ಡ್ರೋನ್‌ ಬಳಿಕ ಸಮುದ್ರದ ಕಣ್ಗಾವಲಿಗೆ ಅಮೆರಿಕದಿಂದ ಪೋಸಿಡಾನ್ ವಿಮಾನಗಳನ್ನ ಖರೀದಿಸಲು ಮುಂದಾದ ಭಾರತ!

ನವದೆಹಲಿ: ಭಾರತದ ಸಮುದ್ರಗಳ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಅಮೆರಿಕದಿಂದ ಮತ್ತೆ ದೀರ್ಘ ಶ್ರೇಣಿಯ ವಿಮಾನಗಳ ಖರೀದಿಗೆ ಭಾರತ ಮುಂದಾಗಿದೆ. ಒಟ್ಟು ಆರು ಪೋಸಿಡಾನ್ -8 ಐ ವಿಮಾನಗಳನ್ನ ಖರೀದಿಸುವ ಬಗ್ಗೆ ಸರಕಾರದೊಂದಿಗೆ ಭಾರತ ಔಪಚಾರಿಕ ಚರ್ಚೆ ನಡೆಸುತ್ತಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಸಮುದ್ರದ ಮೇಲಿನ ನಿಗಾಕ್ಕಾಗಿ ಅಮೆರಿಕದಿಂದ ಆರು ಪ್ರಿಡೇಟರ್-ಬಿ ಶಸ್ತ್ರಸಜ್ಜಿತ ಡ್ರೋನ್‌ಗಳ ಖರೀದಿಯ ರೂಪುರೇಶಗಳು ನಡೆಯುತ್ತಿರುವಾಗಲೇ ಇದೀಗ ಪಿ-8ಐ ವಿಮಾನಗಳ ಖರೀದಿಗೆ ಮುಂದಾಗಿದ್ದು ಭಾರೀ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಸದ್ಯ ಚೀನಾದೊಂದಿಗೆ ನಡೆಯುತ್ತಿರುವ ಬಿಕ್ಕಟ್ಟಿನ ಹಿನ್ನೆಲೆ ಖರೀದಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಅಲ್ಲದೇ ಸಮುದ್ರದ ಮೇಲಿನ ನಿಗಾ ಇತ್ತೀಚಿನ ದಿನಗಳಲ್ಲಿ ಅವಶ್ಯಕತೆ ಇರುವುದರಿಂದ ಖರೀದಿ ನಡೆಯುತ್ತಿದೆ ಎಂದು ತಿಳಿಸಿದೆ. ಸದ್ಯ ಇಂತಹುದೇ ವಿಮಾನವನ್ನ ಭಾರತೀಯ ಸಮುದ್ರಗಳು ಹಾಗೂ ಲಡಾಕ್‌ನಲ್ಲಿ ಕಣ್ಗಾವಲಿಗಾಗಿ ಭಾರತದ ಸೇನೆ ಬಳಸುತ್ತಿದೆ. ಎಲೆಕ್ಟ್ರೋ ಆಪ್ಟಿಕ್‌ ಸೆನ್ಸಾರ್‌ ಹಾಗೂ ರಾಡರ್‌ಗಳುಳ್ನ ಪೋಸಿಡಾನ್ -8 ಐ ಸಮುದ್ರದಲ್ಲಿ ನಡೆಯುವ ಚಲನವಲನಗಳ ನಿಗಾ ಇಡಲು ಉತ್ತಮವಾಗಿದೆ. ಅಲ್ಲದೇ ಕ್ಷಿಪಣಿಗಳು, ಟ್ರಾಪಿಡೋಗಳನ್ನ ಈ ವಿಮಾನದಲ್ಲಿ ಬಳಸಲು ಅವಕಾಶವಿದ್ದು, ಶತ್ರುಗಳ ಹುಟ್ಟಡಗಿಸುವುದರಲ್ಲಿ ಸಂಶಯವೇ ಇಲ್ಲ. 2009ರಲ್ಲಿ ಅಮೆರಿಕದ ಖ್ಯಾತ ಬೋಯಿಂಗ್‌ ಸಂಸ್ಥೆ ನಿರ್ಮಿಸುವ 8 ಪೋಸಿಡಾನ್ -8 ಐ ವಿಮಾನಗಳನ್ನ ಭಾರತೀಯ ನೇವಿ ಖರೀದಿಸಿತ್ತು. ಅಲ್ಲದೇ 2016ರ ಒಪ್ಪಂದ ಪ್ರಕಾರ ಇದೇ ವರ್ಷದ ಡಿಸೆಂಬರ್‌ಗೆ ನಾಲ್ಕು ಪೋಸಿಡಾನ್ -8ಪಿ ವಿಮಾನಗಳು ಬರಲಿದೆಯಂತೆ. ಆದರೂ ಅವಶ್ಯಕತೆಯ ಆಧಾರದ ಮೇಲೆ ಮತ್ತೆ ಆರು ವಿಮಾನಗಳನ್ನ ಖರೀದಿಸಲು ಸರಕಾರ ಮುಂದಾಗಿದೆ. ಅಲ್ಲದೇ ಸಮುದ್ರದ ಚಲನವಲನಗಳ ಮೇಲೆ ಕಣ್ಗಾವಲಿಡಲು ಅಮೆರಿಕದಿಂದ ಪ್ರಿಡೇಟರ್-ಬಿ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಖರೀದಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಡ್ರೋನ್‌ ಹಾಗೂ ಸಮುದ್ರದ ಮೂಲಕವೇ ಶತ್ರು ರಾಷ್ಟ್ರಗಳ ಕಿರಿಕ್‌ ಇರುವುದರಿಂದ ಈ ಖರೀದಿಗಳು ಮುಂಚೂಣಿಯಲ್ಲಿ ಕಾಣುತ್ತಿವೆ.


from India & World News in Kannada | VK Polls https://ift.tt/3f11Hrm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...