ಮೊದಲ ಬಾರಿ ರಾಜ್ಯಸಭೆಗೆ ಪ್ರವೇಶಿಸಿದ 36 ಮಂದಿ ಸೇರಿ ನೂತನ 45 ರಾಜ್ಯಸಭಾ ಸದಸ್ಯರಿಂದ ಪ್ರಮಾಣ!

ಹೊಸದಿಲ್ಲಿ: ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿಆಯ್ಕೆಯಾದ ನೂತನ 45 ಸದಸ್ಯರಿಗೆ ಉಪರಾಷ್ಟ್ರಪತಿ ಹಾಗೂ ಸಭಾಪತಿ ವೆಂಕಯ್ಯನಾಯ್ಡು ಅವರು ಬುಧವಾರ ಪ್ರಮಾಣವಚನ ಬೋಧಿಸಿದರು. 46 ಸದಸ್ಯರ ಪೈಕಿ 36 ಮಂದಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದಾರೆ. ಈ ಪೈಕಿ ಕಾಂಗ್ರೆಸ್‌ ಪಾಳಯ ತೊರೆದು ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಮುಖರು. ಮಧ್ಯಪ್ರದೇಶದಿಂದ ಆಯ್ಕೆಯಾದ ಸಿಂಧಿಯಾ ಅವರು ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಹಿರಿಯ ಕಾಂಗ್ರೆಸ್ಸಿಗರಾದ ಖರ್ಗೆ ಮತ್ತು ದಿಗ್ವಿಜಯ್‌ ಅವರಿಗೆ ಶುಭಾಶಯ ಕೋರಿದ್ದು ಗಮನ ಸೆಳೆಯಿತು. ಅವರು ರಾಜ್ಯಸಭೆ ಪ್ರತಿಪಕ್ಷ ನಾಯಕ ಹಾಗೂ ಸೋನಿಯಾ ಗಾಂಧಿ ಅವರ ಆಪ್ತರಾದ ಗುಲಾಂ ನಬಿ ಆಜಾದ್‌ ಅವರೊಂದಿಗೂ ಕುಶಲೋಪರಿ ನಡೆಸಿದರು. ಇನ್ನು 12 ಮಂದಿ ಸದಸ್ಯರು ಮರು ಆಯ್ಕೆಯಾಗಿದ್ದು ಆ ಪೈಕಿ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌, ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌, ಕೇಂದ್ರ ಸಚಿವ ರಾಮದಾಸ್‌ ಅಠಾವಳೆ ಪ್ರಮುಖರಾಗಿದ್ದಾರೆ. ಏತನ್ಮಧ್ಯೆ ಮೇಲ್ಮನೆ ಪ್ರವೇಶಿಸಿದ ಬಿಜೆಪಿ ನೂತನ ಸದಸ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಒಂದು ಗಂಟೆ ಅವಧಿ ಸಂವಾದ ನಡೆಸಿದರು. ಸದನದ ಸದಸ್ಯರಾಗಿ ಆದರ್ಶ ನಡೆ ಅನುಸರಿಸುವಂತೆ ಕಿವಿ ಮಾತು ಹೇಳಿದರು. ಘನತೆಗೆ ಧಕ್ಕೆ ಬೇಡ, ನಿಯಮ ಪಾಲಿಸಿ ! ''ಕಲಾಪಗಳಲ್ಲಿಶಿಸ್ತು ಪಾಲನೆ ಬಹಳ ಮುಖ್ಯ, ನಿಮ್ಮ ಯಾವುದೇ ವರ್ತನೆ ರಾಜ್ಯಸಭೆಯ ಘನತೆಗೆ ಧಕ್ಕೆ ತರದಂತೆ ಎಚ್ಚರಿಕೆ ವಹಿಸಿರಿ,'' ಎಂದು ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ.


from India & World News in Kannada | VK Polls https://ift.tt/3jvyxEq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...