ಮಕ್ಕಳಿಗೆ ಫೋನ್‌ ಕೊಡಿಸಲು ಹಸುಮಾರಿದ ರೈತನೆಗೆ ಸೋನು ಸೂದ್‌ ನೆರವು!

ಮುಂಬಯಿ: ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರ ನೋವಿಗೆ ಸ್ಪಂದಿಸುವ ಮೂಲಕ ಸಮಸ್ತ ಭಾರತೀಯರ ಮನಗೆದ್ದಿರುವ ಬಾಲಿವುಡ್‌ ನಟ , ಈಗ ತನ್ನ ಹೆಣ್ಣು ಮಕ್ಕಳ ಆನ್‌ಲೈನ್‌ ಶಿಕ್ಷಣಕ್ಕಾಗಿ ಮೊಬೈಲ್‌ ಕೊಳ್ಳುವುದಕ್ಕಾಗಿ ಸಾಕಿದ ಹಸುವನ್ನೇ ಮಾರಿದ ರೈತನಿಗೂ ಸಹಾಯ ಹಸ್ತ ಚಾಚಿದ್ದಾರೆ. ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಗಮ್ಮರ್‌ ಗ್ರಾಮದ ಕುಲ್ದೀಪ್‌ ಕುಮಾರ್‌ ಎಂಬವರೇ ಹಸು ಮಾರಿದವರು. ತನ್ನ ಹೆಣ್ಣು ಮಕ್ಕಳಾದ ನಾಲ್ಕು ಹಾಗೂ ಆರನೇ ತರಗತಿಯಲ್ಲಿ ಕಲಿಯುತ್ತಿರುವ ಅನು, ವಂಶ ಅವರ ಆನ್‌ಲೈನ್‌ ಶಿಕ್ಷಣಕ್ಕಾಗಿ ಮೊಬೈಲ್‌ ಬೇಕಾಗಿದ್ದರೂ ಖರೀದಿ ಮಾಡಲು ಅವರಲ್ಲಿ ಶಕ್ತಿ ಇರಲಿಲ್ಲ. ಸ್ಥಳೀಯ ಹಣಕಾಸು ಸಂಸ್ಥೆಯಲ್ಲಿ ಆರು ಸಾವಿರ ರೂಪಾಯಿ ಹೊಂದಲು ಅಲೆದಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಅನ್ಯ ದಾರಿ ಕಾಣದ ಅವರು ತಾನು ಸಾಕಿದ ಹಸುವನ್ನೇ ಮಾರಿ ಮಕ್ಕಳಿಗೆ ಮೊಬೈಲ್‌ ಖರೀದಿಸಿ ಕೊಟ್ಟಿದ್ದರು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಅದಕ್ಕೆ ಸ್ಪಂದಿಸಿರುವ ಸೂದ್‌, ''ರೈತನ ಸಂಪರ್ಕ ವಿವರ ಇದ್ದರೆ ಕೊಡಿ. ಅವರಿಗೆ ಹಸುವನ್ನು ವಾಪಸ್‌ ಕೊಡಿಸುವ ಜತೆಗೆ ಸಹಾಯ ಮಾಡಬೇಕಿದೆ,'' ಎಂದು ಬರೆದುಕೊಂಡಿದ್ದಾರೆ. ಲಾಕ್‌ಡೌನ್ ವೇಳೆಯಲ್ಲಿ ಅನೇಕ ವಲಸೆ ಕಾರ್ಮಿಕರಿಗೆ ಬಸ್‌ ವ್ಯವಸ್ಥೆ ಮಾಡಿ ಅವರನ್ನ ಊರಿಗೆ ಕಳುಹಿಸಿದ್ದರು ಸೋನು ಸೂದ್. ಅಲ್ಲದೆ ಅನೇಕ ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಇದರಿಂದಾಗಿ ಸೂನು ನಿಜವಾದ ಹೀರೋ ಎಂದು ಇಡೀ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.


from India & World News in Kannada | VK Polls https://ift.tt/3hyTpZt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...