ತಬ್ಲಿಘಿ ಜಮಾತ್ ಕಾರ್ಯಕರ್ತರಿಗೆ ಲಾಡ್ಜ್‌ನಲ್ಲಿ ಕ್ವಾರೆಂಟೈನ್: ಜನರ ವಿರೋಧಕ್ಕೆ ಮೈಸೂರು ಡಿಸಿ ಗರಂ

ಮೈಸೂರು: ದಿಲ್ಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಜನರನ್ನು ನಗರದ ಹೋಟೆಲ್‌ ಒಂದರಲ್ಲಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜನರ ಈ ಮನಸ್ಥಿತಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಬೇಸರಗೊಂಡು ಗರಂ ಆಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಡ್ಜ್‌ಗಳಲ್ಲಿ ಕ್ವಾರೆಂಟೈನ್‌ಗೆ ಒಳಪಡಿಸಿರೋದನ್ನು ಜನರು ವಿರೋಧಿಸುತ್ತಿದ್ದಾರೆ. ಹಾಗಾದ್ರೆ, ನಮ್ಮ ಕಥೆ ಏನು..? ನಾವೇನು ಪಿಕ್‌ನಿಕ್‍ ಮಾಡಲು ಹೊರಗಡೆ ಓಡಾಡುತ್ತಿಲ್ಲ. ನಿಮ್ಮ ಪ್ರಾಣ ಉಳಿಸಲು ನಾವೆಲ್ಲರೂ ಹೊರಗಡೆ ಹೋರಾಡುತ್ತಿದ್ದೇವೆ. ಆಗುವವರಿಗೂ ಕುಟುಂಬ, ಮಕ್ಕಳಿದ್ದಾರೆ. ಅವರನ್ನು ಮಾನವೀಯತೆಯಿಂದ ನೋಡಿ ಎಂದು ತಿಳಿಸಿದರು. ಹೊರಗೆ ಇರುವವರು ಉದ್ದೇಶ ಪೂರ್ವಕವಾಗಿ ಇರುತ್ತಿಲ್ಲ. ಅದೇ ರೀತಿ ಬದುಕಬೇಕು ಎಂಬ ಆಸೆ ಇದ್ದವರು ಕ್ವಾರೆಂಟೈನ್ ಆಗುತ್ತಿದ್ದಾರೆ. ನಮ್ಮ ಜನರು ವಿರೋಧ ಮಾಡುವುದಕ್ಕೂ ಮುನ್ನ ಒಮ್ಮೆ ಯೋಚನೆ ಮಾಡಬೇಕು. ನಿಮಗಾಗಿ ನಾವು ಹೊರಗಿದ್ದು ಕೆಲಸ ಮಾಡುತ್ತಿದ್ದೇವೆ. ಅದನ್ನ ಅರ್ಥ ಮಾಡಿಕೊಂಡು ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡರು. ದೆಹಲಿ ನಿಜಾಮುದ್ದೀನ್ ಸಭೆಯಿಂದ ಬಂದಿದ್ದವರನ್ನು ಮೈಸೂರಿನ ವಸತಿ ಗೃಹದಲ್ಲಿರಿಸಿದ್ದ ಜಿಲ್ಲಾಡಳಿತದ ನಡೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕಾಗಿ ಕಳೆದ ರಾತ್ರಿ ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ಸಿಟ್ಟಾಗಿದ್ದರು. ಎಲ್ಲರನ್ನೂ ಬೇರೆಡ ಸ್ಥಳಾಂತರಿಸುವಂತೆ ಪಟ್ಟು ಹಿಡಿದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.


from India & World News in Kannada | VK Polls https://ift.tt/3487kR1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...