ಕೊರೊನಾದಿಂದಾಗಿ ಹೆಚ್ಚಾಗಲಿದೆಯಂತೆ ಮಾನವ ಕಳ್ಳ ಸಾಗಣೆ:ಕೇಂದ್ರ ಗೃಹ ಇಲಾಖೆ

ಹೊಸದಿಲ್ಲಿ: ಕೋವಿಡ್‌ ಸಾಂಕ್ರಾಮಿಕ ಹಾವಳಿಯಿಂದ ದೇಶದ ಆರ್ಥಿಕತೆ ಮೇಲೆ ತೀವ್ರ ಒತ್ತಡ ಬಿದ್ದಿದ್ದು ಸಂಕಷ್ಟಗಳು ತಲೆ ಎತ್ತಿವೆ. ಇದು ಮಾನವ ಕಳ್ಳಸಾಗಣೆಗೆ ದಾರಿ ಮಾಡಿಕೊಡುವ ಅಪಾಯ ಇದೆ ಎಂದು ಬುಧವಾರ ಆತಂಕ ವ್ಯಕ್ತಪಡಿಸಿದೆ. ಹೀಗಾಗಿ ಮಾನವ ಕಳ್ಳಸಾಗಣೆ ತಡೆಯಲು ಎಲ್ಲಾ ಜಿಲ್ಲೆಗಳಲ್ಲಿ ಮಾನವ ಕಳ್ಳಸಾಗಣೆ ತಡೆ ಘಟಕ ಸ್ಥಾಪಿಸಬೇಕು. ಪೊಲೀಸರಿಗೆ ವಿಶೇಷ ತರಬೇತಿ ನೀಡಿ, ಗಡಿ ಠಾಣೆಗಳ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳ ಮೇಲೆ ನಿಗಾ ಇಡಬೇಕು. ಸಂತ್ರಸ್ತರು ಮತ್ತು ಮಕ್ಕಳನ್ನು ಗುರುತಿಸಲು ಪಂಚಾಯಿತಿಗಳ ಸಹಾಯ ಪಡೆಯಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸಚಿವಾಲಯ ಪತ್ರ ಬರೆದಿದೆ. ಎಲ್ಲಾ ಜಿಲ್ಲೆಗಳಲ್ಲಿ ಮಾನವ ಕಳ್ಳಸಾಗಣೆ ತಡೆ ಘಟಕ ಸ್ಥಾಪಿಸುವ ಮೂಲಕ ಇಂತಹ ಕೃತ್ಯವನ್ನ ತಡೆಯಬೇಕು ಎಂದು ಕರೆ ನೀಡಿದೆ. ಪೊಲೀಸರು, ಬಿಎಸ್‌ಎಫ್‌ ಯೋಧರು, ಮಹಿಳಾ ಮತ್ತು ಕಲ್ಯಾಣ ಇಲಾಖೆ, ರೈಲ್ವೆ ಪೊಲೀಸ್‌ ಸೇರಿ ಎಲ್ಲರಿಗೂ ಸಂದೇಶ ರವಾನೆ ಮಾಡಲಾಗಿದ್ದು ಎಚ್ಚರಿಕೆಯಿಂದ ಇರಿ ಎಂದು ತಿಳಿಸಿದೆ. ಸದ್ಯ ದೇಶದಲ್ಲಿ ಕೊರೊನಾ ಸೋಂಕು ಹರಡಿದ್ದು ಇದು ದೇಶದ ಆರ್ಥಿಕತೆ ಮೇಲೆ ಭಾರಿ ದೊಡ್ಡ ಹೊಡೆತವನ್ನೇ ನೀಡಿದೆ. ಎಲ್ಲಾ ಜನಜೀವನಕ್ಕೂ ಇದರ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಇದನ್ನ ದುರಪಯೋಗಪಡಿಸಿಕೊಳ್ಳಲು ಮುಂದಾಗಿರುವ ಕೆಲವು ದುಷ್ಕರ್ಮಿಗಳು ಮಾನವ ಕಳ್ಳ ಸಾಗಣಿಕೆ ನಡೆಸುವ ಸಾಧ್ಯತೆ ಇದೆ ಎಂದು ಸಚಿವಾಲಯ ತಿಳಿಸಿದೆ.


from India & World News in Kannada | VK Polls https://ift.tt/3fVSCSe

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...