ನಾಡಿಗೆ ದೊಡ್ಡ ಹಬ್ಬವೆಂದೇ ಖ್ಯಾತಿ ಪಡೆದ ಶನಿವಾರವಾದ ಇಂದು ನಡೆಯುತ್ತಿದ್ದು, ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇನ್ನು ಹಲವು ದೇವಾಲಯಗಳಲ್ಲಿ ನಾಗರಪಂಚಮಿ ದಿನದಂದು ಭಕ್ತಾದಿಗಳಿಗೆ ಭೇಟಿಯನ್ನು ನಿರ್ಬಂಧಿಲಾಗಿದೆ. ನಾಗರಪಂಚಮಿಯ ಶುಭ ದಿನದಂದು ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿಎಸ್ ವೈ, ಸಂಸದೆ , ಸೇರಿ ಹಲವು ಗಣ್ಯರು ಶುಭಕೋರಿದ್ದಾರೆ. ಮುಖ್ಯಮಂತ್ರಿ ಟ್ವೀಟ್ ಮಾಡಿ, " ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಕಾಮನೆಗಳು. ದೇವರು ಎಲ್ಲ ದುರಿತಗಳನ್ನು ಪರಿಹರಿಸಿ, ಎಲ್ಲರಿಗೂ ಸುಖ, ಸಂತೋಷ, ನೆಮ್ಮದಿ, ಆರೋಗ್ಯಗಳನ್ನು ಕರುಣಿಸಲಿ, ನಾಡಿಗೆ ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸೋಣ. ಮನೆಗಳಲ್ಲಿಯೇ ದೇವರನ್ನು ಪ್ರಾರ್ಥಿಸಿ, ಸಾಮಾಜಿಕ ಅಂತರ ಸೇರಿದಂತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯ ಪಾಲಿಸಿ." ಎಂದು ಬರೆದುಕೊಂಡಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಟ್ವೀಟ್ ಮಾಡಿ" ಜಗತ್ತಿಗೆ ಆವರಿಸಿರುವಂತಹ ಕೊರೋನಾ ಮಹಾಮಾರಿಯನ್ನು ಪರಿಹರಿಸಿ, ಎಲ್ಲರಿಗೂ ಸುಖ-ಸಂತೋಷವನ್ನು ನೀಡಿ ದೇವರು ಹರಸಲಿ ಎಂದು ಪ್ರಾರ್ಥನೆ. ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಕಾಮನೆಗಳು." ಎಂದಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿ ನಾಡಿನ ಜನತೆಗೆ ಶುಭಾಶಯ ಸಲ್ಲಿಸಿದ್ದಾರೆ. "ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಗಾರಾಧನೆಗೆ ಅತ್ಯಂತ ಪವಿತ್ರ ದಿನವಾದ ಇಂದು ನಾಗದೇವತೆಗಳ ಅನುಗ್ರಹದಿಂದ ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ." ಎಂದು ಬರದುಕೊಂಡಿದ್ದಾರೆ.
from India & World News in Kannada | VK Polls https://ift.tt/3jFGc39