ವಾಸ್ತವಿಕತೆ ಮಾತನಾಡಿ: ಮೋದಿ 'ಕ್ಯಾಂಡಲ್ ಲೈಟ್' ಮನವಿ ತೆಗಳಿದ ವಿಪಕ್ಷಗಳು!

ನವದೆಹಲಿ: ಲಾಕ್‌ಡೌನ್‌ನ್ನು ಶಿಕ್ಷೆಯನ್ನಾಗಿ ಪರಿಗಣಿಸದೇ ಒಗ್ಗಟ್ಟು ಪ್ರದರ್ಶನಕ್ಕೆ ದೊರೆತ ಅವಕಾಶವನ್ನಾಗಿ ಪರಿಗಣಿಸುವಂತೆ ಪ್ರಧಾನಿ ಮೋದಿ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ಏ.5(ಭಾನುವಾರ) ರಾತ್ರಿ 9 ಗಂಟೆಗೆ ಎಲ್ಲರೂ 9 ನಿಮಿಷಗಳ ಕಾಲ ಮೇಣದ ಬತ್ತಿ ದೀಪ, ತುಪ್ಪದ ದೀಪ, ಎಳ್ಳಿನ ದೀಪ ಅಥವಾ ಮೊಬೈಲ್ ಟಾರ್ಚ್ ಹಚ್ಚುವ ಮೂಲಕ ಒಗ್ಗಟ್ಟು ಪ್ರದರ್ಶನ ತೋರುವಂತೆ ಪ್ರಧಾನಿ ಮೋದಿ ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಆದರೆ ಪ್ರಧಾನಿ ಮೋದಿ ಅವರ ಈ ಕರೆಯನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸಿವೆ. ಕೊರೊನಾ ವೈರಸ್ ಕುರಿತು ವಾಸ್ತವಿಕ ಅಂಶಗಳನ್ನು ತಿಳಿಸುವ ಬದಲು ಪ್ರಧಾನಿ ಮೋದಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ನಾಯಕರು ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, 'ಪ್ರಧಾನ್ ಶೋಮ್ಯಾನ್'(ಪ್ರಧಾನಿ ಮೋದಿ) ಅವರ ವಿಡಿಯೋ ಸಂದೇಶದಲ್ಲಿ ಏನೂ ಹೊಸದಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಲಾಕ್‌ಡೌನ್‌ನಿಂದಾಗಿ ಜನರು ಪರದಾಡುತ್ತಿದ್ದು, ವಲಸೆ ಕಾರ್ಮಿಕರು ಮನೆ ತಲುಪಲು ಹೆಣಗುತ್ತಿದ್ದಾರೆ. ಆದರೆ ಇದ್ಯಾವುದರ ಕುರಿತು ಪ್ರಸ್ತಾಪವನ್ನೇ ಮಾಡಿರದ ಪ್ರಧಾನಿ, ಕೇವಲ ದೀಪ ಬೆಳಗಿರಿ ಎಂದು ಹೇಳುವ ಮೂಲಕ ಜನರನ್ನು ವಾಸ್ತವಿಕತೆಯಿಂದ ದೂರ ತಳ್ಳುತ್ತಿದ್ದಾರೆ ಎಂದು ತರೂರ್ ಆರೋಪಿಸಿದ್ದಾರೆ. ಅದರಂತೆ ಪ್ರಧಾನಿ ಮೋದಿ ಕರೆಯನ್ನು ಟೀಕಿಸಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ, ದೇಶದ ಪ್ರಧಾನಿ ವಾಸ್ತವಿಕತೆ ಕುರಿತು ಮಾತನಾಡಬೇಕೇ ಹೊರತು ಹೀಗೆ ಜನರನ್ನು ಮೂರ್ಖ ಮಾಡಲು ಮುಂದಾಗಬಾರದು ಎಂದು ಹರಿಹಾಯ್ದಿದ್ದಾರೆ. ಕೂಡಲೇ ಮಾರಕ ವೈರಾಣುವಿನ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ಜನರಿಗೆ ಮಾಹಿತಿ ನೀಡಿ ಎಂದು ಮೊಯಿತ್ರಾ ಒತ್ತಾಯಿಸಿದ್ದಾರೆ. ಇನ್ನು ಮೋದಿ ಮನವಿಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ನಾವು ನಿಮ್ಮ ಮನವಿಯಂತೆ ಏ.5ರಂದು ದೀಪ ಉರಿಸುತ್ತೇವೆ ಅದಕ್ಕೆ ಪ್ರತಿಯಾಗಿ ನೀವು ನಮ್ಮ ಹಾಗೂ ಈ ದೇಶದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಮಾತನ್ನೂ ಕೇಳಿ ಎಂದು ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಪ್ರಧಾನಿ ವಾಸ್ತವಿಕತೆ ಕುರಿತು ಮಾತನಾಡಬೇಕು ಎಂದು ಪ್ರತಿಪಕ್ಷ ನಾಯಕರು ಒತ್ತಾಯಿಸಿದ್ದಾರೆ.


from India & World News in Kannada | VK Polls https://ift.tt/2X6kQTK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...