ಬಾಗಲಕೋಟೆ: ದೇಶಕ್ಕೆ ಮಹಾಮಾರಿಯಾಗಿ ವಕ್ಕರಿಸಿರುವ ಕೊರೊನಾ ವೈರಸ್ ಸೋಂಕು ಈಗಾಗಲೇ ಹಲವಾರು ಜನರ ಪ್ರಾಣವನ್ನು ಬಲಿ ಪಡೆದುಕೊಂಡಿದೆ. ಲಕ್ಷಾಂತರ ಮಂದಿ ಸೋಂಕಿಗೆ ತುತ್ತಾಗಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ತೊಲಗುವಂತೆ ಬಾಗಲಕೋಟೆಯಲ್ಲಿ ದೇವರ ಮೊರೆ ಹೋಗಲಾಗಿದೆ. ಶ್ರಾವಣ ಮಾಸದ ಮಧ್ಯೆ ಕೊರೊನಾ ಮಹಾಮಾರಿ ತೊಲಗಿಸಲು ಭಕ್ತರು ಶಕ್ತಿ ದೇವತೆ ಬನಶಂಕರಿ ದೇವಿಯ ಮೊರೆ ಹೋಗಿದ್ದು ಮಾಡುವ ಮೂಲಕ ದೇವಿಯಲ್ಲಿ ಪ್ರಾರ್ಥಿಸೋಕೆ ಆರಂಭಿಸಿದ್ದಾರೆ. ಬಾದಾಮಿಯ ಐತಿಹಾಸಿಕ ಬನಶಂಕರಿ ದೇವಾಲಯ ನಾಡಿನ ಶಕ್ತಿಪೀಠಗಳಲ್ಲೊಂದಾಗಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದು, ಸಾಮಾನ್ಯ ದಿನಗಳಲ್ಲಿ ಇಲ್ಲಿಗೆ ನಿತ್ಯ ನೂರಾರು ಭಕ್ತರು ಆಗಮಿಸುತ್ತಿದ್ದರು. ಸದ್ಯ ಕೊರೊನಾ ರೋಗದಿಂದ ಎಲ್ಲ ಕಾರ್ಯಚಟುವಟಿಕೆಗಳು ನಿಂತಿದ್ದು, ಜನರಿಗೂ ಭಾರಿ ಸಂಕಷ್ಟ ಎದುರಾಗಿದೆ. ಹೀಗಾಗಿ ಕೊರೊನಾ ರೋಗ ದೇಶದಿಂದ ತೊಲಗಬೇಕು ಮತ್ತುಔಷಧೋಪಚಾರ ಬೇಗನೆ ಸಿಗಲಿ ಎಂದು ಇಂದಿನಿಂದ ಹನ್ನೊಂದು ದಿನಗಳ ಕಾಲ ಬಾದಾಮಿಯ ಬನಶಂಕರಿ ದೇವಿಗೆ ಲಕ್ಷ ಬಿಲ್ವಾರ್ಚನೆ ಅರ್ಪಿಸಲಾಗ್ತಿದೆ. ಇನ್ನು ಲಕ್ಷ ಬಿಲ್ವಾರ್ಚನೆ ಮಾಡುತ್ತಿದ್ದರೂ ಕೂಡ ಕೊರೊನಾ ಹರಡುವ ಭೀತಿಯಿಂದ ದೇಗುಲದಲ್ಲಿ ತೀರ್ಥ, ಅನ್ನ ಪ್ರಸಾದ ನಿಷೇಧ ಮಾಡಲಾಗಿದ್ದು, ಲೋಕ ಕಲ್ಯಾಣಾರ್ಥವಾಗಿ ವಿಶೇಷ ಬಿಲ್ವಾರ್ಚನೆ ಜೊತೆಗೆ ಮಹಾರುದ್ರಾಭಿಷೇಕವನ್ನೂ ಮಾಡಲಾಗ್ತಿದೆ.
from India & World News in Kannada | VK Polls https://ift.tt/30uEiJH