ಕೊರೊನಾ ಎಫೆಕ್ಟ್: ಮಂತ್ರಾಲಯದಲ್ಲಿ ಆ.2ರಿಂದ ಸಂಪ್ರಾದಾಯಿಕ ಸಪ್ತರಾತ್ರೋತ್ಸವ!

ರಾಯಚೂರು: ಕೊರೊನಾ ಬಿಸಿ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ 345ನೇ ಆರಾಧನಾ ಮಹೋತ್ಸವಕ್ಕೂ ತಟ್ಟಿದೆ. ದಿನದಿಂದ ದಿನಕ್ಕೆ ಕೊರೊನಾ ಉಲ್ಭಣಿಸುತ್ತಿರುವ ಹಿನ್ನೆಲೆ ಶ್ರೀರಾಘವೇಂದ್ರಸ್ವಾಮಿಗಳ 345ನೇ ಆರಾಧನಾ ಮಹೋತ್ಸವದ ಅಂಗವಾಗಿ ಆ.2ರಿಂದ 8ರವರೆಗೆ ಸಪ್ತರಾತ್ರೋತ್ಸವ ಆಯೋಜಿಸಲಾಗಿದ್ದು ಸಂಪ್ರಾದಾಯಕವಾಗಿ ನಡೆಯಲಿದೆ. ಪ್ರತೀ ವರ್ಷ ವೈಭವದಿಂದ ನಡೆಯುವ ಆರಾಧನಾ ಮಹೋತ್ಸವ ಈ ಬಾರಿ ಸರಳ ಹಾಗೂ ಸಂಪ್ರಾದಾಯಕವಾಗಿ ನಡೆಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಶ್ರೀ ಮಠದ ಒಳಾಂಗಣದಲ್ಲಿ ಸಂಪ್ರಾದಾಯ ಬದ್ಧವಾಗಿ ಉತ್ಸವ ನಡೆಯಲಿದೆ. ಐವತ್ತು ಮಂದಿಯೊಂದಿಗೆ ಈ ಬಾರಿಯ ಸಪ್ತ ರಾತ್ರೋತ್ಸವ ಸರಳವಾಗಿ ನಡೆಯಲಿದೆ ಎಂದು ಶ್ರೀ ಮಠ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ. ಅಲ್ಲದೇ ಗುರು ರಾಘವೇಂದ್ರ ರಾಯರ ಆರಾಧನಾ ಸಮಯದಲ್ಲಿ ಭಕ್ತರು ತಾವು ಇರುವ ಸ್ಥಳದಿಂದಲೆ ರಾಯರ ಸ್ಮರಣೆ, ಭಜನೆ, ಪ್ರಾರ್ಥನೆ, ಪ್ರವಚನ ಇತ್ಯಾದಿ ಮಾಡುವಂತೆ ಮನವಿ ಮಾಡಲಾಗಿದೆ. ಇನ್ನು ಆರಾಧನಾ ಸಪ್ತ ರಾತ್ರೋತ್ಸವ ಅಂಗವಾಗಿ ನಡೆಯುವ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು, ವಿಶೇಷ ಉತ್ಸವ, ಪ್ರವಚನ ಇತ್ಯಾದಿ ಕಾರ್ಯಕ್ರಮಗಳನ್ನ ಮಠದ ಯೂಟ್ಯೂಬ್‌ ಚಾನೆಲ್‌ ಆದ ಮಂತ್ರಾಲಯವಾಹಿನಿ ಯಲ್ಲಿ ಪ್ರಸಾರವಾಗುತ್ತಿದ್ದು ಈ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಮನವಿ ಮಾಡಲಾಗಿದೆ. ಆರಾಧನಾ ಸಂಸ್ಮರಣೋತ್ಸವ!ಇನ್ನ ವೈಭವದ ಉತ್ಸವವಾದ ಆರಾಧನಾ ಮುಗಿದ ಬಳಿಕ ಕೊರೊನಾ ಸಂಪೂರ್ಣವಾಗಿ ತೊಲಗಿದ ನಂತರ ಆರಾಧನಾ ಸಂಸ್ಮರಣೋತ್ಸವ ಎಂಬ ಕಾರ್ಯಕ್ರವನ್ನ ಆಯೋಜಿಸಲಾಗುವುದು ಎಂದು ಮಠ ತಿಳಿಸಿದೆ. ಆಗ ಸಮಸ್ತ ಭಕ್ತರಿಗೆ ಆಹ್ವಾನ ನೀಡಲಾಗುವುದು ಎಂದುತಿಳಿಸಿದೆ. ಸದ್ಯ ಕೊರೊನಾದಿಂದಾಗಿ ಪ್ರಯಾಣ ಸಮಸ್ಯೆ ಇದೆ. ಅಲ್ಲದೇ ಮಂತ್ರಾಲಯದಲ್ಲಿ ಭಕ್ತರಿಗೆ ವಸತಿ ಹಾಗೂ ನಿರ್ವಹಣೆ ಸಮಸ್ಯಯಾಗುವ ಹಿನ್ನೆಲೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ.


from India & World News in Kannada | VK Polls https://ift.tt/3jvY3Jx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...