
ಮೈಸೂರು: ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆ ಸೋಂಕಿತರ ವಿಚಾರವಾಗಿ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಆತಂಕಕಾರಿ ಮಾಹಿತಿ ಹೊರಹಾಕಿದ್ದಾರೆ. ಸೋಂಕಿತರ ಸಂಖ್ಯೆ ನೂರೂ ಆಗಬಹುದು, ಸಾವಿರವೂ ಆಗಬಹುದು ಎಂದು ಹೇಳಿದ್ದಾರೆ. ಕಾರ್ಖಾನೆ ನೌಕರರ ಪೈಕಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಹೊತ್ತಿನಲ್ಲೇ ಅಭಿರಾಮ್ ನೀಡಿರುವ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಸೋಂಕಿತರ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷೆ ಮಾಡಲೇಬೇಕಿದೆ. ಸೋಂಕಿತರೊಂದಿಗೆ ಪ್ರೈಮರಿ ಸಂಪರ್ಕ ಹೊಂದಿದ್ದ 223 ಜನರ ಸ್ಯಾಂಪಲ್ ಪರೀಕ್ಷೆ ಇನ್ನೂ ನಡೆಸಬೇಕಿದೆ. ಇದಲ್ಲದೆ ನಂಜನಗೂಡಿನ 19 ಕೇಸ್‌ಗಳ ಪ್ರೈಮರಿ ಸಂಪರ್ಕದ ಹುಡುಕಾಟ ಇನ್ನೂ ನಡೆಯುತ್ತಲೇ ಇದೆ. ಹೀಗಾಗಿ, ಸಂಖ್ಯೆ ನೂರೂ ಆಗಬಹುದು, ಸಾವಿರವೂ ಆಗಬಹುದು ಎಂದರು. ಒಂದು ಹಂತದಲ್ಲಿ ಎಲ್ಲರ ಸ್ಯಾಂಪಲ್ ಸಂಗ್ರಹಿಸಿದ ಬಳಿಕ ಈ ಸ್ಯಾಂಪಲ್‌ಗಳ ಪರೀಕ್ಷೆಯ ರಿಸಲ್ಟ್‌ಗಾಗಿ 12 ದಿನ ಕಾಯಬೇಕಿದೆ. ಇಲ್ಲವಾದಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಬೇಕಾಗುತ್ತದೆ. 12 ದಿನ ಕಳೆದ ಬಳಿಕವಷ್ಟೇ ಸೋಂಕಿನ ನಿಖರ ಮಾಹಿತಿ ತಿಳಿಯಲಿದೆ. ಪ್ರಕರಣದ ಇನ್ನೂ ನೂರಾರು ಸ್ಯಾಂಪಲ್ ಪರೀಕ್ಷೆ ಮಾಡಬೇಕಿದೆ. ಎಲ್ಲರ ವರದಿ ಬಂದ ನಂತರ ಮಾಹಿತಿ ನೀಡಲಿದ್ದೇವೆ ಎಂದು ಡಿಸಿ ವಿವರಿಸಿದ್ಧಾರೆ.
from India & World News in Kannada | VK Polls https://ift.tt/2ynhjpx