ದೇಶದಲ್ಲಿ ಕೊರೊನಾದ ಮತ್ತೊಂದು ದಾಖಲೆ: ಒಂದೇ ದಿನದಲ್ಲಿ 45,720 ಮಂದಿಗೆ ಪಾಸಿಟಿವ್‌, 1,129 ಸಾವು!

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ 45 ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್‌ ಪತ್ತೆಯಾಗಿದೆ. ಹೌದು, ಈವರೆಗೆ ಮೂವತ್ತು ಸಾವಿರದ ಗಡಿ ದಾಟಿದ್ದ ಕೊರೊನಾ ಇದೀಗ ಒಂದೇ ದಿನದಲ್ಲಿ 45,720 ಮಂದಿಗೆ ವಕ್ಕರಿಸಿ ಆತಂಕ ಮೂಡಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು 12,38,635 ಕೊರೊನಾ ಪ್ರಕರಣ ಈ ವರೆಗೆ ದೃಢಪಟ್ಟಂತಾಗಿದೆ. ಅಲ್ಲದೇ ಒಂದೇ ದಿನದಲ್ಲಿ 1,129 ಮಂದಿ ಕೊರೊನಾಗೆ ಬಲಿಯಾಗುವ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸಾವಿನ ಸಂಖ್ಯೆ 29,861ಕ್ಕೆ ಏರಿಕೆಯಾಗಿದೆ. ಇನ್ನು ಕೊಂಚ ನಿರಾತಂಕದ ಸುದ್ದಿಯೆಂದರೆ ದೇಶದಲ್ಲಿ ಬುಧವಾರ ಒಂದೇ ದಿನ 29,557 ಮಂದಿ ಕೊರೊನಾದಿಂದ ಗುಣಮುಖರಾಗಿ ತೆರಳಿದ್ದಾರೆ. ಈ ಮೂಲಕ ಒಟ್ಟು 7,82,606 ಮಂದಿ ಒಟ್ಟು ದೇಶದಲ್ಲಿ ಗುಣಮುಖರಾಗಿದ್ದಾರೆ. ಇನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಈವರೆಗೆ ದೇಶದಲ್ಲಿ ಒಟ್ಟು 1.51 ಕೋಟಿ ಜನರನ್ನ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದೆ. ಬುಧವಾರ ಒಂದೇ ದಿನ 6.23 ಲಕ್ಷ ಮಂದಿಯ ಸ್ಯಾಂಪಲ್‌ ತೆಗೆದುಕೊಂಡು ಪರೀಕ್ಚೆ ನಡೆಸಲಾಗಿದೆ. ಇನ್ನು ಜಗತ್ತಿನಲ್ಲಿ ಕೊರೊನಾದ ರುದ್ರ ತಾಂಡವ ಮುಂದುವರಿದಿದ್ದು ಒಟ್ಟು 1.51 ಮಂದಿಗೆ ಕೊರೊನಾ ವಕ್ಕರಿಸಿದೆ. 6.23 ಮಂದಿ ಈ ವರೆಗೆ ವಿಶ್ವದಾದ್ಯಂತ ಸಾವನಪ್ಪಿದ್ದಾರೆ.


from India & World News in Kannada | VK Polls https://ift.tt/3eQkmGf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...