ಜಮ್ಮು-ಕಾಶ್ಮೀರ: ದುಷ್ಕೃತ್ಯ ನಡೆಸಲು ಯತ್ನಿಸುತ್ತಿದ್ದ ಓರ್ವ ಉಗ್ರನನ್ನ ಹೊಡೆದುರುಳಿಸಿದ ಸೇನೆ!

ಜಮ್ಮು-ಕಾಶ್ಮೀರ: ಕಣಿವೆ ರಾಜ್ಯದಲ್ಲಿ ದುಷ್ಕೃತ್ಯ ನಡೆಸಲು ಮುಂದಾಗುವ ಉಗ್ರರಿಗೆ ಸೇನೆ ತಕ್ಕ ಪಾಠ ಕಲಿಸುತ್ತಿದೆ. ಇದೀಗ ಬಳಿ ಓರ್ವ ಉಗ್ರನನ್ನ ಸೇನೆ ಹೊಡೆದುರುಳಿಸಿದೆ. ಶ್ರೀನಗರದ ಹೊರವಲಯದಲ್ಲಿರುವ ರನ್ಬಿರ್‌ಘರ್‌ ಬಳಿ ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಯೋಧರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳುವ ನಿಟ್ಟಿನಿಂದ ಉಗ್ರರು, ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣ ಸೇನೆ ಕೂಡ ಪ್ರತಿ ದಾಳಿ ನಡೆಸಿ ಓರ್ವ ಉಗ್ರನನ್ನ ಪರ ಲೋಕಕ್ಕೆ ಕಳುಹಿಸಿದೆ. ಇನ್ನು ಇಬ್ಬರು ಉಗ್ರರು ಅಡಗಿ ಕುಳಿತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ಉಗ್ರರು ಲಷ್ಕರೆ-ತಯ್ಬಾ ಸಂಘಟನೆಗೆ ಸೇರಿದ ಉಗ್ರರು ಎಂದು ತಿಳಿದುಬಂದಿದ್ದು ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಕೆಲವು ವಾರಗಳಿಂದ ಮುಂಜಾನೆ ಹಲವು ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನ ಯೋಧರು ನಡೆಸುತ್ತಿದ್ದಾರೆ. ಬೆಳ್ಳಂ ಬೆಳಗ್ಗೆಯೇ ಉಗ್ರರನ್ನ ಪರ ಲೋಕಕ್ಕೆ ಅಟ್ಟುವ ಕೆಲಸ ಮಾಡುತ್ತಿದೆ ಸೇನೆ. ಸದ್ಯ ಕಣಿವೆ ರಾಜ್ಯ ಟೆರರಿಸ್ಟ್‌ ಫ್ರೀ ರಾಜ್ಯವಾಗುವ ದಿಕ್ಕಿನಲ್ಲಿ ದಾಪುಗಾಲು ಇಡುತ್ತಿದೆ.


from India & World News in Kannada | VK Polls https://ift.tt/39rzGYO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...