ಫಿಕ್ಸ್‌ ಆಯ್ತು ಐಪಿಎಲ್‌ ದಿನಾಂಕ : ಸೆ.19 ರಿಂದ ಆರಂಭ, ನ.8ಕ್ಕೆ ಫೈನಲ್‌..!

ಬೆಂಗಳೂರು: ಬಹುನಿರೀಕ್ಷಿತ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 2020ರ 13ನೇ ಆವೃತ್ತಿಯು ಯುಇಎನಲ್ಲಿ ಸೆಪ್ಟೆಂಬರ್‌ 19 ರಂದು ಆರಂಭಗೊಂಡು ನವೆಂಬರ್‌ 8ರಂದು ಪೈನಲ್‌ ಪಂದ್ಯದ ಮೂಲಕ ಅಂತ್ಯಗೊಳ್ಳಲಿದೆ ಎಂದು ಐಪಿಎಲ್‌ ಮುಖ್ಯಸ್ಥ ಪಿಟಿಐಗೆ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮುಂದಿನ ವಾರ ಐಪಿಎಲ್‌ ಆಡಳಿತ ಮಂಡಳಿ ಸಭೆ ಸೇರಲಿದ್ದು, ಅಂಗಣದಲ್ಲಿ ಪೂರ್ಣ ಪ್ರಮಾಣದ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿ ಆಯೋಜನೆಯ ಬಗ್ಗೆ ಚರ್ಚೆ ನಡೆಸಿ, ಐಪಿಎಲ್‌ನ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. "ಐಪಿಎಲ್‌ ಆಡಳಿತ ಮಂಡಳಿಯ ಸಭೆ ಶೀಘ್ರದಲ್ಲೇ ನಡೆಯಲಿದೆ. ಸೆಪ್ಟೆಂಬರ್‌ 19 ರಿಂದ ನವೆಂಬರ್‌ 8ವರೆಗೆ ನಡೆಯುವ ಐಪಿಎಲ್‌ ಟೂರ್ನಿಯ ಅಂತಿಮ ವೇಳಾಪಟ್ಟಿ ಈಗಾಗಲೇ ಅಂತಿಮಗೊಳಿಸಲಾಗಿದೆ. ಸರ್ಕಾರ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಲಿದೆ ಎಂದು ಭಾವಿಸಿದ್ದೇನೆ. 51 ದಿನಗಳ ಪೂರ್ಣ ಪ್ರಮಾಣದ ಐಪಿಎಲ್‌ ಟೂರ್ನಿ ಇದಾಗಿದೆ.," ಎಂದು ಬ್ರಿಜೇಶ್‌ ಪಟೇಲ್‌ ಟೂರ್ನಿಯ ದಿನಾಂಕದ ಬಗ್ಗೆ ಪಿಟಿಐಗೆ ಸ್ಪಷ್ಟಪಡಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಕಳೆದ ಸೋಮವಾರ ಮಹತ್ವದ ಸಭೆ ನಡೆಸಿ ಇದೇ ವರ್ಷ ನಡೆಯಬೇಕಿದ್ದ ವಿಶ್ವಕಪ್‌ ಟೂರ್ನಿಯನ್ನು ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ 2022ಕ್ಕೆ ಅಧಿಕೃತವಾಗಿ ಮುಂದೂಡಿದೆ. ಇದರ ಬೆನ್ನಲ್ಲೇ ಟೂರ್ನಿ ಆಯೋಜನೆ ಹಾದಿ ಸುಗಮವಾಗಿತ್ತು. ಕೋವಿಡ್-19 ಸೋಂಕನ್ನು ನಿಯಂತ್ರಿಸಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನದ ಬಗ್ಗೆ ತಯಾರಿ ನಡೆಸಲಾಗುತ್ತಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿಗೆ ಪತ್ರವನ್ನು ಬರೆದಿದೆ. "ಕೋವಿಡ್‌ -19 ಸಾಂಕ್ರಾಮಿಕ ರೋಗದ ಮುಂಜಾಗ್ರತ ಕ್ರಮವಾಗಿ ಇನ್ನು ಕೆಲವೇ ದಿನಗಳಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನವನ್ನು ಸಿದ್ದವಾಗಲಿದೆ. ಪಂದ್ಯದ ವೀಕ್ಷಣೆಗೆ ಅಭಿಮಾನಿಗಳಿಗೆ ಅವಕಾಶ ನೀಡಬೇಕೆ? ಅಥವಾ ಇಲ್ಲವೇ? ಎಂಬುದು ಯುಎಇ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುವುದು. ಈ ಎಲ್ಲ ಸಂಗತಿಗಳ ಬಗ್ಗೆ ಔಪಚಾರಿಕವಾಗಿ ಯುಎಇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ," ಎಂದು ಬ್ರಿಜೇಶ್‌ ಪಟೇಲ್‌ ತಿಳಿಸಿದರು. ಯುಎಇನಲ್ಲಿ ಐಪಿಎಲ್‌ ಟೂರ್ನಿಗೆ ಮೂರು ಅಂಗಳಗಳು ಲಭ್ಯವಾಗಿವೆ. ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣ, ಶೇಖ್‌ ಝಯೀದ್‌ ಕ್ರೀಡಾಂಗಣ ಹಾಗೂ ಶಾರ್ಜಾ ಕ್ರೀಡಾಂಗಣ. ತಂಡಗಳ ಅಭ್ಯಾಸಕ್ಕಾಗಿ ಐಸಿಸಿ ಅಕಾಡೆಮಿಯ ಮೈದಾನಗಳನ್ನು ಬಿಸಿಸಿಐ ಬಾಡಿಗೆಗೆ ತೆಗದುಕೊಂಡಿದೆ. ಐಸಿಸಿ ಅಕಾಡೆಮಿಯಲ್ಲಿ ಎರಡು ದೊಡ್ಡ ಗಾತ್ರದ ಅಂಗಳಗಳಿವೆ. ಇದರಲ್ಲಿ 38 ಟರ್ಫ್‌ ಪಿಚ್‌ಗಳು, 6 ಒಳಾಂಗಣ ಪಿಚ್‌ಗಳು, ಇನ್ನುಳಿದಂತೆ 5700 ಅಡಿಗಳ ಹೊರಾಂಗಣ ಫಿಜಿಯೋಥೆರಪಿ ಹಾಗೂ ವೈದ್ಯಕೀಯ ಸೌಲಭ್ಯಕ್ಕೆ ಬಳಸಲಾಗುತ್ತದೆ. ಎಲ್ಲಾ ತಂಡಗಳು ಒಂದು ತಿಂಗಳು ತರಬೇತಿ ಮಾಡುವ ಅಗತ್ಯವಿರುವುದರಿಂದ ಆಗಸ್ಟ್ 20 ರಂದೇ ಎಲ್ಲಾ ಫ್ರಾಂಚೈಸಿ ಆಟಗಾರರು ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ. ಟೂರ್ನಿ ಪೂರ್ವ ತಯಾರಿ ನಡೆಸಲು ಎಲ್ಲಾ ತಂಡಗಳಿಗೂ ಕನಿಷ್ಠ 4 ವಾರಗಳ ಅವಧಿ ಅಗತ್ಯವಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3hydn6Q

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...