ಪ್ಯಾಂಗಾಂಗ್: ದೇಶದಲ್ಲಿ ಒಂದೇ ಒಂದು ಪ್ರಕರಣವಿಲ್ಲ ಎಂದು ಬೀಗುತ್ತಿದ್ದ , ಇದೀಗ ಮೊದಲ ಕೊರೊನಾ ಸೋಂಕು ಪ್ರಕರಣಕ್ಕೆ ಬೆಚ್ಚಿ ಬಿದ್ದಿದೆ. ಉ.ಕೊರಿಯಾದ ಕಾಯ್ಸಾಂಗ್ ನಗರದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ದಾಖಲಾಗಿದ್ದು, ಇಡೀ ನಗರದಲ್ಲಿ ಕಠಿಣ ಜಾರಿಗೊಳಿಸುವಂತೆ ಸರ್ವಾಧಿಕಾರಿ ಕಿಮ್ ಹಾಂಗ್ ಉನ್ ಆದೇಶ ನೀಡಿದ್ದಾನೆ ಎನ್ನಲಾಗಿದೆ. ಕಾಯ್ಸಾಂಗ್ ನಗರದಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೇ ತುರ್ತು ಸಭೆ ನಡೆಸಿ, ಲಾಕ್‌ಡೌನ್ ಆದೇಶವನ್ನು ಜಾರಿಗೊಳಿಸಿದರು ಎಂದು ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಮೂರು ವರ್ಷದ ಹಿಂದೆ ದಕ್ಷಿಣ ಕೊರಿಯಾಗೆ ವಲಸೆ ಹೋಗಿದ್ದ ವ್ಯಕ್ತಿ ಇದೀಗ ದೇಶಕ್ಕೆ ಮರಳಿದ್ದು, ಆತನಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ. ಇದು ಉತ್ತರ ಕೊರಿಯಾಧ ಮೊದಲ ಅಧಿಕೃತ ಕೊರೊನಾ ವೈರಸ್ ಪ್ರಕರಣ ಎನ್ನಲಾಗಿದೆ. ಇಡೀ ವಿಶ್ವವೇ ಮಾರಕ ಕೊರೊನಾ ವೈರಸ್ ಹಾವಳಿಯಿಂದ ತತ್ತರಿಸುತ್ತಿರುವಾಗ, ಉತ್ತರ ಕೊರಿಯಾ ಮಾತ್ರ ಇದುವರೆಗೂ ತನ್ನಲ್ಲಿ ಒಂದೇ ಒಂದು ಕೊರೊನಾ ವೈರಸ್ ಪ್ರಕರಣ ಇಲ್ಲ ಎಂದು ವಾದಿಸುತ್ತಲೇ ಇತ್ತು.
from India & World News in Kannada | VK Polls https://ift.tt/2D7lV5L