ಲೋನ್‌ ಪಡೆಯಲು ಹೋದ ಚಹಾ ವ್ಯಾಪಾರಿಗೆ ಶಾಕ್‌ ಕೊಟ್ಟ ಬ್ಯಾಂಕ್‌, ಹಳೆಯ 50 ಕೋಟಿ ಬಾಕಿ ಕಟ್ಟಿ ಎಂದ ಅಧಿಕಾರಿ!

ಕುರುಕ್ಷೇತ್ರ: ಟೀ ಸೇಲ್‌ ಮಾಡುತ್ತ ದಿನ ನಿತ್ಯ ಬಿಡಿಗಾಸು ಸಂಪಾದಿಸುತ್ತಿದ್ದ ಕೋಟಿ ಹಣ ನೋಡಿರಬಹುದಾ? ಖಂಡಿತ ಇಲ್ಲ ಅನ್ನೋದು ಎಲ್ಲರಿಗೂ ಗೊತ್ತೆ ಇದೆ. ಇಂತಹ ವ್ಯಾಪಾರಿಗೆ ಒಂದೇ ಬಾರಿ ಕೋಟಿ ಅದರಲ್ಲೂ ಐವತ್ತು ಕೋಟಿ ಬ್ಯಾಂಕಿಗೆ ಕಟ್ಟು ಅಂದರೆ ಏನು ಮಾಡುತ್ತಾನೆ ಹೇಳಿ? ಇಂತಹದೊಂದು ಸ್ವಾರಸ್ಯಕರ ಘಟನೆ ಹರಿಯಾಣದಲ್ಲಿ ನಡೆದಿದೆ. ಚಹಾ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಕುರುಕ್ಷೇತ್ರದ ರಾಜಕುಮಾರ್‌ ಎಂಬಾತನಿಗೆ ಬ್ಯಾಂಕೊಂದು ಐವತ್ತೊಂದು ಕೋಟಿ ಕಟ್ಟುವಂತೆ ಹೇಳಿದೆ. ಹೌದು, ರಾಜಕುಮಾರ್‌ ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ಸಂಫೂರ್ಣವಾಗಿ ನಷ್ಟ ಅನುಭವಿಸಿದ್ದರಂತೆ. ಹೀಗಾಗಿ ಬ್ಯಾಂಕ್‌ನಿಂದ ಸ್ವಲ್ಪ ಹಣ ಸಾಲ ಪಡೆಯಲು ತೆರಳಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ವಿಚಾರಿಸಿದ್ದಾರೆ. ಆದರೆ ಆತನ ಬ್ಯಾಂಕ್‌ ಖಾತೆ ಪರಿಶೀಲಿಸಿದ ಬ್ಯಾಂಕ್‌ ಅಧಿಕಾರಿ, ನೀವು ಈ ಹಿಂದೆ ತೆಗೆದುಕೊಂಡ 50 ಕೋಟಿ ಸಾಲವನ್ನ ಮೊದಲು ಮರುಪಾವತಿ ಮಾಡಿ ಎಂದು ಹೇಳಿ ಸಾಲದ ನಿವೇದನೆಯನ್ನ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಜಕುಮಾರ್‌, ತಾನು ಸಾಲವೇ ತೆಗೆದುಕೊಂಡಿಲ್ಲ, ಇದು ಹೇಗೆ ಆಗಿದೆ ಎಂದು ತಿಳಿದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ಆತನ ಅಂಗಡಿಯಲ್ಲೇ ಕೂತು ಚಹಾ ಕುಡಿಯುತ್ತ ಅನೇಕರು ಚರ್ಚೆ ನಡೆಸುತ್ತಿದ್ದಾರೆ.


from India & World News in Kannada | VK Polls https://ift.tt/2WNemZ0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...