ಭೂಮಿಯ ಅತ್ಯಂತ ಸಮೀಪದಿಂದ ಹಾದು ಹೋಗಲಿದೆ ಫೇಸ್ ಮಾಸ್ಕ್ ಧರಿಸಿದಂತೆ ಕಾಣುವ ಕ್ಷುದ್ರಗ್ರಹ!

ಪೋರ್ಟೊ ರಿಕೊ: ಕೊರೊನಾ ವೈರಸ್ ಹಾವಳಿ ಮತ್ತು ಅದರಿಂದ ಪೃಥ್ವಿಯಲ್ಲಾದ ಬದಲಾವಣೆಗಳು ಎಲ್ಲರ ಗಮನಕ್ಕೂ ಬಂದಿರುತ್ತವೆ. ಲಾಕ್‌ಡೌನ್ ಪರಿಣಾಮವಾಗಿ ಶುದ್ಧಗಾಳಿಯ ಪ್ರಮಾಣದಲ್ಲಿ ಏರಿಕೆಯಾಗಿರುವುದು, ಪರಿಸರ ಸ್ವಚ್ಛತೆ ಹೀಗೆ ಭೂಮಿಯಲ್ಲಾಗಿರುವ ಬದಲಾವಣೆಗಳು ಎಲ್ಲರಿಗೂ ಗೊತ್ತು. ಆದರೆ ಕೊರೊನಾ ವೈರಸ್ ಕೇವಲ ಭೂಮಿಯಲ್ಲಷ್ಟೇ ಅಲ್ಲ, ಬ್ರಹಾಂಡದಲ್ಲೂ ಸದ್ದು ಮಾಡುತ್ತಿದೆ. ಬ್ರಹ್ಮಾಂಡದ ಗ್ರಹಕಾಯಗಳಲ್ಲಿ ಇದೀಗ ಕೊರೊನಾ ವೈರಸ್‌ ಸಂಬಂಧಿತ ವಸ್ತುಗಳ ಆಕಾರವನ್ನು ಮನುಷ್ಯ ಹುಡುಕಲಾರಂಭಿಸಿದ್ದಾನೆ. ಬ್ರಹ್ಮಾಂಡದ ಗ್ರಹಕಾಯಗಳಿಗೂ ಕೊರೊನಾ ವೈರಸ್‌ಗೂ ಏನು ಸಂಬಂಧ ಅಂತೀರಾ?.. ಕೆಲವು ಗ್ರಹಕಾಯಗಳ ಆಕಾರ ಇದೀಗ ಖಗೋಳಶಾಸ್ತ್ರಜ್ಞರ ಗಮನ ಸೆಳೆದಿದ್ದು, ಅದರಲ್ಲಿ ಮುಂದಿನ ವಾರ ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಲಿರುವ 52768 (1998 OR2) ಎಂಬ ಇದೀಗ ಭಾರೀ ಕುತೂಹಲ ಮೂಡಿಸಿದೆ. ಹೌದು, ಇದೇ ಏ.29ರಂದು 52768 (1998 OR2) ಕ್ಷುದ್ರಗ್ರಹ ಭೂಮಿಯಿಂದ ಕೇವಲ 3.9 ಮಿಲಿಯನ್ ಕಿ.ಮೀ ದೂರದಿಂದ ಹಾದು ಹೋಗಲಿದೆ. ಬರೋಬ್ಬರಿ 1.5 ಕಿ.ಮೀ ಸುತ್ತಳತೆ ಹೊಂದಿರುವ ಈ ಕ್ಷುದ್ರಗ್ರಹ ಮೌಂಟ್ ಎವರೆಸ್ಟ್‌ನ ಅರ್ಧದಷ್ಟು ಗಾತ್ರ ಹೊಂದಿದೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಪೋರ್ಟೊ ರಿಕೊದಲ್ಲಿನ ಅರೆಸಿಬೊ ಅಬ್ಸರ್ವೇಟರಿಯ ಖಗೋಳ ವಿಜ್ಞಾನಿಗಳು, 52768 (1998 OR2) ಕ್ಷುದ್ರಗ್ರಹದ ಆಕಾರ ಸದ್ಯ ವಿಶ್ವದಾದ್ಯಂತ ಮಾನವರು ಧರಿಸಿಕೊಳ್ಳುವ ಮುಖಗವುಸು() ರೀತಿಯಲ್ಲೇ ಇದೆ ಎಂದು ಹೇಳಿದ್ದಾರೆ. ಅರೆಸಿಬೊ ಅಬ್ಸರ್ವೇಟರಿಯ ರೆಡಾರ್‌ನಲ್ಲಿ ಸೆರೆಯಾಗಿರುವ 52768 (1998 OR2) ಕ್ಷುದ್ರಗ್ರಹ, ಕೊರೊನಾ ವೈರಸ್‌ ಸೋಂಕು ತಪ್ಪಸಿಕೊಳ್ಳಲು ಜನರು ಬಳಸುವ ಫೇಸ್ ಮಾಸ್ಕ್‌ನಂತಿರುವುದು ಅಚ್ಚರಿಗೆ ಕಾರಣವಾಗಿದೆ. ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಬ್ಸರ್ವೇಟರಿಯ ರೆಡಾರ್ ವಿಭಾಗದ ಮುಖ್ಯಸ್ಥ ಅನ್ನಿ ವಿರ್ಕಿ, 52768 (1998 OR2) ಕ್ಷುದ್ರಗ್ರಹದ ಅಂಚಿನಲ್ಲಿರುವ ಪರ್ವತಗಳ ಸ್ಥಳಾಕೃತಿ ಅತ್ಯಂತ ಆಕರ್ಷಣೀಯವಾಗಿದೆ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/2KIdDBX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...