿ ಸಾಧಿಸಿದ ಪ್ರಗತಿ ಹಾಗೂ ಸಾಗಬೇಕಾದ ಮಾರ್ಗದ ಕುರಿತು ಜನರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಸ್ವದೇಶಿ ಲಸಿಕೆಯ ಮಾನವ ಪ್ರಯೋಗ ನಡೆಯುತ್ತಿರುವುದು ದೇಶದ ಗಮನ ಸೆಳೆದಿದ್ದು, ಈ ನಿಟ್ಟಿನಲ್ಲಿ ಮುಂದಿನ ಬೆಳವಣಿಗೆಗಳ ಕುರಿತು ಪ್ರಧಾನಿ ಮಾತನಾಡಲಿದ್ದಾರೆ ಎಂದೂ ನಿರೀಕ್ಷಿಸಲಾಗಿದೆ.


from India & World News in Kannada | VK Polls https://ift.tt/3jHRpjJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...